ಪಾಕಿಸ್ತಾನದ ಮುಸ್ಲಿಮೇತರ ಮತದಲ್ಲಿ ಶೇ.30 ರಷ್ಟು ಹೆಚ್ಚಳ
ಇಸ್ಲಾಮಾಬಾದ್, ಮೇ 28: ಪಾಕಿಸ್ತಾನದಲ್ಲಿ ಮುಸ್ಲಿಮೇತರ ಮತಗಳ ಸಂಖ್ಯೆ ಶೇ.30 ರಷ್ಟು ಹೆಚ್ಚಾಗಿದೆ ಎಂದು ಪಾಕಿಸ್ತಾನಿ ಪತ್ರಿಕೆ 'ಡಾನ್ ನ್ಯೂಸ್' ತಿಳಿಸಿದೆ. ಮುಸ್ಲಿಮೇತರ ಮತಗಳಲ್ಲಿ ಹಿಂದುಗಳೇ ಸಿಂಹಪಾಲು ಹೊಂದಿದ್ದಾರೆ ಎಂದೂ ಇದು ಹೇಳಿದೆ.
2013 ರಲ್ಲಿ 2.77 ಮಿಲಿಯನ್ ಇದ್ದ ಮುಸ್ಲಿಮೇತರ ಮತದಾರರು ಈ ವರ್ಷ 3.63 ಮಿಲಿಯನ್ ಆಗಿದ್ದಾರೆ.
2013 ರಲ್ಲಿ ಪಾಕಿಸ್ತಾನದಲ್ಲಿದ್ದ ಹಿಂದು ಮತದಾರರು 1.40 ಮಿಲಿಯನ್. ಈ ವರ್ಷ ಈ ಸಂಖ್ಯೆ 1.77 ಮಿಲಿಯನ್ ಆಗಿದೆ. ಈ ಮೂಲಕ ಹಿಂದು ಮತದಾರರ ಸಂಖ್ಯೆ ನಿಧಾನವಾಗಿ ಏರಿಕೆ ಕಾಣುತ್ತಿದೆ.

ಈ ವರ್ಷ ಜುಲೈ 25 ರಂದು ಪಾಕಿಸ್ತಾನದಲ್ಲಿ ಚುನಾವಣೆ ನಡೆಯಲಿದ್ದು, ಪ್ರಸ್ತುತ ಸರ್ಕಾರದ ಆಡಳಿತಾವಧಿ ಮೇ 31 ಕ್ಕೆ ಮುಕ್ತಾಯವಾಗಲಿದೆ.ಜೂನ್ 1 ರಿಂದ ಚುನಾವಣೆ ಮುಗಿಯುವವರೆಗೂ ಹಂಗಾಮಿ ಸರ್ಕಾರ ದೇಶದ ಆಡಳಿತ ನಡೆಸಲಿದೆ.












Click it and Unblock the Notifications