ಕೊರೊನಾ ವೈರಸ್ ಗೆ ಆಲ್ಕೋಹಾಲ್ ಮದ್ದು: ವದಂತಿಗೆ 27 ಮಂದಿ ಬಲಿ!

ತೆಹ್ರಾನ್, ಮಾರ್ಚ್.10: ಕೊರೊನಾ ವೈರಸ್ ಗೆ ವಿಶ್ವದ ಯಾವುದೇ ದೇಶದಲ್ಲೂ ಇದುವರೆಗೂ ಮದ್ದು ಕಂಡು ಹಿಡಿದಿಲ್ಲ. ಜನರಲ್ಲಿ ಭಯವನ್ನು ಹುಟ್ಟಿಸಿರುವ ಮಾರಕ ಸೋಂಕಿನ ಬಗ್ಗೆ ವದಂತಿಗಳನ್ನು ಹರಿಬಿಡಲಾಗುತ್ತಿದೆ. ಇಂಥದ್ದೇ ವದಂತಿಗೆ ಇರಾನ್ ನಲ್ಲಿ 27 ಮಂದಿ ಪ್ರಾಣ ಬಿಟ್ಟಿದ್ದಾರೆ.

ಕೊರೊನಾ ವೈರಸ್ ಆಲ್ಕೋಹಾಲ್ ಸೇವನೆಯಿಂದ ವಾಸಿಯಾಗುತ್ತದೆ ಎಂಬ ವದಂತಿ ಎಲ್ಲೆಡೆ ಹರಡಿತ್ತು. ಇದನ್ನು ನಂಬಿ ಮೆಥನಾಲ್ ಯುಕ್ತ ಆಲ್ಕೋಹಾಲ್ ಸೇವನೆಯಿಂದ 27 ಮಂದಿ ಮೃತಪಟ್ಟಿದ್ದಾರೆ ಎಂದು ಐಆರ್ ಎನ್ ಎ ಸುದ್ದಿ ಸಂಸ್ಥೆಯು ವರದಿ ಮಾಡಿದೆ.

ಕೊರೊನಾ ವೈರಸ್ ನಿಂದ ಗುಣಮುಖವಾಗಲು ಆಲ್ಕೋಹಾಲ್ ಸೇವಿಸಬೇಕು ಎಂಬ ವಂದತಿಯನ್ನು ನಂಬಿ ಇರಾನ್ ನ ಖುಜೆಸ್ತಾನ್ ನಲ್ಲಿ 22 ಮಂದಿ ಹಾಗೂ ಇರಾನ್ ಉತ್ತರ ಭಾಗದಲ್ಲಿ 7 ಮಂದಿ ಪ್ರಾಣ ಬಿಟ್ಟಿದ್ದಾರೆ ಎಂದು ಐಆರ್ ಎನ್ ಎ ಸುದ್ದಿ ಸಂಸ್ಥೆಯು ತನ್ನ ವರದಿಯಲ್ಲಿ ತಿಳಿಸಿದೆ.

 ಇರಾನ್ ನಲ್ಲಿ ಮದ್ಯಪಾನ ಸೇವನೆಗೆ ನಿರ್ಬಂಧ

ಇರಾನ್ ನಲ್ಲಿ ಮದ್ಯಪಾನ ಸೇವನೆಗೆ ನಿರ್ಬಂಧ

ಅಸಲಿಗೆ ಇರಾನ್ ರಾಷ್ಟ್ರದಾದ್ಯಂತ ಮದ್ಯಪಾನ ಸೇವನೆಯನ್ನು ಬ್ಯಾನ್ ಮಾಡಲಾಗಿದೆ. ದೇಶದಲ್ಲಿ ಕೆಲವು ಮುಸ್ಲಿಂ ಅಲ್ಪಸಂಖ್ಯಾತರನ್ನು ಹೊರತುಪಡಿಸಿ ಬೇರೆ ಯಾರೂ ಕೂಡಾ ಮದ್ಯಪಾನವನ್ನು ಮಾಡುವಂತಿಲ್ಲ ಎಂದು ನಿಯಮವಿದೆ. ಇದರ ಮಧ್ಯೆಯೂ ಆಲ್ಕೋಹಾಲ್ ಸೇವನೆಗೆ ಇಷ್ಟೊಂದು ಜನರು ಬಲಿಯಾಗಿದ್ದಾರೆ.

 ಆಲ್ಕೋಹಾಲ್ ಕುಡಿದು ಆಸ್ಪತ್ರೆ ಸೇರಿದ 218 ಮಂದಿ

ಆಲ್ಕೋಹಾಲ್ ಕುಡಿದು ಆಸ್ಪತ್ರೆ ಸೇರಿದ 218 ಮಂದಿ

ಇನ್ನು, ಖುಜೆಸ್ತಾನ್ ನಲ್ಲಿ ಕೊರೊನಾ ವೈರಸ್ ನಿಂದ ಗುಣಮುಖವಾಗುತ್ತೇವೆ ಎಂದು ತಿಳಿದು ಆಲ್ಕೋಹಾಲ್ ಸೇವಿಸಿದ 218 ಮಂದಿ ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ಜುಂದಿಶ್ ಪುರ್ ಮೆಡಿಕಲ್ ಯುನಿವರ್ಸಿಟಿ ವಕ್ತಾರರು ಅಲಿ ಎಸನ್ ಪೌರ್ ತಿಳಿಸಿದ್ದಾರೆ. ಇದರ ಜೊತೊಗೆ ಆಲ್ಕೋಹಾಲ್ ಸೇವಿಸಿರುವುದರಿಂದ ಕೊರೊನಾ ವೈರಸ್ ಗೆ ನೀಡುವ ಚಿಕಿತ್ಸೆಯನ್ನು ನೀಡುವುದೂ ಕೂಡಾ ದೊಡ್ಡ ಸವಾಲಾಗಿದೆ ಎಂದು ಅವರು ತಿಳಿಸಿದ್ದಾರೆ.

 ಮೆಥನಾಲ್ ಸೇವಿಸಿದ್ದೆ ಆನಾಹುತಕ್ಕೆ ಕಾರಣ

ಮೆಥನಾಲ್ ಸೇವಿಸಿದ್ದೆ ಆನಾಹುತಕ್ಕೆ ಕಾರಣ

ಜನರಲ್ಲಿ ತಾವು ಕೊರೊನಾ ವೈರಸ್ ಸೋಂಕಿತರು ಎಂಬ ತಪ್ಪು ಕಲ್ಪನೆ ಮೂಡಿದೆ. ಇದರಿಂದ ಗುಣಮುಖರಾಗಲು ಆನ್ ಲೈನ್ ನಲ್ಲಿ ಮೆಥನಾಲ್ ತರಿಸಿಕೊಂಡು ಅದನ್ನು ಸೇವಿಸಿದ್ದರಿಂದಲೇ ಜನರು ಪ್ರಾಣ ಬಿಟ್ಟಿದ್ದಾರೆ ಎಂದು ಅಲ್ಬೋರ್ಜ್ ನ ಡೆಪ್ಯುಟಿ ಪ್ರಾಸಿಕ್ಯೂಟರ್ ಮೊಹಮ್ಮದ್ ಅಘಯಾರಿ ತಿಳಿಸಿದ್ದಾರೆ.

 ಮೆಥನಾಲ್ ಅತಿಯಾದ ಸೇವನೆಯಿಂದ ಸಾವು

ಮೆಥನಾಲ್ ಅತಿಯಾದ ಸೇವನೆಯಿಂದ ಸಾವು

ಮೆಥನಾಲ್ ಸೇವಿಸುವುದರಿಂದ ದೃಷ್ಟಿದೋಶ ಕಂಡು ಬರುತ್ತದೆ. ಇದರ ಜೊತೆಗೆ ಲಿವರ್ ಡ್ಯಾಮೇಜ್ ಹಾಗೂ ಸಾವು ಕೂಡಾ ಸಂಭವಿಸುತ್ತದೆ ಎಂದು ಸ್ವತಃ ವೈದ್ಯರೇ ಸ್ಪಷ್ಟಪಡಿಸಿದ್ದಾರೆ. ಇಂಥ ಮೆಥನಾಲ್ ಸೇವಿಸಿದರೆ ಕೊರೊನಾ ವೈರಸ್ ವಾಸಿಯಾಗುತ್ತದೆ ಎಂದ ಸುಳ್ಳುಸುದ್ದಿ 27 ಜೀವಗಳ ಪಾಲಿಗೆ ಉರುಳಾಗಿದೆ.

 ಇರಾನ್ ನಲ್ಲಿ 7,161 ಮಂದಿ ಕೊರೊನಾ ಸೋಂಕು

ಇರಾನ್ ನಲ್ಲಿ 7,161 ಮಂದಿ ಕೊರೊನಾ ಸೋಂಕು

ಇರಾನ್ ನಲ್ಲಿ ಇದುವರೆಗೂ ಕೊರೊನಾ ವೈರಸ್ ಗೆ 237 ಮಂದಿ ಪ್ರಾಣ ಬಿಟ್ಟಿದ್ದಾರೆ. 7,161 ಜನರಲ್ಲಿ ಮಾರಕ ಸೋಂಕು ಪತ್ತೆಯಾಗಿದೆ. ಕೊರೊನಾ ವೈರಸ್ ಗೆ ಅತಿಹೆಚ್ಚು ಮೃತಪಟ್ಟವರ ದೇಶಗಳ ಪಟ್ಟಿಯಲ್ಲಿ ಇರಾನ್ ಮೂರನೇ ಸ್ಥಾನದಲ್ಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+