ಹೂಸ್ಟನ್: ಪ್ರವಾಹದಲ್ಲಿ ಸಿಲುಕಿದ ಇಬ್ಬರು ಭಾರತೀಯರ ರಕ್ಷಣೆ

ಹರಿಕೇನ್ ಚಂಡಮಾರುತದಿಂದ ಆಗಿರುವ ಪ್ರವಾಸದಲ್ಲಿ ಸಿಲುಕಿದ್ದ ಇಬ್ಬರು ಭಾರತೀಯರ ರಕ್ಷಣೆ. ಟೆಕ್ಸಾಸ್ ವಿವಿಯಲ್ಲಿ ಓದುತ್ತಿದ್ದ ಇಬ್ಬರು ಭಾರತೀಯ ವಿದ್ಯಾರ್ಥಿಗಳ ರಕ್ಷಣೆ. ಆಸ್ಪತ್ರೆಗೆ ದಾಖಲು, ಆದರೆ, ಇಬ್ಬರ ಸ್ಥಿತಿ ಗಂಭೀರ.

ವಾಷಿಂಗ್ಟನ್, ಆಗಸ್ಟ್ 29: ಹರಿಕೇನ್ ಎಂಬ ಭೀಕರ ಚಂಡಮಾರುತದಿಂದ ಉಂಟಾದ ಪ್ರವಾಹದ ಹಿನ್ನೆಲೆಯಲ್ಲಿ, ಟೆಕ್ಸಾಸ್ ನಲ್ಲಿರುವ ಲೇಕ್ ಬ್ರಯಾನ್ ಎಂಬ ಸರೋವರದಲ್ಲಿ ಸಿಲುಕಿದ್ದ ಇಬ್ಬರು ಭಾರತೀಯ ವಿದ್ಯಾರ್ಥಿಗಳನ್ನು ಪಾರು ಮಾಡಲಾಗಿದೆ.

ಶಾಲಿನಿ ಹಾಗೂ ನಿಖಿಲ್ ಭಾಟಿಯಾ ಎಂಬ ಈ ಇಬ್ಬರೂ, ಪ್ರವಾಹಕ್ಕೆ ಸಿಲುಕಿ ನಿತ್ರಾಣರಾಗಿದ್ದ ಅವರನ್ನು ಆಸ್ಪತ್ರೆಗೆ ಸೇರಿಸಲಾಗಿದ್ದು, ಅವರ ಪರಿಸ್ಥಿತಿ ಗಂಭೀರವಾಗಿದೆ ಎಂದು ಅವರು ತಿಳಿಸಿದ್ದಾರೆ.

2 Indian Students Nearly Drowned In Lake In Hurricane-Hit Texas

ಈ ವಿದ್ಯಾರ್ಥಿಗಳು ಟೆಕ್ಸಾಸ್ ಎ ಆ್ಯಂಡ್ ಎಂ ವಿಶ್ವವಿದ್ಯಾಲಯದಲ್ಲಿ ವ್ಯಾಸಂಗ ಮಾಡುತ್ತಿದ್ದರು. ಲೇಕ್ ಬ್ರಯಾನ್ ಗೆ ಈ ಇಬ್ಬರೂ ಈಜಲು ಹೋಗಿದ್ದಾಗ ಇದ್ದಕ್ಕಿದ್ದಂತೆ ಬಂದ ಪ್ರವಾಹಕ್ಕೆ ಸಿಲುಕಿದ್ದರೆಂದು ಹೇಳಲಾಗಿದೆ.

ಅದೃಷ್ಟ: ಲೇಕ್ ಬ್ರಯಾನ್ ಗೆ ಈ ಇಬ್ಬರೂ ಈಜಲು ಹೋದಾಗ, ಇದ್ದಕ್ಕಿದ್ದಂತೆ ಪ್ರವಾಹ ಬಂದು ಈ ಇಬ್ಬರೂ ಕೆರೆಯಲ್ಲೇ ಸಿಲುಕಿದ್ದಾರೆ. ಇದನ್ನು ಕೆರೆಯ ದಡದ ಮೇಲೆ ನಿಂತಿದ್ದ ವ್ಯಕ್ತಿಯೊಬ್ಬ ನೋಡಿ ಗಾಬರಿಯಿಂದ ಸಹಾಯಕ್ಕಾಗಿ ಕೂಗಿದ್ದಾನೆ. ಅದೇ ವೇಳೆ, ಅದೇ ಹಾದಿಯಲ್ಲಿ ಸಾಗುತ್ತಿದ್ದ ಆ ಪ್ರಾಂತ್ಯದ ಭದ್ರತಾ ಸಿಬ್ಬಂದಿಯು (ಪೊಲೀಸ್ ಅಧಿಕಾರಿ) ಈತನ ಕೂಗು ಕೇಳಿ ಬಳಿಗೆ ಬಂದು ವಿಚಾರಿಸಿದಾಗ ವಿಷಯ ಗೊತ್ತಾಗಿದೆ. ಹಾಗಾಗಿ ಈ ಇಬ್ಬರೂ ಸೇರಿ ವಿದ್ಯಾರ್ಥಿಗಳಿಬ್ಬರನ್ನು ರಕ್ಷಿಸಿದ್ದಾರೆ. ಈ ಇಬ್ಬರೂ ಇಲ್ಲದಿದ್ದರೆ ಆ ವಿದ್ಯಾರ್ಥಿಗಳು ನೀರುಪಾಲು ಆಗಿರುತ್ತಿದ್ದರು ಎಂದು ಪೊಲೀಸ್ ಇಲಾಖೆ ತಿಳಿಸಿದೆ.

ಹವಾಮಾನ ವೈಪರೀತ್ಯದ ಮುನ್ಸೂಚನೆ ಇದ್ದಾಗಲೂ ಆ ಇಬ್ಬರೂ ಈಜಲು ಹೋಗಿದ್ದೇಕೆ ಎಂಬುದು ಇನ್ನೂ ಅನುಮಾನವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಈ ಬಗ್ಗೆ ಟ್ವೀಟ್ ಮಾಡಿರುವ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್, ''ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿರುವ ಶಾಲಿನಿ ಹಾಗೂ ನಿಖಿಲ್ ಅವರ ಸಂಬಂಧಿಕರಿಗೆ ಬೇಕಾದ ಎಲ್ಲಾ ಅಗತ್ಯ ನೆರವನ್ನು ಭಾರತ ಸರ್ಕಾರ ಕಲ್ಪಿಸಲಿದೆ ಎಂದಿದ್ದಾರೆ. ಏತನ್ಮಧ್ಯೆ, ಪ್ರವಾಹಕ್ಕೆ ಸಿಲುಕಿರುವ ಟೆಕ್ಸಾಸ್ ವಿಶ್ವವಿದ್ಯಾಲಯದಲ್ಲಿರುವ ಇತರ ವಿದ್ಯಾರ್ಥಿಗಳೊಂದಿಗೆ ಸಿಲುಕಿರುವ 200 ಮಂದಿ ಭಾರತೀಯ ವಿದ್ಯಾರ್ಥಿಗಳಿಗೆ ನೆರವು ನೀಡಲಾಗುವುದು'' ಎಂದು ಅವರು ತಿಳಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+