ಕಾಬೂಲ್ ನಲ್ಲಿ ಆತ್ಮಹತ್ಯಾ ಬಾಂಬ್ ದಾಳಿ: 26 ಮಂದಿ ಸಾವು
ಕಾಬುಲ್, ಸೆಪ್ಟೆಂಬರ್ 07: ಅಫಘಾನಿಸ್ತಾನದ ಕಾಬೂಲ್ ನಲ್ಲಿ ನಿನ್ನೆ ನಡೆದ ಅವಳಿ ಬಾಂಬ್ ಸ್ಫೋಟದಲ್ಲಿ ಒಟ್ಟು 26 ಜನ ಮೃತರಾಗಿದ್ದಾರೆ.
ಮೊದಲ ಆತ್ಮಹತ್ಯಾ ಬಾಂಬ್ ದಾಳಿ ಅಫಘಾನಿಸ್ತಾನದ ಕಾಬೂಲ್ ನ ಮೊಲೆಮ್ ಕುಸ್ತಿ ಕ್ಲಬ್ ನಲ್ಲಿ ಸಂಭವಿಸಿದ್ದರೆ, ಎರಡನೆಯದು ಅದೇ ಸ್ಥಳದಿಂದ ಸ್ವಲ್ಪ ದೂರದಲ್ಲಿ ಕಾರ್ ಬಾಂಬ್ ಸ್ಫೋಟವಾಗಿದೆ.
ಈ ಘಟನೆಯಲ್ಲಿ 21 ನ ಮೃತರಾಗಿದ್ದರೆ, ಒಟ್ಟು 91 ಜನ ಗಾಯಗೊಂಡಿದ್ದಾರೆಂದು ಸಿರಿಯಾ ಆಂತರಿಕ ಸಚಿವಾಲಯ(MoI) ತಿಳಿಸಿದೆ. ಇಸ್ಲಾಮಿಕ್ ಸ್ಟೇಟ್ ಆಫ್ ಇರಾಖ್ ಅಂಡ್ ಸಿರಿಯಾ ಖುರಾಸನ್ ಈ ದಾಳಿಯ ಹೊಣೆ ಹೊತ್ತಿದೆ.

ತಾನು ಪತ್ರಕರ್ತರು ಮತ್ತು ಜನರ ಗುಂಪನ್ನು ಗುರಿಯಾಗಿಸಿಕೊಂಡು ಎರಡನೇ ಸ್ಫೋಟ ನಡೆಸಿದ್ದಾಗಿ ಅದು ಹೇಳಿಕೊಂಡಿದೆ.
ಈ ದಾಳಿಯನ್ನು ಅಫ್ಘಾನ್ ಅಧ್ಯಕ್ಷ ಪಲಾಸ್ ಖಂಡಿಸಿದ್ದಾರೆ. 'ಮಾನವೀಯತೆಯ ವಿರುದ್ಧದ ಅಪರಾಧ' ಎಂದು ಈ ಘಟನೆಯನ್ನು ಕಟು ಶಬ್ದಗಳಿಂದ ಅವರು ನಿಂದಿಸಿದ್ದಾರೆ.












Click it and Unblock the Notifications