73 ವರ್ಷಗಳ ಮದ್ಯ ಪ್ರಿಯರ ಕನಸು ಈ ದೇಶದಲ್ಲಿ ನನಸು! ಮದ್ಯ ಪ್ರಿಯರಿಗೆ ಗುಡ್‌ನ್ಯೂಸ್‌ !

ಮದ್ಯ ಪ್ರಿಯರ ಕನಸು ಒಂದಲ್ಲ.. ಎರಡಲ್ಲ ಬರೋಬ್ಬರಿ 73 ವರ್ಷಗಳ ನಂತರ ಕುಡುಕರ ಕನಸೊಂದು ನನಸಾಗುತ್ತಿದೆ. ಹೌದು ಸುದೀರ್ಘ 73 ವರ್ಷಗಳಾದ ಮೇಲೆ ಮದ್ಯ ಪ್ರಿಯರು ತಮ್ಮಿಷ್ಟದಂತೆ ಕುಡಿಯುವ ಅವಕಾಶವೊಂದನ್ನು ಕೊಡುವುದಕ್ಕೆ ಇಸ್ಲಾಮಿಕ್‌ ರಾಷ್ಟ್ರವೊಂದು ಮುಂದಾಗಿದೆ. ವಿಶ್ವದಾದ್ಯಂತ ಮದ್ಯ ಪ್ರಿಯರು ಇದ್ದಾರೆ. ಆದರೆ, ಮದ್ಯ ಸೇವನೆಗೆ ಕೆಲವೊಂದು ಪ್ರಮುಖ ಮಿತಿಗಳು ಇವೆ. ಭಾರತದಲ್ಲಿಯೇ ಎಲ್ಲಾ ರಾಜ್ಯಗಳಲ್ಲೂ ನಿಮಗೆ ಮದ್ಯ ಸಿಗಲ್ಲ. ಇನ್ನು ಗೋವಾದಲ್ಲಿ ಅತ್ಯಂತ ಕಡಿಮೆ ಬೆಲೆಗೆ ಮದ್ಯ ಸಿಕ್ಕರೆ, ಕರ್ನಾಟಕ ಸೇರಿದಂತೆ ಕೆಲವು ರಾಜ್ಯಗಳಲ್ಲಿ ಮದ್ಯದ ಬೆಲೆಯು ದುಬಾರಿಯಾಗಿದೆ. ಆದರೆ, ಇದೀಗ ಇಸ್ಲಾಮಿಕ್‌ ರಾಷ್ಟ್ರವೊಂದು ಮದ್ಯ ಪ್ರಿಯರಿಗೆ ಭರ್ಜರಿ ಗುಡ್‌ನ್ಯೂಸ್‌ ನೀಡಲು ಮುಂದಾಗಿದೆ. ಇದೇನು ಎನ್ನುವ ಮಹತ್ವದ ಮಾಹಿತಿ ಇಲ್ಲಿದೆ.

ಇಸ್ಲಾಮಿಕ್ ರಾಷ್ಟ್ರಗಳಲ್ಲಿ ಒಂದಾಗಿರುವ ಹಾಗೂ ಆರ್ಥಿಕವಾಗಿ ಅಭಿವೃದ್ಧಿಯ ಪರ್ವದಲ್ಲಿರುವ ಸೌದಿ ಅರೇಬಿಯಾ ಮದ್ಯ ಪ್ರಿಯರಿಗೊಂದು ಭರ್ಜರಿ ಗುಡ್‌ನ್ಯೂಸ್‌ ನೀಡಿದೆ. ಈ ದೇಶದಲ್ಲಿ ಮುಸ್ಲಿಂ ಕಾನೂನನ್ನು ಪರಿಪಾಲನೆ ಮಾಡಲಾಗುತ್ತದೆ. ಈ ಕಾರಣಕ್ಕಾಗಿ ಇಲ್ಲಿ ದಶಕಗಳಿಂದ ಇಲ್ಲಿ ಮದ್ಯ ಮಾರಾಟವನ್ನು ನಿಷೇಧಿಸಲಾಗಿತ್ತು. ಇದೀಗ ಈ ಕಾನೂನುಗಳನ್ನು ಸಡಿಲಿಕೆ ಮಾಡುವ ಮೂಲಕ ಮದ್ಯ ಪ್ರಿಯರಿಗೆ ಬಂಪರ್‌ ಗುಡ್‌ನ್ಯೂಸ್‌ ನೀಡಲಾಗಿದೆ. ಈ ಮೂಲಕ ಹಲವು ವರ್ಷಗಳ ಮದ್ಯ ಪ್ರಿಯರ ಕನಸು ಇದೀಗ ನನಸಾಗಲು ಶುರುವಾಗಿದೆ.

73 year dream of alcohol lovers come true in Saudi Arabia Good news for alcohol lovers

ಸೌದಿ ಅರೇಬಿಯಾ ದೇಶದಲ್ಲಿ ಇಸ್ಲಾಮಿಕ್ ಪದ್ಧತಿಗಳು ಜಾರಿಯಲ್ಲಿದ್ದು. ಭಾರತ ಸೇರಿದಂತೆ ಉಳಿದ ದೇಶಗಳಲ್ಲಿ ಇರುವಂತಹ ಎಲ್ಲಾ ಸೌಲಭ್ಯಗಳೂ ಸಹ ಇಲ್ಲ. ಅತ್ಯಾಧುನಿ ಹಾಗೂ ವಿನೂತನ ಸೌಲಭ್ಯ & ಮೂಲಭೂತ ಸೌಕರ್ಯಗಳನ್ನು ಇಲ್ಲಿ ಅಭಿವೃದ್ಧಿಪಡಿಸಲಾಗಿದೆಯಾದರೂ, ಮದ್ಯ ನಿಷೇಧ ಸೇರಿದಂತೆ ಕೆಲವೊಂದು ಪ್ರಮುಖ ಹಾಗೂ ಕಟ್ಟುನಿಟ್ಟಿನ ಕಾನೂನುಗಳನ್ನು ಇಲ್ಲಿ ಜಾರಿ ಮಾಡಲಾಗಿದೆ. ಇದೀಗ ಈ ದೇಶವು ಮದ್ಯ ಪ್ರಿಯರಿಗೆ ಬಂಪರ್‌ ಗುಡ್‌ನ್ಯೂಸ್‌ ಕೊಟ್ಟಿದೆ. ಅದೇನೆಂದರೆ, ಮದ್ಯ ನಿಷೇಧ ಕಾಯ್ಕೆಯನ್ನು ಸಡಿಲಪಡಿಸುವುದಕ್ಕೆ ಮುಂದಾಗಿದೆ. ಇದು ಮದ್ಯ ಪ್ರಿಯರಿಗೆ ಸಂತೋಷವನ್ನುಂಟು ಮಾಡಿದೆ ಅಂತ ಹೇಳಲಾಗುತ್ತಿದೆ.

ಮದ್ಯ ಮಾರಾಟಕ್ಕೆ ಮುಂದಾಗಿದ್ದೇಕೆ ?

ಕಳೆದ ಒಂದು ದಶಕದ ಅವಧಿಯಲ್ಲಿ ಅಂದರೆ 10 ವರ್ಷಗಳ ಅವಧಿಯಲ್ಲಿ ಸೌದಿ ಅರೇಬಿಯಾದಲ್ಲಿ ಹಲವು ಮಹತ್ವದ ಬದಲಾವಣೆಗಳು ಆಗಿವೆ. 2017 - 2018 ನೇ ಸಾಲಿನಲ್ಲಿ ಸೌದಿ ಅರೇಬಿಯಾದಲ್ಲಿ ಮಹಿಳೆಯರು ವಾಹನ ಚಲಾಯಿಸುವುದಕ್ಕೆ ಹಾಗೂ ಡ್ರೈವಿಂಗ್‌ ಲೈಸೆನ್ಸ್‌ ಪಡೆಯುವುದಕ್ಕೆ ಅವಕಾಶ ನೀಡಲಾಗಿತ್ತು. ಅಲ್ಲಿಯ ವರೆಗೆ ಮಹಿಳೆಯರಿಗೆ ವಾಹನ ಚಲಾಯಿಸುವುದಕ್ಕೆ ಅವಕಾಶ ನೀಡಿರಲಿಲ್ಲ. ಇದೀಗ ಸುದೀರ್ಘ 8 ವರ್ಷಗಳ ನಂತರ ಮದ್ಯ ಪ್ರಿಯರಿಗೂ ಗುಡ್‌ನ್ಯೂಸ್‌ ಸಿಕ್ಕಿದೆ.

73 year dream of alcohol lovers come true in Saudi Arabia Good news for alcohol lovers

ಎರಡು ಪ್ರಮುಖ ಕಾರಣಗಳಿಗೆ ಸೌದಿಯಲ್ಲಿ ಮದ್ಯ ಮಾರಾಟವನ್ನು ಮಾಡುವುದಕ್ಕೆ ಅನುಮತಿ ನೀಡಲಾಗಿದೆ.

ಸೌದಿ ಅರೇಬಿಯಾ ವಿಷನ್‌-2030 ಎನ್ನುವ ಪರಿಕಲ್ಪನೆಯ ಅಡಿಯಲ್ಲಿ ಆರ್ಥಿಕತೆ ಸುಧಾರಿಸಿಕೊಳ್ಳುವ ಉದ್ದೇಶದಿಂದ ಈ ಪ್ರಮುಖ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ. ಸೌದಿ ಅರೇಬಿಯಾ ದೇಶವು 2034ರಲ್ಲಿ ಫಿಫಾ ವಿಶ್ವಕಪ್‌ಗೆ ಆತಿಥ್ಯ ವಹಿಸುತ್ತಿದೆ. ವಿಶ್ವಕಪ್‌ಗೆ ಪೂರ್ವ ಸಿದ್ಧತೆ ಹಾಗೂ ಆರ್ಥಿಕ ಅಭಿವೃದ್ಧಿಯ ದೃಷ್ಟಿಯಿಂದ ಈ ಕ್ರಮವನ್ನು ತೆಗೆದುಕೊಂಡಿರುವುದಾಗಿ ಹೇಳಲಾಗಿದೆ.

ಕೆಲವು ನಿರ್ದಿಷ್ಟ ಪ್ರದೇಶಗಳಲ್ಲಿ 2026ರ ವೇಳೆಗೆ ಮದ್ಯ ಮಾರಾಟವಾಗಲಿದೆ. ಆದರೆ, ಈ ದೇಶದ ಮನೆ, ಸಾರ್ವಜನಿಕ ಸ್ಥಳಗಳು ಹಾಗೂ ಅಂಗಡಿಗಳಲ್ಲಿ ಮದ್ಯ ಮಾರಾಟ ಅಥವಾ ಸೇವೆಗೆ ಅವಕಾಶ ಇರುವುದಿಲ್ಲ ಅಂತಲೂ ಹೇಳಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+