ಚೀನಾದಲ್ಲಿ ಕೊರೊನಾ ಸೋಂಕಿತರ ಪೈಕಿ ಶೇ.40 ಮಂದಿಗೆ ಲಕ್ಷಣಗಳೇ ಇರಲಿಲ್ಲ

ನವದೆಹಲಿ, ಏಪ್ರಿಲ್ 17: ಚೀನಾದಲ್ಲಿ ಒಟ್ಟು ಕೊರೊನಾ ಪ್ರಕರಣಗಳ ಪೈಕಿ ಶೇ.17 ರಷ್ಟು ರೋಗಿಗಳಿಗೆ ಕೊರೊನಾದ ಯಾವುದೇ ಲಕ್ಷಣಗಳು ಇರಲಿಲ್ಲ ಎಂದು ವರದಿ ಬಹಿರಂಗಪಡಿಸಿದೆ.

ಒಬ್ಬರಿಂದೊಬ್ಬರಿಗೆ ಸೋಂಕು ಹರಡಿದೆ. ಸೋಂಕಿತರ ಸಂಪರ್ಕದಲ್ಲಿದ್ದ ಸಾಕಷ್ಟು ಮಂದಿ ಯಾವುದೇ ಲಕ್ಷಣಗಳಿಲ್ಲದಿದ್ದರೂ ತಾವಾಗಿಯೇ ಬಂದು ಗಂಟಲು ದ್ರವ, ರಕ್ತ ಪರೀಕ್ಷೆ ಮಾಡಿಸಿದಾಗ ಪಾಸಿಟಿವ್ ಬಂದಿತ್ತು.

ಏಪ್ರಿಲ್ 15ರಂದು ನೇಚರ್ ಮೆಡಿಸಿನ್ ವರದಿ ಪ್ರಕಾರ ಗ್ವಾಂಗ್‌ಜೌ ಆಸ್ಪತ್ರೆಯಲ್ಲಿ ಸುಮಾರು 94 ಮಂದಿಗೆ ಕೊರೊನಾ ಪಾಸಿಟಿವ್ ಕಂಡುಬಂದಿತ್ತು ಆದರೆ ಅವರ್ಯಾರಿಗೂ ವೈರಸ್‌ನ ಲಕ್ಷಣಗಳು ಇರಲೇ ಇಲ್ಲ.

44% Got Covid From People Without Symptoms In China

ಬೇರೆ ಬೇರೆ ದೇಶಗಳಿಂದ ಬಂದವರನ್ನು 14 ದಿನಗಳ ಕಾಲ ಕ್ವಾರಂಟೈನ್‌ನಲ್ಲಿ ಇಡಲಾಗಿತ್ತು. ಬಳಿಕ ಅವರಲ್ಲಿ ಲಕ್ಷಣಗಳು ಗೋಚರವಾಗಿದ್ದವು.ಸಿಂಗಾಪುರ ಹಾಗೂ ತಿಯಾಂಜಿನ್‌ನಲ್ಲಿ ಶೇ.48 ಹಾಗೂ 62 ರಷ್ಟು ಕೊವಿಡ್ 19 ರೋಗಿಗಳಿಗೆ ವೈರಸ್ ಲಕ್ಷಣಗಳಿರಲಿಲ್ಲ ಆದರೂ ವರದಿ ಪಾಸಿಟಿವ್ ಇತ್ತು.

ಆದರೆ ಭಾರತದಲ್ಲಿ ಕೇವಲ ರೋಗದ ಲಕ್ಷಣಗಳು ಕಂಡು ಬಂದರೆ ಮಾತ್ರ ಪರೀಕ್ಷೆ ಮಾಡಲಾಗುತ್ತಿದ್ದು, ಲಕ್ಷಣಗಳು ಕಾಣದಿರುವ ಎಷ್ಟೋ ಪ್ರಕರಣಗಳು ಇರಬಹುದು ಎಂದು ಹೇಳಲಾಗುತ್ತಿದೆ.
ವಿದೇಶದಿಂದ ಬಂದವರು, ಆರೋಗ್ಯ ಕಾರ್ಯಕರ್ತರು, ಹಾಗೂ ಉಸಿರಾಟದ ತೊಂದರೆ ಇರುವವರನ್ನು ಹೆಚ್ಚಾಗಿ ಪರೀಕ್ಷೆಗೊಳಪಡಿಸಲಾಗುತ್ತಿದೆ.

ವಿದೇಶದಿಂದ ಬಂದವರು ಹಾಗೂ ಅವರ ಜೊತೆ ಸಂಪರ್ಕದಲ್ಲಿರುವವರನ್ನು ಪರೀಕ್ಷೆ ಮಾಡಲಾಗುತ್ತಿದೆ. ಆದರೆ ಇಂಡಿಯನ್ ಕೌನ್ಸಿಲ್ ಆಫ್ ರಿಸರ್ಚ್ ಪ್ರಕಾರ 15 ರಾಜ್ಯಗಳ 36 ಜಿಲ್ಲೆಗಳಲ್ಲಿ ಯಾವುದೇ ಕೊವಿಡ್ 19 ರೋಗಿ ಜೊತೆಗೆ ಸಂಪರ್ಕ ಹೊಂದಿರದೆ ಇರುವ ಸುಮಾರು 40 ಮಂದಿಗೆ ಕೊರೊನಾ ಹರಡಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+