ಚೀನಾದಲ್ಲಿ ವಿಶೇಷ ವಿಮಾನ ಹತ್ತದ ಆರು ಭಾರತೀಯರು

ಬೀಜಿಂಗ್, ಫೆಬ್ರವರಿ 1: ಕೊರೊನಾ ಮಾರಣಾಂತಿಕ ಸೋಂಕು ಇಡೀ ಚೀನಾವನ್ನೇ ಆವರಿಸಿದೆ. ಅಲ್ಲಿನ ವುಹಾನ್‌ನಲ್ಲಿರುವ 324 ಭಾರತೀಯರನ್ನು ವಿಶೇಷ ವಿಮಾನ ಮೂಲಕ ಕರೆತರಲಾಯಿತು. ಆದರೆ ಆರು ಮಂದಿ ಮಾತ್ರ ವಿಶೇಷ ವಿಮಾನವನ್ನು ಏರಲಿಲ್ಲ.

ನಗರದಲ್ಲಿ ತೀವ್ರ ಜ್ವರದಿಂದಾಗಿ ಆರು ಭಾರತೀಯರನ್ನು ಮೊದಲ ವಿಶೇಷ ಏರ್ ಇಂಡಿಯಾ ವಿಮಾನ ಹತ್ತಲು ನಿರ್ಬಂಧ ಹೇರಲಾಗಿತ್ತು ಎಂದು ತಿಳಿದುಬಂದಿದೆ.

Air India

ವುಹಾನ್ ನಲ್ಲಿದ್ದ ಭಾರತೀಯ 324 ವಿದ್ಯಾರ್ಥಿಗಳನ್ನು ಹೊತ್ತ ಮೊದಲ ವಿಮಾನ ಬೆಳಗ್ಗೆ ಹೊರಟಿತ್ತು. ತೀವ್ರ ಜ್ವರದ ಕಾರಣದಿಂದಾಗಿ ಆರು ವಿದ್ಯಾರ್ಥಿಗಳು ಭಾರತಕ್ಕೆ ಹೋಗದಂತೆ ಚೀನಾದ ವಲಸೆ ಅಧಿಕಾರಿಗಳು ತಡೆದರು ಎಂದು ಅಧಿಕಾರಿಗಳು ಹೇಳಿದ್ದಾರೆ.

ಈ ಆರು ವಿದ್ಯಾರ್ಥಿಗಳಿಗೆ ಕೊರೋನಾ ವೈರಸ್ ಲಕ್ಷಣಗಳು ಇದೆಯೇ ಎಂಬುದನ್ನು ನಿರ್ಧರಿಸಲು ಪರೀಕ್ಷೆಗೊಳಪಡಿಸಲಾಗುತ್ತದೆ.

ಚೀನಾದಿಂದ ಸ್ಥಳಾಂತರಿಸುವ ಮುನ್ನ ವಿಮಾನ ಹಾರಾಟದ ಮೊದಲು ಪರೀಕ್ಷಿಸಲಾಗುವುದು ಮತ್ತು ಭಾರತವನ್ನು ತಲುಪಿದ ನಂತರ 14 ದಿನಗಳವರೆಗೆ ನಿಗಾ ಇಡಲಾಗುವುದು ಎಂದು ಭಾರತೀಯ ರಾಯಬಾರಿಗಳು ಭಾರತೀಯರಿಗೆ ಮಾಹಿತಿ ನೀಡಿದ್ದಾರೆ.

211 ವಿದ್ಯಾರ್ಥಿಗಳು, 110 ವೃತ್ತಿದಾರರು ಹಾಗೂ ಮೂವರು ಅಪ್ರಾಪ್ತರನ್ನೊಳಗೊಂಡ ವಿಶೇಷ ಏರ್ ಇಂಡಿಯಾ ವಿಮಾನ ವುಹಾನ್ ನಿಂದ ಹೊರಟು ಬೆಳಗ್ಗೆ 7-30ಕ್ಕೆ ದೆಹಲಿಗೆ ಬಂದಿಳಿಯಿತು.

ಕರೊನಾ ವೈರಸ್ ನಿಂದಾಗಿ ಮೃತರ ಸಂಖ್ಯೆ 259ಕ್ಕೆ ಏರಿಕೆ ಆಗಿದ್ದು, 11 ಸಾವಿರದ 791 ಜನರಲ್ಲಿ ಈ ಸೋಂಕು ಪತ್ತೆಯಾಗಿದೆ ಎಂದು ಚೀನಾ ಆರೋಗ್ಯ ಸಂಬಂಧಿತ ಸಂಸ್ಥೆಗಳು ತಿಳಿಸಿವೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+