ಈ ಸೌಲಭ್ಯಕ್ಕಾಗಿ 17 ಭಾರಿ ಗರ್ಭಧರಿಸಿದೆ ಎಂದ ಮಹಿಳೆಗೆ ಜೈಲು ಶಿಕ್ಷೆ: ಆಗಿದ್ದೇನು?
ಬೆಂಗಳೂರು, ಫೆಬ್ರವರಿ 19: ಮಹಿಳೆಯೊಬ್ಬರು ಸತತ ಗರ್ಭಧಾರಣೆಗೆ ಒಳಗಾಗಿದ್ದರು. ತನಗೆ 12 ಗರ್ಭಪಾತಗಳು ಮತ್ತು ಐದು ಮಕ್ಕಳಿದ್ದಾರೆ ಎಂದು ಹೇಳಿದ್ದ ಮಹಿಳೆ ಇದೀಗ ಜೈಲು ಪಾಲಾದ ಘಟನೆ ಇಟಲಿ ದೇಶದಲ್ಲಿ ನಡೆದಿದೆ. ಅಷ್ಟಕ್ಕೂ ಆಗಿದ್ದೇನು? ಎಂದು ತಿಳಿಯಲು ಮುಂದೆ ಓದಿ.
ಇಟಲಿಯಲ್ಲಿ ಮಹಿಳೆಯೊಬ್ಬರು ಕಳೆದ 24 ವರ್ಷಗಳ ಅವಧಿಯಲ್ಲಿ 17 ಬಾರಿ ಗರ್ಭಧಾರಣೆ ಆಗಿರುವುದಾಗಿ ತಿಳಿಸಿದ್ದಾರೆ. ಈ ಬಗ್ಗೆ ಮಾಹಿತಿ ಪತ್ತೆ ಮಾಡಿರುವ ಪೊಲೀಸರು ಸತ್ಯ ಬಯಲಾಗಿದೆ. ಹೀಗಾಗಿ ಆಕೆಗೆ ಜೈಲು ಶಿಕ್ಷೆ ವಿಧಿಸಲಾಗಿದೆ. ಮಹಿಳೆಗೆ 1 ವರ್ಷ 8 ತಿಂಗಳ ಜೈಲು ಶಿಕ್ಷೆ ವಿಧಿಸಲಾಗಿದೆ.

ಮೂಲಗಳ ಪ್ರಕಾರ, ಸುಮಾರು ಎರಡೂ ವರ್ಷ ದಶಕದಲ್ಲಿ ಇಟಾಲಿಯನ್ ಮಹಿಳೆ ತನಗೆ 12 ಗರ್ಭಪಾತಗಳು ಆಗಿವೆ. ನನಗೆ ಐದು ಮಕ್ಕಳಿದ್ದಾರೆ ಎಂದು ಈಕೆ ಸುಳ್ಳು ಹೇಳಿದ್ದರು. 17 ಬಾರಿ ಗರ್ಭಧಾರಣೆ ಆಗಿರುವುದಾಗಿ ಸುಳ್ಳು ಮಾಹಿತಿ ಕೊಟ್ಟಿದ್ದಳು. ಈ ಕುರಿತು ಮಾಹಿತಿ ಪತ್ತೆಗೆ ಇಳಿದ ಪೊಲೀಸರಿಗೆ ಶಾಕ್ ಕಾದಿತ್ತು.
ನೀಜ ಸಾಬೀತಾದ ಬಳಿಕ ಶಿಕ್ಷೆ
ಪೊಲೀಸರು ತನಿಖೆಗೆ ಇಳಿದರು. ಈ ಮಹಿಳೆಯು ಉದ್ಯೋಗಿಯಾಗಿದ್ದು, ತನ್ನ ಕೆಲಸದಿಂದ ಬಿಡುವು/ರಜೆ ಪಡೆಯಲು ಮತ್ತು ಸರ್ಕಾರ ನೀಡುವ ಹೆರಿಗೆ ಭತ್ಯೆಯಂತಹ ಮೆಟರ್ನಿಟಿ ಸೌಲಭ್ಯಗಳನ್ನು ಪಡೆಯಲು ಈ ರೀತಿ ಸುಳ್ಳು ಮಾಹಿತಿ ನೀಡಿದ್ದಾಗಿ ಪೊಲೀಸರು ಬಹಿರಂಗಪಡಿಸಿದ್ದಾರೆ. ಅಕ್ರಮ ಹಣ ಸಂಗ್ರಹಿಸಲು ಈಕೆ ಇಂತಹ ಹಾದಿ ಹಿಡಿದ್ದರು ಎಂಬುದು ಸಾಬೀತಾದ ಬಳಿಕ ಆಕೆಗೆ ಜೈಲು ಶಿಕ್ಷೆ ವಿಧಿಸಲಾಗಿದೆ ಎಂದು ವರದಿ ಆಗಿದೆ.
ಇಟಲಿಯ 50 ವರ್ಷ ವಯಸ್ಸಿನ 'ಬಾರ್ಬರಾ ಐಯೋಲೆ' ಎಂಬಾಕೆ ರಾಜ್ಯದ ಪ್ರಯೋಜನಗಳನ್ನು ಪಡೆಯುವ ಮೂಲಕ ಒಂದಷ್ಟು ಹಣ ಕೂಡಿಟ್ಟಿದ್ದರು. ಈ ಸಂಬಂಧ ಸುಳ್ಳು ಹೇಳಿದ್ದಳು ಎಂದು ಅಲ್ಲಿನ ಸ್ಥಳೀಯ ಪತ್ರಿಕೆ ಲಾ ರಿಪಬ್ಲಿಕಾ ವರದಿ ಮಾಡಿದೆ.

ಸುಳ್ಳು ವೈದ್ಯಕೀಯ ದಾಖಲೆ ನೀಡಿದ್ದ ವಂಚಕಿ
ಮಹಿಳೆ ದುರುದ್ದೇಶಪೂರ್ವಕ ಗರ್ಭಧಾರಣೆ ಆಗಿದ್ದಾಳೆ. ಅವಳಿಗೆ ಮಕ್ಕಳಿಲ್ಲದಿರುವುದು ಗೊತ್ತಾಗಿದೆ. ಯಾವ ರಾಜ್ಯದಲ್ಲಿಯೂ ಮಕ್ಕಳು ಸರ್ಕಾರಿ ಆಸ್ಪತ್ರೆ, ಶಾಲೆ ಇನ್ನಿತರ ಕಡೆಗಳಲ್ಲಿ ನೋಂದಾಯಿಲ್ಪಟ್ಟಿಲ್ಲ. ಅವರ ಮಕ್ಕಳನ್ನು ಯಾರು ಸಹ ನೋಡಿಲ್ಲ ಎಂಬುದಾಗಿ ನ್ಯಾಯಾಲಯಕ್ಕೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಔಟ್‌ಲೆಟ್ ಪ್ರಕಾರ, ಬಾರ್ಬರಾ ಅವರು ಈ ಸುಳ್ಳು ಹೆಣೆಯಲು ಸಹಕರಿಸಿದ 55 ವರ್ಷದ ಡೇವಿಡ್ ಪಿಜ್ಜಿನಾಟೊ ಅವರು ಪೊಲೀಸರಿಗೆ ತಪ್ಪೊಪ್ಪಿಕೊಂಡಿದ್ದಾರೆ. ಅವರು ಗರ್ಭಿಣಿಯಲ್ಲ ಎಂದು ತಿಳಿಸಿದ್ದಾರೆ. ಡೇವಿಡ್ ಪಿಜ್ಜಿನಾಟೊ ಅವರ ಸಹಾಯದಿಂದಲೇ ಈಕೆ ಈ ವಂಚನೆಯಲ್ಲಿ ಅಗತ್ಯ ದಾಖಲೆಗಳನ್ನು ಸಲ್ಲಿಸಿದ್ದಳು ಎಂಬುದು ಸಾಬೀತಾಗಿದೆ.
ಸಾಕ್ಷಿಯಾದ ಗೈರು ಹಾಜರಿಗಳು
ಗರ್ಭೀಣಿ ಮಹಿಳೆಯರಿಗೆ ಇಲ್ಲಿನ ರಾಜ್ಯ ಸರ್ಕಾರ ನೀಡುವ ಸೌಲಭ್ಯಗಳನ್ನು ಪಡೆದುಕೊಳ್ಳಲು ಈಕೆ ವೈದ್ಯಕೀಯ ಸುಳ್ಳು ದಾಖಲೆ ನೀಡಿದ್ದರು. ಇಟಾಲಿಯನ್ ಹೆಲ್ತ್ ಅಸಿಸ್ಟೆನ್ಸ್ (ASL) ಅನ್ನು ಈಕೆ ಮೋಸಗೊಳಿಸಿದ್ದಳು. ತಪ್ಪಿತಸ್ಥರ ಎಷ್ಟು ಬಾರಿ ಕೆಲಸದಿಂದ ರಜೆಯಲ್ಲಿದ್ದ ಎಂಬುದಕ್ಕೆ ಗೈರು ಹಾಜರಿಗಳು ಸಹ ಸಾಕ್ಷಿ ಒದಗಿಸಿದ್ದವು.
ಈಕೆಗೆ ಸಹಕರಿಸಿದ್ದಕ್ಕಾಗಿ ಪಿಜ್ಜಿನಾಟೊ ಐಯೋಲೆ ವಿರುದ್ಧ ಕಡಿಮೆಯ ಶಿಕ್ಷೆ ನೀಡಲಾಗಿದೆ. ಐಯೋಲೆ ವಿರುದ್ಧ ವಂಚನೆ ಆರೋಪ ಹೊರಿಸಲಾಗಿದೆ. 1 ವರ್ಷ ಮತ್ತು 8 ತಿಂಗಳ ಜೈಲು ಶಿಕ್ಷೆ ವಿಧಿಸಲಾಗಿದೆ ಎಂದು ಲಾ ರಿಪಬ್ಲಿಕಾವನ್ನು ಉಲ್ಲೇಖಿಸಿ ಕ್ಲಾರಿನ್ ವರದಿ ಮಾಡಿದೆ.












Click it and Unblock the Notifications