ವಿಡಿಯೋ; ಚಲಿಸುತ್ತಿದ್ದ ಕಾರಿನಿಂದ ಹೊರಬಿದ್ದ ಮಗು, ಮುಂದೆ?

ಚೀನಾದಿಂದ ಬೆಚ್ಚಿಬೀಳಿಸುವ ವಿಡಿಯೋವೊಂದು ಅಂತರ್ಜಾಲದಲ್ಲಿ ಹರಿದಾಡುತ್ತಿದೆ. ಇದು ಜನನಿಬಿಡ ರಸ್ತೆಯ ಟ್ರಾಫಿಕ್ ಜಂಕ್ಷನ್‌ನಲ್ಲಿ ಕಾರಿನ ಕಿಟಕಿಯಿಂದ ಅಂಬೆಗಾಲಿಡುವ ಮಗುವೊಂದನ್ನು ತೋರಿಸುತ್ತದೆ. ಸಿಗ್ನಲ್‌ ನಲ್ಲಿ ನಿಂತ ಕಾರಿನಿಂದ ನೋಡ ನೊಡುತ್ತಿದ್ದಂತೆ ಮಗು ಕಿಟಕಿಯಿಂದ ಹೊರಬೀಳುತ್ತದೆ. ಈ ಭಯ ಹುಟ್ಟಿಸುವ ವಿಡಿಯೋ ಚೀನಾದ ನಿಂಗ್ಬೊನದ್ದು ಎಂದು ಹೇಳಲಾಗಿದೆ. ಮತ್ತೊಂದು ಆಶ್ಚರ್ಯಕರ ಸಂಗತಿ ಅಂದರೆ, ಮಗು ಬಿದ್ದ ಕೂಡಲೇ ಕಾರು ನಿಂತಿಲ್ಲ. ಕಾರಿನಲ್ಲಿದ್ದವರು ಮಗು ಹೊರಬಿದ್ದಿರುವುದನ್ನು ಗಮನಿಸದೇ ಮುಂದೆ ಸಾಗಿರುವುದು ಕಂಡುಬಂದಿದೆ.

ಮಗುವನ್ನು ಎತ್ತಿಕೊಳ್ಳಲು ಚಾಲಕ ಕಾರನ್ನು ನಿಲ್ಲಿಸದಿರುವುದು ನಿಜಕ್ಕೂ ವಿಚಿತ್ರ. ರಸ್ತೆಯನ್ನು ದಾಟುತ್ತಿದ್ದ ಇನ್ನೂ ಕೆಲವರು ಅಂಬೆಗಾಲಿಡುವ ಮಗುವಿನ ರಕ್ಷಣೆಗೆ ಧಾವಿಸಿದರು. ಅಪಘಾತದಲ್ಲಿ ಮಗು ಪವಾಡ ಸದೃಶವಾಗಿ ಪಾರಾಗಿದೆ. ಈ ವಿಡಿಯೋವನ್ನು ಸಿರಾಜ್ ನೂರಾನಿ ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ. ಈ ಘಟನೆ ಟ್ರಾಫಿಕ್ ಸಿಗ್ನಲ್‌ನಲ್ಲಿ ಸಂಭವಿಸಿದೆ. ಹೀಗಾಗಿ ಹಿಂಬದಿ ಕಾರುಗಳು ನಿಂತಿದ್ದವು. ಒಂದು ವೇಳೆ ಸಿಗ್ನಲ್ ಹೊರತಾಗಿ ಕಾರುಗಳು ಚಲಿಸುತ್ತಿದ್ದ ವೇಳೆ ಕಾರಿನಿಂದ ಮಗು ಬಿದ್ದಿದ್ದರೆ ದೊಡ್ಡ ಅಪಾಯವೇ ಉಂಟಾಗುತ್ತಿತ್ತು. ಅದೃಷ್ಟವಶಾತ್ ಮಗುವಿಗೆ ಯಾವುದೇ ಅಪಾಯವಾಗಿಲ್ಲ.

ಟ್ರಾಫಿಕ್ ಪಾಯಿಂಟ್‌ನಲ್ಲಿ ಕಾರು ನಿಧಾನವಾಗುತ್ತಿರುವುದನ್ನು ವಿಡಿಯೋ ತೋರಿಸುತ್ತದೆ. ಮಗು ವಾಹನದ ಕಿಟಕಿಯಿಂದ ಹೊರಕ್ಕೆ ವಾಲುತ್ತಿರುವುದನ್ನು ಸಹ ನೀವು ನೋಡಬಹುದು. ಮಗು ಕಾರಿನಿಂದ ಬೀಳುವುದು ವಿಡಿಯೋದಲ್ಲಿ ಸ್ಪಷ್ಟವಾಗಿದೆ. ಮಗು ಅಳುತ್ತಿರುವುದು ಕಾಣುತ್ತದೆ. ಆದರೆ ಕಾರಿನ ಚಾಲಕ ಯಾವುದೇ ಕಾಳಜಿಯಿಲ್ಲದೆ ಮುಂದೆ ಹೋಗುತ್ತಾನೆ. ಇತರ ಕಾರುಗಳ ಜನರು ಮಗುವಿಗೆ ಸಹಾಯ ಮಾಡಲು ಧಾವಿಸಿದರು. ಮಗುವನ್ನು ಸ್ಥಳೀಯ ಆಸ್ಪತ್ರೆಗೆ ಕರೆದೊಯ್ಯಲಾಯಿತು ಮತ್ತು ಆಕೆಗೆ ಸಣ್ಣಪುಟ್ಟ ಗಾಯಗಳಾಗಿವೆ ಎಂದು ಸೌತ್ ಚೀನಾ ಮಾರ್ನಿಂಗ್ ಪೋಸ್ಟ್ ಹೇಳಿದೆ. ಈ ಘಟನೆ ಟ್ರಾಫಿಕ್ ಜಂಕ್ಷನ್‌ನಲ್ಲಿ ಅಳವಡಿಸಲಾಗಿದ್ದ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.

A child fell out of a moving car: What happened next Watch video

ಅಂತರ್ಜಾಲದಲ್ಲಿ ಮಗುವಿನ ಯೋಗಕ್ಷೇಮದ ಬಗ್ಗೆ ಕಾಳಜಿ ತೋರುತ್ತಿದ್ದರೆ, ಇತರರು ಗಂಭೀರವಾಗಿ ಆಘಾತಕಾರಿ ಸಂಗತಿಯನ್ನು ಸೂಚಿಸಿದರು. ಮಗುವನ್ನು ಯಾರೋ ಉದ್ದೇಶಪೂರ್ವಕವಾಗಿ ಕಿಟಕಿಯಿಂದ ಹೊರಗೆ ತಳ್ಳಿದ್ದಾರೆ. ಆದ್ದರಿಂದ ಅವರು ವಾಹನವನ್ನು ನಿಲ್ಲಿಸಲಿಲ್ಲ ಎಂದು ಕೆಲವರು ಅಭಿಪ್ರಾಯಪಟ್ಟಿದ್ದಾರೆ.

"ನಾವು ಸೂಕ್ಷ್ಮವಾಗಿ ಗಮನಿಸಿದರೆ ಮಗುವನ್ನು ಹೊರಕ್ಕೆ ತಳ್ಳಲಾಗಿದೆ. ಅಕಸ್ಮಿಕವಾಗಿ ಬೀಳುವಂತೆ ಕಾಣಿಸುವುದಿಲ್ಲ! ಘಟನೆ ಸಂಭವಿಸಿದಾಗ ಕಾರು ಸ್ಟಾಪ್ ಲೈಟ್‌ನಲ್ಲಿತ್ತು ಮತ್ತು ಕಾರು ಓಡುವುದನ್ನು ನೋಡಬಹುದು. ಕೋಪದಲ್ಲಿ ಮಗುವನ್ನು ಹೊರಹಾಕಲಾಗಿದೆ. ಕಾರಿನಲ್ಲಿದ್ದವರು ಕಾಳಜಿ ವಹಿಸಲಿಲ್ಲ"ಎಂದು ಬಳಕೆದಾರರು ಬರೆದಿದ್ದಾರೆ.

Recommended Video

      ಸ್ವಾತಂತ್ರ್ಯ ಸೆನಾನಿ ಭಗತ್‌ ಸಿಂಗ್‌ Shaheed Bhagat Singh || 75th Independence Day *India | OneIndia

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+