ಮಳೆ ಪ್ರವಾಹದಿಂದಾಗಿ 56 ಮಂದಿ ಸಾವು: ಹಲವಾರು ಜನ ಕಾಣೆ- ಜನಜೀವನ ಬೀದಿಗೆ ತಂದ ಚಂಡಮಾರುತ!

ಬ್ರೆಜಿಲ್‌ನ ದಕ್ಷಿಣದ ರಾಜ್ಯವಾದ ರಿಯೊ ಗ್ರಾಂಡೆ ಡೊ ಸುಲ್‌ನಲ್ಲಿ ಧಾರಾಕಾರ ಮಳೆಯಾಗುತ್ತಿದ್ದು ಪ್ರವಾಹದ ಸ್ಥಿತಿ ಉಂಟಾಗಿದೆ. ಇದರಿಂದಾಗಿ 57 ಜನ ಸಾವನ್ನಪ್ಪಿದ್ದು 67 ಜನರು ಕಾಣೆಯಾಗಿದ್ದಾರೆ. ರಾಜ್ಯದ 497 ನಗರಗಳಲ್ಲಿ ಭೀಕರ ಚಂಡಮಾರುತ ಪರಿಣಾಮ 32,000 ಕ್ಕೂ ಹೆಚ್ಚು ಜನರು ಸ್ಥಳಾಂತರಗೊಂಡಿದ್ದಾರೆ ಎಂದು ರಿಯೊ ಗ್ರಾಂಡೆ ಡೊ ಸುಲ್‌ನ ನಾಗರಿಕ ರಕ್ಷಣಾ ಪ್ರಾಧಿಕಾರ ತಿಳಿಸಿದೆ.

ರಾಜ್ಯದ ಹಲವು ಪ್ರದೇಶಗಳಲ್ಲಿ ಪ್ರವಾಹದಿಂದಾಗಿ ರಸ್ತೆಗಳು ಮತ್ತು ಸೇತುವೆಗಳು ಸಂಪೂರ್ಣವಾಗಿ ನಾಶವಾಗಿವೆ. ಚಂಡಮಾರುತದಿಂದಾಗಿ ಅಲ್ಲಲ್ಲಿ ಭೂಕುಸಿತ ಕೂಡ ಉಂಟಾಗಿದೆ. ಅಣೆಕಟ್ಟುಗಳು ಕುಸಿದು ಹೋಗಿವೆ. ಬೆಂಟೊ ಗೊನ್ಕಾಲ್ವ್ಸ್ ನಗರದಲ್ಲಿರುವ ಎರಡನೇ ಅಣೆಕಟ್ಟು ಕೂಡ ಕುಸಿಯುವ ಅಪಾಯದಲ್ಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

56 People died due to rain floods in Brazil Many people are missing

ರಿಯೊ ಗ್ರಾಂಡೆ ಡೊ ಸುಲ್‌ನ ರಾಜಧಾನಿಯಾದ ಪೋರ್ಟೊ ಅಲೆಗ್ರೆಯಲ್ಲಿ, ಗೈಬಾ ಸರೋವರ ಉಕ್ಕಿ ಹರಿಯುತ್ತಿದ್ದು ಬೀದಿಗಳಲ್ಲಿ ಪ್ರವಾಹ ಸೃಷ್ಟಿ ಮಾಡಿದೆ. ಹೀಗಾಗಿ ಪೋರ್ಟೊ ಅಲೆಗ್ರೆ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಎಲ್ಲಾ ವಿಮಾನಗಳ ಹಾರಾಟವನ್ನು ಸ್ಥಗಿತಗೊಳಿಸಲಾಗಿದೆ.

ಮುಂದಿನ 36 ಗಂಟೆಗಳಲ್ಲಿ ರಾಜ್ಯದ ಉತ್ತರ ಮತ್ತು ಈಶಾನ್ಯ ಪ್ರದೇಶಗಳಲ್ಲಿ ಮಳೆಯಾಗುವ ನಿರೀಕ್ಷೆಯಿದೆ. ಆದರೆ ಮಳೆಯ ಪ್ರಮಾಣ ಕ್ಷೀಣಿಸುತ್ತಿದೆ. ವಾರದ ಆರಂಭದಲ್ಲಿ ಕಂಡುಬರುವ ಗರಿಷ್ಠ ಮಟ್ಟಕ್ಕಿಂತ ಕಡಿಮೆಯಾಗಲಿದೆ ಎಂದು ರಾಜ್ಯ ಹವಾಮಾನ ಪ್ರಾಧಿಕಾರ ತಿಳಿಸಿದೆ.

ಮಳೆ ಮುಂದುವರೆಯುವುದರಿಂದ ನದಿಗಳ ನೀರಿನ ಮಟ್ಟ ಕೆಲವು ದಿನಗಳವರೆಗೆ ಹೆಚ್ಚಿರಲಿದ್ದು ಸುತ್ತಮುತ್ತಲಿನ ಪ್ರದೇಶದ ಜನರನ್ನು ಸ್ಥಳಾಂತರಿಸಲಾಗಿದೆ. ರಿಯೊ ಗ್ರಾಂಡೆ ಡೊ ಸುಲ್ ನಲ್ಲಿ ಇನ್ನೂ ಕೆಲ ದಿನಗಳವರೆಗೆ ಹವಾಮಾನ ಹೀಗೆ ಮುಂದುವರೆಯಲಿದೆ. ಹವಾಮಾನ ಬದಲಾವಣೆಯಿಂದಾಗಿ ಈ ಪರಿಸ್ಥಿತಿ ತೀವ್ರಗೊಳ್ಳುತ್ತಿದೆ ಎಂದು ಸ್ಥಳೀಯ ವಿಜ್ಞಾನಿಗಳು ಎಚ್ಚರಿಕೆ ನೀಡಿದ್ದಾರೆ.

56 People died due to rain floods in Brazil Many people are missing

ಹೀಗಾಗಿ ಗವರ್ನರ್ ಎಡ್ವರ್ಡೊ ಲೀಟ್ ಅವರು ಈ ಪ್ರದೇಶದಲ್ಲಿ ತುರ್ತು ಪರಿಸ್ಥಿತಿಯನ್ನು ಘೋಷಿಸಿದ್ದಾರೆ. ನಮ್ಮ ಇತಿಹಾಸದಲ್ಲಿ ನಾವು ನೋಡಿದ ಅತ್ಯಂತ ಕೆಟ್ಟ ದುರಂತ ಇದಾಗಿದೆ ಎಂದು ಅವರು ಹೇಳಿದ್ದಾರೆ. ಸಾವಿನ ಸಂಖ್ಯೆ ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇದೆ ಎಂದು ಆತಂಕ ವ್ಯಕ್ತಪಡಿಸಿದರು.

ಮುಂದೆ ಇನ್ನಷ್ಟು ಅಪಾಯ

ಮುಂದಿನ ದುರಂತದ ಬಗ್ಗೆ ಎಚ್ಚರಿಕೆ ವಹಿಸುವಂತೆ ಹವಾಮಾನ ಇಲಾಖೆ ಜನರನ್ನು ಕೇಳಿಕೊಂಡಿದೆ. ರಾಜ್ಯದ ಪ್ರಮುಖ ನದಿಗಳು ಅಪಾಯದ ಮಟ್ಟ ತಲುಪಬಹುದು. ಪ್ರಸ್ತುತ ದುರಂತ ಉಲ್ಬಣಗೊಳ್ಳುವ ಸಾಧ್ಯತೆಯಿದೆ ಎಂದು ಅವರು ಹೇಳಿದ್ದಾರೆ.

ಸತತವಾಗಿ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ಅಲ್ಲಿನ ಮೂಲಸೌಕರ್ಯಗಳ ಮೇಲೆ ತೀವ್ರ ಪರಿಣಾಮ ಬೀರಿದೆ. ಪರಿಸ್ಥಿತಿ ಎಷ್ಟು ಕೆಟ್ಟದಾಗಿದೆ ಅಂದರೆ ಅಪಾಯದ ಪ್ರದೇಶಗಳಲ್ಲಿ ವಾಸಿಸುವ ಜನರು ತಮ್ಮ ಸ್ಥಳಗಳನ್ನು ಖಾಲಿ ಮಾಡುವಂತೆ ಸರ್ಕಾರ ಕೇಳಿದೆ.

ಕುಡಿಯುವ ನೀರಿನಂತಹ ಮೂಲ ಸೌಕರ್ಯಗಳಿಗೂ ತೊಂದರೆಯಾಗಿದೆ. ಕಳೆದ ಸೆಪ್ಟೆಂಬರ್‌ನಲ್ಲಿ ಭಾರೀ ಮಳೆ ರಿಯೊ ಗ್ರಾಂಡೆ ಡೊ ಸುಲ್‌ಗೆ ಅಪ್ಪಳಿಸಿತ್ತು. ಇದರಿಂದ 50ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+