Get Updates
Get notified of breaking news, exclusive insights, and must-see stories!

ಡೆನ್ಮಾರ್ಕ್ ನ ಶತಕೋಟ್ಯಧಿಪತಿಯ ಮೂವರು ಮಕ್ಕಳು ಶ್ರೀಲಂಕಾದಲ್ಲಿ ಸಾವು

ಕೋಪನ್ ಹೇಗನ್, ಏಪ್ರಿಲ್ 22: ಡೆನ್ಮಾರ್ಕ್ ನ ಅತ್ಯಂತ ಶ್ರೀಮಂತ ವ್ಯಕ್ತಿ ಆಂಡರ್ಸ್ ಹೋಲ್ಚ್ ಪಾಸೆನ್ ಮತ್ತು ಅವರ ಪತ್ನಿ ತಮ್ಮ ನಾಲ್ವರು ಮಕ್ಕಳ ಪೈಕಿ ಮೂವರನ್ನು ಶ್ರೀಲಂಕಾದಲ್ಲಿ ಭಾನುವಾರ ನಡೆದ ದಾಳಿಯಲ್ಲಿ ಕಳೆದುಕೊಂಡಿದ್ದಾರೆ. ಈ ಬಗ್ಗೆ ಪಾಸೆನ್ಸ್ ಫ್ಯಾಷನ್ ಸಂಸ್ಥೆಯ ವಕ್ತಾರರು ಸೋಮವಾರ ತಿಳಿಸಿದ್ದಾರೆ.

ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ

ಆದರೆ, ಈ ಬಗ್ಗೆ ಹೆಚ್ಚಿನ ಮಾಹಿತಿ ನೀಡಲು ವಕ್ತಾರರು ನಿರಾಕರಿಸಿದ್ದಾರೆ. ಆದರೆ ಆಂಡರ್ಸ್ ಕುಟುಂಬವು ಶ್ರೀಲಂಕಾದಲ್ಲಿ ರಜಾ ದಿನ ಕಳೆಯಲು ತೆರಳಿತ್ತು. ಚರ್ಚ್ ಗಳು ಹಾಗೂ ಪಂಚತಾರಾ ಹೋಟೆಲ್ ಗಳಲ್ಲಿ ಬಾಂಬ್ ಸ್ಫೋಟವಾಗಿ, ಇನ್ನೂರಾ ತೊಂಬತ್ತು ಮಂದಿ ಮೃತಪಟ್ಟು, ಐನೂರಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದರು.

ಈ ದಾಳಿಯಲ್ಲಿ ಏಳು ಆತ್ಮಾಹುತಿ ಬಾಂಬರ್ ಗಳು ಭಾಗಿ ಅಗಿದ್ದಾಗಿ ಹಿರಿಯ ತನಿಖಾಧಿಕಾರಿಗಳು ತಿಳಿಸಿದ್ದಾರೆ. ಪಾಸೆನ್ ಅವರು ಬೆಸ್ಟ್ ಸೆಲ್ಲರ್ ಫ್ಯಾಷನ್ ಸಂಸ್ಥೆಯ ಮಾಲೀಕರು. ವೆರೊ ಮೋಡಾ ಮತ್ತು ಜಾಕ್ ಅಂಡ್ ಜೋನ್ಸ್ ಬ್ರ್ಯಾಂಡ್ ಕೂಡ ಇದರಲ್ಲಿ ಒಳಗೊಂಡಿದೆ.

3 children of Danish billionaire killed in Sri Lanka attack on easter Sunday

ಅಂದ ಹಾಗೆ, ಫೋರ್ಬ್ಸ್ ನ ಮಾಹಿತಿ ಪ್ರಕಾರ ಸ್ಕಾಟ್ಲೆಂಡ್ ದೇಶದ ಒಟ್ಟಾರೆ ಭೂಮಿಯ ಒಂದು ಪರ್ಸೆಂಟ್ ಗೂ ಹೆಚ್ಚಿನ ಒಡೆತನವನ್ನು ಪಾಸೆನ್ ಹೊಂದಿದ್ದಾರೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+