ಕ್ಯಾಮರೂನ್ ಶಾಲೆಯ 79 ವಿದ್ಯಾರ್ಥಿಗಳ ಅಪಹರಣ
ಯಾವೌಂದ್(ಆಫ್ರಿಕಾ), ನವೆಂಬರ್ 06: ಆಫ್ರಿಕಾದ ಕ್ಯಾಮರೂನ್ ರಾಷ್ಟ್ರದ ಯಾವೌಂದ್ ಎಂಬಲ್ಲಿ ನಡೆದ ಆಘಾತಕಾರಿ ಪ್ರಕರಣವೊಂದರಲ್ಲಿ ಗನ್ ಹಿಡಿದ ವ್ಯಕ್ತಿಯೊಬ್ಬ 79 ವಿದ್ಯಾರ್ಥಿಗಳನ್ನು ಅಪಹರಿಸಿದ ಘಟನೆ ಸೋಮವಾರ ನಡೆದಿದೆ.
ಇಲ್ಲಿನ ಪ್ರೌಢ ಶಾಲೆಯೊಂದಕ್ಕೆ ಬಂದ ಗನ್ ಮ್ಯಾನ್ ಅಲ್ಲಿನ ಭದ್ರತಾ ಸಿಬ್ಬಂದಿಯನ್ನು ಹೆದರಿಸಿ, ಶಾಲೆಯ ಮಕ್ಕಳು, ಪ್ರಾಂಶುಪಾಲ ಸೇರಿದಂತೆ ಒಟ್ಟು 79 ಜನರನ್ನು ಅಪಹರಿಸಿದ್ದಾನೆ.
ಕ್ಯಾಮರೂನ್ ನ ವಾಯುವ್ಯ ಮತ್ತು ನೈರುತ್ಯ ಭಾಗಗಳ ನಡುವೆ ಪ್ರತ್ಯೇಕತೆಯ ಕೂಗು ಎದ್ದಿದ್ದು, ಅದಕ್ಕೆ ಸಂಬಮಧಿಸಿದಂತೆ ಈ ಘಟನೆ ನಡೆದಿರಬಹುದು ಎಂದು ಅಂದಾಜಿಸಲಾಗಿದೆ. ಮಕ್ಕಳ ಅಪಹರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ತುರ್ತು ಸಭೆ ನಡೆದಿದೆ.

ಆದರೆ ಅಪಹರಣಕಾರರ ಕಡೆಯಿಂದ ಯಾವುದೇ ಕರೆ ಬಂದಿಲ್ಲವಾದ್ದರಿಂದ, ಯಾವುದೇ ಸುಳಿವೂ ಲಭ್ಯವಾಗಿಲ್ಲ.











Click it and Unblock the Notifications