Earthquake: ಟರ್ಕಿ ಮತ್ತು ಸಿರಿಯಾ ನಂತರ 2ನೇ ಬಾರಿ ನ್ಯೂಜಿಲೆಂಡ್‌ನಲ್ಲಿ 6.9 ತೀವ್ರತೆಯ ಭೂಕಂಪ!

ಟರ್ಕಿ ಮತ್ತು ಸಿರಿಯಾ ನಂತರ 2ನೇ ಬಾರಿ ನ್ಯೂಜಿಲೆಂಡ್‌ನಲ್ಲಿ 6.6 ತೀವ್ರತೆಯ ಭೂಕಂಪ ಸಂಭವಿಸಿದೆ.

ಟರ್ಕಿ ಮತ್ತು ಸಿರಿಯಾ ನಂತರ ನ್ಯೂಜಿಲೆಂಡ್‌ನಲ್ಲಿ ಎರಡನೇ ಬಾರಿಗೆ ಭೂಮಿ ಕಂಪಸಿದೆ. ಕೆರ್ಮಾಡೆಕ್ ದ್ವೀಪ ಪ್ರದೇಶದಲ್ಲಿ ಇಂದು (ಮಾರ್ಚ್ 4) 6.9 ತೀವ್ರತೆಯ ಭೂಕಂಪ ಸಂಭವಿಸಿದೆ ಎಂದು ಯುರೋಪಿಯನ್ ಮೆಡಿಟರೇನಿಯನ್ ಭೂಕಂಪನ ಕೇಂದ್ರ (EMSC) ತಿಳಿಸಿದೆ.

ಭೂಕಂಪ 183 ಕಿಮೀ (113.71 ಮೈಲುಗಳು) ಆಳದಲ್ಲಿ ಸಂಭವಿಸಿದೆ ಎಂದು EMSC ತಿಳಿಸಿದೆ. ಭೂಕಂಪದ ನಂತರ ಯಾವುದೇ ಸುನಾಮಿ ಎಚ್ಚರಿಕೆ ಇಲ್ಲ ಎಂದು ಯುಎಸ್ ಸುನಾಮಿ ಎಚ್ಚರಿಕೆ ವ್ಯವಸ್ಥೆ(U.S. Tsunami Warning System) ಹೇಳಿದೆ.

6.6 magnitude earthquake in New Zealand for the 2nd time after Turkey and Syria!

ಕಳೆದ ಮಾರ್ಚ್ ತಿಂಗಳಲ್ಲಿ ವೆಲ್ಲಿಂಗ್ಟನ್‌ನಲ್ಲಿ ಭೂಕಂಪ ಸಂಭವಿಸಿತ್ತು. ರಿಕ್ಟರ್ ಮಾಪಕದಲ್ಲಿ ಭೂಕಂಪದ ತೀವ್ರತೆಯನ್ನು 6.1 ಎಂದು ಅಳೆಯಲಾಗಿದೆ. ಈವೇಳೆ ಯಾವುದೇ ಪ್ರಾಣಹಾನಿ, ಆಸ್ತಿ ನಷ್ಟದ ವರದಿ ಲಭ್ಯವಾಗಿಲ್ಲ ಎಂಬುವುದೇ ಸಮಾಧಾನಕರ ವಿಚಾರ. ಈ ಭೂಕಂಪ ಉತ್ತರ ಐಸ್‌ಲ್ಯಾಂಡ್ ನಗರದ ಲೋವರ್ ಹಟ್‌ನ ವಾಯುವ್ಯಕ್ಕೆ 78 ಕಿಮೀ ದೂರದಲ್ಲಿ ಸಂಭವಿಸಿದೆ. ಭೂಕಂಪದ ಕೇಂದ್ರ ಬಿಂದು ಪರಾಪರಮು ಪಟ್ಟಣದಿಂದ 50 ಕಿ.ಮೀ. ದೂರದಲ್ಲಿದೆ. ಸರ್ಕಾರೀ ಭೂಕಂಪನ ಮಾನಿಟರ್ ಜಿಯೋನೆಟ್ ಪ್ರಕಾರ, ಕಂಪನಗಳು 48 ಕಿಮೀ (30 ಮೈಲಿ) ಆಳದಲ್ಲಿ ಸಂಭವಿಸಿತ್ತು.

ಟರ್ಕಿ ಮತ್ತು ಸಿರಿಯಾದಲ್ಲಿ ಭೂಕಂಪ
ಟರ್ಕಿ ಮತ್ತು ಸಿರಿಯಾದಲ್ಲಿ ಸಂಭವಿಸಿದ ಭೀಕರ ಭೂಕಂಪದಲ್ಲಿ ಸತ್ತವರ ಸಂಖ್ಯೆ 40,000ಕ್ಕೂ ಹೆಚ್ಚು ದಾಟಿದೆ. ಫೆಬ್ರವರಿ 6 ರಂದು, ಟರ್ಕಿ ಮತ್ತು ಸಿರಿಯಾದಲ್ಲಿ ಎರಡು ಪ್ರಮುಖ ವಿನಾಶಕಾರಿ ಭೂಕಂಪಗಳು ಸಂಭವಿಸಿದವು. ರಕ್ಷಣಾ ಕಾರ್ಯಾಚರಣೆ ಇನ್ನೂ ಮುಂದುವರಿದಿದೆ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+