Breaking: ಪಾಕಿಸ್ತಾನದ ನವಾಬ್‌ಶಾಹ್ ಬಳಿ ಹಳಿತಪ್ಪಿದ ಹಜಾರಾ ಎಕ್ಸ್‌ಪ್ರೆಸ್‌ನ 5 ಬೋಗಿಗಳು, 22 ಮಂದಿ ಸಾವು, ಹಲವರಿಗೆ ಗಾಯ!
ಹಜಾರಾ
ಎಕ್ಸ್‌ಪ್ರೆಸ್‌ನ 5 ಬೋಗಿಗಳು ಹಳಿತಪ್ಪಿ 22 ಜನ ಸಾವನ್ನಪ್ಪಿದ್ದು ಹಲವರಿಗೆ ಗಾಯವಾದ ಘಟನೆ ಪಾಕಿಸ್ತಾನದ ನವಾಬ್‌ಶಾಹ್ ಬಳಿ ನಡೆದಿದೆ. ಪಾಕಿಸ್ತಾನದ ಶಹಜಾದ್‌ಪುರ ಮತ್ತು ನವಾಬ್‌ಶಾ ನಡುವಿನ ಸಹಾರಾ ರೈಲ್ವೆ ನಿಲ್ದಾಣದ ಬಳಿ ಭಾನುವಾರ ರೈಲು ಹಳಿ ತಪ್ಪಿದೆ. ಇದರಿಂದಾಗಿ ರಾವಲ್ಪಿಂಡಿಗೆ ಹೋಗುವ ಹಜಾರಾ ಎಕ್ಸ್‌ಪ್ರೆಸ್‌ನ ಐದು ಬೋಗಿಗಳು ಪಲ್ಟಿಯಾಗಿರುವ ಬಗ್ಗೆ ವರದಿಯಾಗಿದೆ. id="toptextpromo"> id='are-slot-1' class='oiad oi-axt oiadv'>id='top-searched-articles'>
ರೈಲು
ಕರಾಚಿಯಿಂದ ಪಂಜಾಬ್‌ಗೆ ತೆರಳುತ್ತಿದ್ದಾಗ ಈ ಅಪಘಾತ ಸಂಭವಿಸಿದೆ. ರೈಲು ಹೆಚ್ಚಿನ ಸಂಖ್ಯೆಯ ಪ್ರಯಾಣಿಕರನ್ನು ಹೊತ್ತೊಯ್ಯುತ್ತಿದ್ದರಿಂದ ಹಲವಾರು ಮಂದಿ ಗಾಯಗೊಂಡಿದ್ದಾರೆ. ಅಫಘಾತಕ್ಕೆ ಕಾರಣ ತಿಳಿದು ಬಂದಿಲ್ಲ. ಸ್ಥಳದಲ್ಲಿ ರಕ್ಷಣಾ ಕಾರ್ಯಚರಣೆ ನಡೆಯುತ್ತಿದ್ದು ಪೊಲೀಸರು ಅಗ್ನಿ ಶಾಮಕ ದಳದ ಸಿಬ್ಬಂದಿ ಸ್ಥಳಕ್ಕಾಗಮಿಸಿದ್ದಾರೆ. ಹೆಚ್ಚಿನ ಮಾಹಿತಿಯನ್ನು ನಿರೀಕ್ಷಿಸಲಾಗಿದೆ.











Click it and Unblock the Notifications