ಫೇಸ್‌ಬುಕ್ ಹ್ಯಾಕ್‌: 5 ಕೋಟಿ ಫೇಸ್‌ಬುಕ್ ಖಾತೆಗಳು ಸಮಸ್ಯೆಯಲ್ಲಿ!

Recommended Video

      ಫೇಸ್‌ಬುಕ್ ಹ್ಯಾಕ್‌: 5 ಕೋಟಿ ಫೇಸ್‌ಬುಕ್ ಖಾತೆಗಳು ಸಮಸ್ಯೆಯಲ್ಲಿ | Oneindia Kannada

      ಕ್ಯಾಲಿಫೋರ್ನಿಯಾ, ಸೆಪ್ಟೆಂಬರ್ 28: ಸಾಮಾಜಿಕ ಜಾಲತಾಣದ ದೈತ್ಯ ಫೇಸ್‌ಬುಕ್ ಮತ್ತೆ ಹ್ಯಾಕರ್‌ಗಳ ಹಾವಳಿಗೆ ತುತ್ತಾಗಿದೆ. ಹ್ಯಾಕರ್‌ಗಳ ಹಾವಳಿಯಿಂದ 5 ಕೋಟಿ ಫೇಸ್‌ಬುಕ್‌ ಖಾತೆಗಳು ಅಸುರಕ್ಷತಗೊಂಡಿವೆ.

      ಶುಕ್ರವಾರ ಈ ಬಗ್ಗೆ ಮಾಹಿತಿ ನೀಡಿರುವ ಫೇಸ್‌ಬುಕ್ ಕಚೇರಿ, ಭದ್ರತಾ ಲೋಪದಿಂದಾಗಿ 5 ಕೋಟಿ ಫೇಸ್‌ಬುಕ್ ಖಾತೆಗಳು ತೊಂದರೆಗೀಡಾಗಿದೆ. ಈ ಬಗ್ಗೆ ದೂರು ನೀಡಿದ್ದೇವೆ ಹಾಗೂ ಸಮಸ್ಯೆ ಸರಿಪಡಿಸುತಿದ್ದೇವೆ ಎಂದು ಹೇಳಿದೆ.

      5 crore Facebook accounts has been affected by hack

      ಫೇಸ್‌ಬುಕ್‌ನ 'ವೀವ್‌ ಆಸ್‌' ಎಂಬ ಆಯ್ಕೆಯನ್ನು ಹ್ಯಾಕರ್‌ಗಳು ತಮ್ಮ ಸುಪರ್ಧಿಗೆ ತೆಗೆದುಕೊಂಡು ದುರ್ಬಳಕೆ ಮಾಡಿಕೊಂಡಿದ್ದಾರೆ ಹೀಗಾಗಿ 5 ಕೋಟಿ ಫೇಸ್‌ಬುಕ್ ಖಾತೆಗಳು ತೊಂದರೆಗೊಳಗಾಗಿದೆ ಎಂದು ಫೇಸ್‌ಬುಕ್ ಮೂಲ ಕಚೇರಿ ಮಾಹಿತಿ ನೀಡಿದೆ.

      ಫೇಸ್‌ಬುಕ್‌ನ ಎಂಜಿನಿಯರ್‌ ತಂಡವೊಂದು ಮಂಗಳವಾರದಂದು ಫೇಸ್‌ಬುಕ್‌ನ ಕೆಲವು ಖಾತೆಗಳಲ್ಲಿ ಭದ್ರತಾ ಸಮಸ್ಯೆ ಎದುರಾಗಿರುತ್ತಿರುವುದನ್ನು ಗಮನಿಸಿತು ತನಿಖೆಯ ನಂತರ 5 ಕೋಟಿ ಫೇಸ್‌ಬುಕ್ ಖಾತೆಗಳು ಈರೀತಿಯ ಸಮಸ್ಯೆ ಎದುರಿಸುತ್ತಿರುವುದಾಗಿ ಅರಿವಿಗೆ ಬಂದಿದೆ. ಕೂಡಲೇ ಇದನ್ನು ಸರಿಪಡಿಸುವುದಾಗಿ ಅವರು ಹೇಳಿದ್ದಾರೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+