ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಿಜ್ಞಾನ ಮಾಂತ್ರಿಕ ಸ್ಟೀಫನ್ ಹಾಕಿಂಗ್ ಬಗ್ಗೆ ಕುತೂಹಲದ 5 ಸಂಗತಿ

|
Google Oneindia Kannada News

'ಐನ್ ಸ್ಟಿನ್' ಎಂದೇ ತಮ್ಮ ಸ್ನೇಹಿತರಿಂದ ಕರೆಸಿಕೊಳ್ಳುತ್ತಿದ್ದ, ಅಭಿನವ ಐನ್ ಸ್ಟಿನ್, ಸ್ಟೀಫನ್ ಹಾಕಿಂಗ್ ಇನ್ನಿಲ್ಲ! ಹಲವು ದಶಕಗಳಲಿಂದ ವ್ಹೀಲ್ ಚೇರ್ ನಲ್ಲೇ ಜೀವನ ಸವೆಸುತ್ತಿದ್ದ ವಿಶ್ವದ ನಂ.1 ವಿಜ್ಞಾನಿ ವಿಧಿವಶರಾಗಿದ್ದು, ಆಲ್ಬರ್ಟ್ ಐನ್ ಸ್ಟಿನ್ ಹುಟ್ಟಿದ ದಿನದಂದೇ ಎಂಬುದು ಮತ್ತಷ್ಟು ಅಚ್ಚರಿಯ ವಿಷಯ!

ಅಷ್ಟಕ್ಕೂ ಈ ಸ್ಟೀಫನ್ ಹಾಕಿಂಗ್(8 ಜನವರಿ 1942-14 ಮಾರ್ಚ್ 2018) ಯಾರು? ಅವರ ನಿಧನಕ್ಕೆ ವಿಶ್ವ ಇಷ್ಟೆಲ್ಲ ಮರುಗುವುದಾದರೂ ಯಾಕೆ?

ಕೇವಲ ಒಬ್ಬ ವಿಜ್ಞಾನಿಯಾಗಿಯಷ್ಟೇ ಉಳಿದಿದದ್ದರೆ ಅವರ ಸಾವು ಈ ಪರಿ ಕಾಡುತ್ತಿರಲಿಲ್ಲವೇನೋ... ಆದರೆ ಕೇವಲ ಎರಡೂವರೆ ವರ್ಷವಷ್ಟೇ ನಿಮ್ಮ ಆಯಸ್ಸು ಎಂದಿದ್ದ ವೈದ್ಯರೇ ನಾಚುವಂತೆ ಹಲವು ದಶಕಗಳ ಕಾಲ ಬದುಕುಳಿದ, ದೇಹಕ್ಕಂಟಿದ ವಿಚಿತ್ರ ಕಾಯಿಲೆಗೇ ಸೆಡ್ಡು ಹೊಡೆದು ದೈಹಿಕ ನ್ಯೂನತೆಗೂ, ಮೆದುಳಿನ ಕಾರ್ಯಚಟುವಟಿಕೆಗೂ ಸಂಬಂಧವೇ ಇಲ್ಲ ಎಂಬುದನ್ನು ತೋರಿಸಿಕೊಟ್ಟ ಅವರು ಸ್ಫೂರ್ತಿ ಚಿಲುಮೆಯಾಗಿ ಮನಸ್ಸಿನಲ್ಲುಳಿದಿದ್ದಾರೆ.

ವಿಜ್ಞಾನವೇ ದೇವರೆಂದಿದ್ದ ಸ್ಟೀಫನ್ ಹಾಕಿಂಗ್ ನಡೆದು ಬಂದ ಹಾದಿವಿಜ್ಞಾನವೇ ದೇವರೆಂದಿದ್ದ ಸ್ಟೀಫನ್ ಹಾಕಿಂಗ್ ನಡೆದು ಬಂದ ಹಾದಿ

ಅವರ ದೇಹವನ್ನು ಕಟ್ಟಿಹಾಕುತ್ತಿದ್ದ ವ್ಹೀಲ್ ಚೇರ್ ಗೆ ಅವರ ಮೆದುಳನ್ನೂ, ಬುದ್ಧಿಮತ್ತೆಯ ಚುರುಕನ್ನು ಕಟ್ಟಿಹಾಕುವುದಕ್ಕೆ ಸಾಧ್ಯವೇ ಆಗಲಿಲ್ಲ. ವ್ಹೀಲ್ ಚೇರ್ ನಿಂದಲೇ ಅನ್ಯಗ್ರಹ ಜೀವಿಗಳ ಬಗ್ಗೆ, ಕೃಷ್ಣ ರಂಧ್ರ(ಬ್ಲ್ಯಾಕ್ ಹೋಲ್)ದ ಬಗ್ಗೆ ಅಭ್ಯಸಿಸಿ, ಮಿತಿಯನ್ನು ದಾಟಿದವರು ಅವರು.

1963 ರಲ್ಲೇ ಅಮಿಯೊಟ್ರೋಫಿಕ್ ಲ್ಯಾಟರಲ್ ಸ್ಕ್ಲೆರಾಸಿಸ್ (ಅಥವಾ ALS)ಎಂಬ ತೀವ್ರತರದ ಸ್ನಾಯುಚಾಲಕ ನರಕೋಶದ ಖಾಯಿಲೆಗೆ ಒಳಗಾಗಿದ್ದ ಹಾಕಿಂಗ್ಸ್ ಇಷ್ಟು ಕಾಲ ಬದುಕಿದ್ದಿದ್ದು ಪವಾಡ! ನೊಬೆಲ್ ಸಿಗದಿದ್ದರೇನಂತೆ, ಕೋಟ್ಯಂತರ ಅಭಿಮಾನಿಗಳ ಮನದಲ್ಲಿ ಅವರ ಸ್ಥಾನ ಭದ್ರವಾಗಿದೆ. ಅವರು ಸಂಶೋಧನಾ ಕ್ಷೇತ್ರಕ್ಕೆ ನೀಡಿದ ಕೊಡುಗೆ, ಜೊತೆಗೆ ಅವರ ಕುರಿತು ಕೆಲವು ಅಚ್ಚರಿಯ ವಿಷಯಗಳು ನಿಮಗಾಗಿ ಇಲ್ಲಿವೆ...!

ಯಾವ ಪಕ್ಷಕ್ಕೆಷ್ಟು ಸೀಟು? ನೀವೇ ಊಹಿಸಿ

ಅತ್ಯಂತ ಕಡಿಮೆ ಅಂಕ ಗಳಿಸುತ್ತಿದ್ದ ಹಾಕಿಂಗ್!

ಅತ್ಯಂತ ಕಡಿಮೆ ಅಂಕ ಗಳಿಸುತ್ತಿದ್ದ ಹಾಕಿಂಗ್!

ಈ ಪರಿ ಬ್ರಿಲಿಯಂಟ್ ಇರುವ ಹಾಕಿಂಗ್ ಆತನ ಶಾಲಾ ದಿನಗಳಲ್ಲಿ ಎ+ ಗ್ರೇಡ್ ಪಡೆದಿರಲೇಬೇಕು ಎಂದು ನೀವೇನಾದರೂ ಊಹಿಸಿದ್ದರೆ ಅದು ಶುದ್ಧ ತಪ್ಪು! ಏಕೆಂದರೆ ಹಾಕಿಂಗ್ ಗೆ ಓದು ಅಂದ್ರೆ ಅಲರ್ಜಿ ಆಗಿತ್ತಂತೆ! ಆತ ಪ್ರತಿ ಬಾರಿಯೂ ಪರೀಕ್ಷೆಯಲ್ಲಿ ಗಳಿಸುತ್ತಿದ್ದ ಅಂಕ ತೀರಾ ಸಾಧಾರಣವಾಗಿರುತ್ತು!

ಆತ ಪುಸ್ತಕ ಓದದಿದ್ದರೂ ಕೆಲವು ವಿಷಯಗಳ ಬಗ್ಗೆ ತೀರಾ ಚುರುಕಾಗಿ ತಿಳಿದುಕೊಳ್ಳುತ್ತಿದ್ದರು. ಅದಕ್ಕೆಂದೇ ಅವರನ್ನು ಕ್ಲಾಸಿನಲ್ಲಿ 'ಐನ್ ಸ್ಟಿನ್' ಎಂದು ಕರೆಯಲಾಗುತ್ತಿತ್ತು! 9 ವರ್ಷದವರೆಗೂ ಅವರಿಗೆ ಸರಿಯಾಗಿ ಓದುವುದಕ್ಕೂ ಬರುತ್ತಿರಲಿಲ್ಲ. ಇಡೀ ಕ್ಲಾಸಿನಲ್ಲಿ ಕಡಿಮೆ ಅಂಕ ಗಳಿಸುತ್ತಿದ್ದ ವಿದ್ಯಾರ್ಥಿ ಹಾಕಿಂಗ್. ಜೀವಶಾಸ್ತ್ರ ಅಂದ್ರೆ ಹಾಕಿಂಗ್ ಗೆ ಕೆಟ್ಟ ಕೋಪ. ಅವರ ತಂದೆಗೆ ಮಗನನ್ನು ಡಾಕ್ಟರ್ ಮಾಡಬೇಕೆಂಬ ಆಸೆ. ಅದಕ್ಕೆಂದೇ ಜೀವಶಾಸ್ತ್ರ ಓದಬೇಕೆಂದು ಒತ್ತಾಯಿಸಿದರೂ ಅವರು ಆಯ್ದುಕೊಂಡಿದ್ದು, ಭೌತಶಾಸ್ತ್ರವನ್ನೇ.

21 ನೇ ವಯಸ್ಸಿನಲ್ಲಿ ಬಂದೆರಗಿದ ಆಘಾತ

21 ನೇ ವಯಸ್ಸಿನಲ್ಲಿ ಬಂದೆರಗಿದ ಆಘಾತ

ಆಗ ಹಾಕಿಂಗ್ ಗೆ 21 ವರ್ಷ ವಯಸ್ಸು. ಪದೇ ಪದೇ ಆಯತಪ್ಪಿ ಬೀಳುತ್ತಿದ್ದ ಹಾಕಿಂಗ್ ವೈದ್ಯರ ಬಳಿ ಹೋದಾಗ ಗೊತ್ತಾಗಿದ್ದು, ಅವರಿಗೆ ಒಂದು ವಿಚಿತ್ರವಾದ ನರಸಂಬಂಧೀ ಕಾಯಿಲೆ ಇದೆ ಎಂದು! 'ಅಮಿಯೊಟ್ರೋಫಿಕ್ ಲ್ಯಾಟರಲ್ ಸ್ಕ್ಲೆರಾಸಿಸ್ (ಅಥವಾ ALS) ಎಂಬ ಈ ಕಾಯಿಲೆಯಿಂದಾಗಿ ಹಾಕಿಂಗ್ ಅವರ ದೇಹದ ಒಂದೊಂದೇ ಭಾಗಗಳು ಸ್ವಾಧೀನ ಕಳೆದುಕೊಳ್ಳುತ್ತವೆ.. ಅವರು ಬದುಕುವುದು ಗರಿಷ್ಠವೆಂದರೆ ಇನ್ನೆರಡೂವರೆ ವರ್ಷ ಮಾತ್ರ' ಎಂದು ವೈದ್ಯರು ಹೇಳಿದ್ದರು.

ಈ ವಿಷಯ ತಿಳಿಯುತ್ತಿದ್ದಂತೇ ಹಾಕಿಂಗ್ ಸಿಕ್ಕಾಬಟ್ಟೆ ಆಘಾತವಾಗಿತ್ತು. ಆದರೆ ತನಗಿಂತಲೂ ಚಿಕ್ಕ ಹುಡುಗನೊಬ್ಬ ಲ್ಯುಕೆಮಿಯಾ ಕಾಯಿಲೆಯಿಂದ ಬಳಲುತ್ತಿರುವುದು ತಿಳಿದು ನನ್ನದು ದೊಡ್ಡ ಸಮಸ್ಯೆಯೇ ಅಲ್ಲ ಅನ್ನಿಸಿತು. ಅದಾಗಿ ಕೆಲ ದಿನಗಳಿಂದ ವ್ಹೀಲ್ ಚೇರಿನ ಬದುಕು ಶುರುವಾಯ್ತು. ವೈದ್ಯರು ನೀಡಿದ್ದ ಎರಡೂವರೆ ವರ್ಷದ ಗಡುವು ಮೀರಿ, ಹಾಕಿಂಗ್ 76 ವರ್ಷ ಬದುಕಿದರು. ಕೇವಲ ಬದುಕಿದರು ಮಾತ್ರವಲ್ಲ, ವಿಜ್ಞಾನ ಕ್ಷೇತ್ರಕ್ಕೆ ಅತ್ಯಮೂಲ್ಯ ಕೊಡುಗೆಗಳನ್ನು ನೀಡಿದರು.

ಹುಷಾರ್... ಅನ್ಯಗ್ರಹ ಜೀವಿ ಭೂಮಿಗೆ ಬಂದ್ರೆ ಅನಾಹುತಹುಷಾರ್... ಅನ್ಯಗ್ರಹ ಜೀವಿ ಭೂಮಿಗೆ ಬಂದ್ರೆ ಅನಾಹುತ

ಕೃಷ್ಣ ರಂಧ್ರ ಮತ್ತು ಸಾಪೇಕ್ಷ ಸಿದ್ಧಾಂತ

ಕೃಷ್ಣ ರಂಧ್ರ ಮತ್ತು ಸಾಪೇಕ್ಷ ಸಿದ್ಧಾಂತ

ಹಾಕಿಂಗ್ ಅವರು ಸಂಶೋಧನಾ ಕ್ಷೇತ್ರಕ್ಕೆ ನೀಡಿದ ಕೊಡುಗೆಗಳು ಅನಂತ. 1983 ರಲ್ಲಿ ತಮ್ಮ ಸಹೋದ್ಯೋಗಿ ವಿಜ್ಞಾನಿ ಜಿಮ್ ಹಾರ್ಟ್ಲ್ ಅವರೊಂದಿಗೆ ಸೇರಿ ಕ್ವಾಂಟಮ್ ಮೆಕಾನಿಸಂ ಮೂಲಕ ಪ್ರತಿಪಾದಿಸಿದ ಐನ್ ಸ್ಟಿನ್ ರ ಸಾಮಾನ್ಯ ಸಾಪೇಕ್ಷ ಸಿದ್ಧಾಂತವನ್ನು ಆಧಾರವಾಗಿಟ್ಟುಕೊಂಡು ಬ್ರಹ್ಮಾಂಡಕ್ಕೆ ಮಿತಿಯಿಲ್ಲ ಎಂಬುದು ಸಾಬೀತುಪಡಿಸಿದರು.

ಬ್ರಾಂಡನ್ ಕಾರ್ಟರ್, ವೆರ್ನರ್ ಇಸ್ರೇಲ್‌ ಹಾಗೂಡಿ.ರಾಬಿನ್‌ಸನ್ ಜೊತೆಗೂಡಿ ಅವರು ಜಾನ್ ವ್ಹೀಲರ್ ರ "ನೊ-ಹೇರ್ ಪ್ರಮೇಯ"ದೊಂದಿಗೆ ಗಣಿತೀಯ ಪುರಾವೆಗಳನ್ನು ಒದಗಿಸಿದರು. ಈ ಮೂಲಕ ಯಾವುದೇ ಕಪ್ಪು ರಂಧ್ರಗಳನ್ನು ದ್ರವ್ಯರಾಶಿ, ಕೋನೀಯ ಚಲನಾ ಪರಿಮಾಣ, ವಿದ್ಯುತ್ ಆವೇಶವನ್ನು ಬಳಸಿಕೊಂಡು ಸಂಪೂರ್ಣವಾಗಿ ವಿವರಿಸಬಹುದಾಗಿದೆ ಎಂದು ತೋರಿಸಿದರು. 2004ನೇ ಇಸವಿಯ ಜುಲೈ ತಿಂಗಳಿನಲ್ಲಿ ಕಪ್ಪು ರಂಧ್ರ ಕುರಿತಾಗಿ ತಮ್ಮದೇ ನಿಯಮದಲ್ಲಿ ಹೊಸ ಸಿದ್ಧಾಂತವನ್ನು ನೀಡಿದ್ದರಿಂದಾಗಿ ಸುದ್ದಿಯಾದರು. ಈ ಸಿದ್ಧಾಂತ ಹಿಂದಿನ ಕಾಲದಿಂದಲೂ ನಂಬಿದ್ದ ನಂಬಿಕೆಗೆ ವಿರುದ್ಧವಾಗಿದ್ದರಿಂದ ಅವರು ಕೆಲವು ಟೀಕೆಗಳನ್ನು ಎದುರಿಸಬೇಕಾಯ್ತು. ಅನ್ಯಗ್ರಹ ಜೀವಿಗಳ ಇರುವಿಕೆಯ ಕುರಿತೂ ಅಧ್ಯಯನ ನಡೆಸಿದ್ದ ಅವರು, ಅನ್ಯಗ್ರಹ ಜೀವಿಗಳು ಭೂಮಿಗೆ ಬಂದರೆ ಅಪಾಯ ತಪ್ಪಿದ್ದಲ್ಲ ಎಮದು ಎಚ್ಚರಿಕೆ ಸಹ ನೀಡಿದ್ದರು.

ಕೊನೆಗೂ ನೊಬೆಲ್ ಮಾತ್ರ ದೊರಕಲೇ ಇಲ್ಲ!

ಕೊನೆಗೂ ನೊಬೆಲ್ ಮಾತ್ರ ದೊರಕಲೇ ಇಲ್ಲ!

ವಿಜ್ಞಾನ ಕ್ಷೇತ್ರದ ಅವರ ಸಾಧನೆಗಾಗಿ ಅವರಿಗೆ ನೊಬೆಲ್ ಪಾರಿತೋಷಕ ಸಿಕ್ಕದಿರುವುದು ಅತ್ಯಂತ ಅಚ್ಚರಿ ಎನ್ನಿಸಿದೆ. ಧ್ವನಿ ಸಂವೇದನೆಯ ಮೂಲಕ ಮನಸ್ಸಿನ ಮಾತನ್ನು ಪರದೆ ಮೇಲೆ ಮೂಡಿಸುತ್ತಾ ನೂರಾರು ಉಪನ್ಯಾಸಗಳನ್ನು ನೀಡಿರುವ ಹಾಕಿಂಗ್ ಅವರ ಮೆದುಳನ್ನು ಹ್ಯಾಕ್ ಮಾಡಿ ಮಾಹಿತಿಗಳನ್ನು ಕಲೆ ಹಾಕುವ ವಿಶಿಷ್ಟ ಪ್ರಯತ್ನಕ್ಕೆ ಕೂಡಾ ಮುಂದಾಗಲಾಗಿತ್ತು! ಅವರ ಬುದ್ಧಿಮತ್ತೆಗೆ ಎಲ್ಲೆ ಇಲ್ಲದ ಕಾರಣ ಅವರು ದೈಹಿಕವಾಗಿ ತೀರಾ ಅಶಕ್ತರಾಗಿದ್ದರೂ, ಸಾಯುವವರೆಗೂ ಅವರ ಮಾರ್ಗದರ್ಶನವನ್ನು ವಿಜ್ಞಾನ ಲೋಕ ಪಡೆದಿದೆ.

ದೇವಕಣದ ಮೇಲೆ ಬೆಟ್ಟಿಂಗ್!

ದೇವಕಣದ ಮೇಲೆ ಬೆಟ್ಟಿಂಗ್!

ಕೆಲ ವರ್ಷದ ಹಿಂದೆ ವಿಶ್ವದ ನಿದ್ದೆ ಕೆಡಿಸಿದ್ದ ದೇವಕಣದ ಕುರಿತ ಹಿಗ್ಸ್ ಬೋಸನ್ ಸಿದ್ಧಾಂತದ ಮೇಲೆ ಬೆಟ್ ಕಟ್ಟಿದ್ದ ಹಾಕಿಂಗ್ ಬೆಟ್ಟಿಮಘ್ ನಲ್ಲಿ ಸೋತಿದ್ದರು. ಆದರೆ ಅದಕ್ಕೆ ಕೊಂಚವೂ ಬೇಸರಿಸಿಕೊಳ್ಳದೆ, ಮಿಚಿಗನ್ ವಿಶ್ವವಿದ್ಯಾಲಯದ ಗಾರ್ಡನ್ ಕೇನ್ ಜೊತೆ ನಾನು ಹಿಗ್ಸ್ ಕಣ ಪತ್ತೆಯಾಗುವುದಿಲ್ಲ ಎಂದು ಬೆಟ್ ಕಟ್ಟಿದ್ದೆ. ಈಗ ನೋಡಿದರೆ ನನ್ನ ಹೇಳಿಕೆ ಸುಳ್ಳಾಗಿದೆ.

ದೇವಕಣ ಸಿದ್ಧಾಂತಕ್ಕಾಗಿ ಪೀಟರ್ ಹಿಗ್ಸ್ ಗೆ ನೊಬೆಲ್ ಪ್ರಶಸ್ತಿ ಸಿಗಬೇಕು ಎಂದಿದ್ದರು. ಯಾವ ಮಾತ್ಸರ್ಯ, ಬೇಸರವಿಲ್ಲದೆ ಹಾಕಿಂಗ್ ತಮ್ಮ ಸಹ ವಿಜ್ಞಾನಿಯನ್ನು ಗೌರವಿಸುತ್ತಿದ್ದ ರೀತಿ ಇದು! ಹಾಕಿಂಗ್ ಅವರ ಬದುಕನ್ನು ಆಧರಿಸಿ, 2014 ರಲ್ಲಿ 'The Theory Of Everything'' ಎಂಬ ಚಿತ್ರವೂ ಬಿಡುಗಡೆಯಾಗಿದೆ.

ದೇವಕಣ ಬೆಟ್ ಸೋತ ಅಭಿನವ ಐನ್ ಸ್ಟೈನ್ದೇವಕಣ ಬೆಟ್ ಸೋತ ಅಭಿನವ ಐನ್ ಸ್ಟೈನ್

English summary
Prominent British theoretical physicist Professor Stephen Hawking has died at the age of 76. Hawking had a rare early-onset, slow-progressing form of amyotrophic lateral sclerosis (ALS) that gradually paralysed him over the decades. Here are few important things about Stephen Hawkings life and research
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X