Get Updates
Get notified of breaking news, exclusive insights, and must-see stories!

ಒಂದು ನಿಮಿಷದಲ್ಲಿ ಬಾಕ್ಸಿಂಗ್ ಮೂಲಕ ಮರ ಉರುಳಿಸುವ 12ರ ಬಾಲಕಿ

ವೈರಲ್ ವೀಡಿಯೋ: 12 ವರ್ಷದ ಕಜಕಸ್ತಾನ್ ಹುಡುಗಿಯೊಬ್ಬಳು ತನ್ನ ಬಾಕ್ಸಿಂಗ್ ಕೌಶಲ್ಯಕ್ಕಾಗಿ 'ವಿಶ್ವದ ಬಲಿಷ್ಠ ಹುಡುಗಿ' ಎಂದು ಕರೆಯಲ್ಪಟ್ಟಿದ್ದಾಳೆ. ಎವ್ನಿಕಾ ಸಾದ್ವಾಕಾಸ್ (Evnika Saadvakass) ಎಂಬ ಬಾಲಕಿ ವಿಶ್ವದ ಬಲಿಷ್ಠ ಹುಡುಗಿ ಎಂಬ ಖ್ಯಾತಿಗೆ ಪಾತ್ರಳಾಗಿದ್ದಾಳೆ. ಬಾಲಕಿ ತನ್ನ ಬಲಶಾಲಿ ಪಂಚ್‌ಗಳಿಂದ ಮರವನ್ನು ಉರುಳಿಸುತ್ತಿರುವ ವೀಡಿಯೊ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ. ಇಂತಹ ಸಾಹಸಗಳಿಗಾಗಿನೇ ಈ ಬಾಲಕಿ ಇಂಟರ್ನೆಟ್‌ನಲ್ಲಿ ಸ್ಟಾರ್ ಆಗಿದ್ದಾರೆ. ಈಕೆಯ ಕೌಶಲ್ಯ ಮತ್ತು ಶಕ್ತಿಯಿಂದ ಜನರು ಆಶ್ಚರ್ಯಚಕಿತರಾಗಿದ್ದಾರೆ. ವೈರಲ್ ಆಗಿರುವ ವಿಡಿಯೊದಲ್ಲಿ, ಸಾವಾಕಾಸ್ ಕಾಡಿನಲ್ಲಿ ತನ್ನ ಮುಷ್ಟಿಯಿಂದ ಮರವನ್ನು ಉರುಳಿಸುತ್ತಿರುವುದನ್ನು ಕಾಣಬಹುದು. ಅವಳು ಮರವನ್ನು ಒಂದು ನಿಮಿಷದಲ್ಲಿ ಹೊಡೆದುರುಳಿಸುವ ವಿಡಿಯೊಕ್ಕೆ ಶ್ಲಾಘನೆ ವ್ಯಕ್ತವಾಗಿದೆ.

ಐದು ವರ್ಷಗಳ ಹಿಂದೆ ಕೇವಲ ಎಂಟು ವರ್ಷದವಳಿದ್ದಾಗ ಈಕೆ ವೀಡಿಯೊದಲ್ಲಿ ಕೇವಲ ಒಂದು ನಿಮಿಷದಲ್ಲಿ 100 ಪಂಚ್‌ಗಳನ್ನು ಕೊಡುವ ಮೂಲಕ ಜನಪ್ರಿಯತೆಯನ್ನು ಗಳಿಸಿದ್ದಳು. ಎವ್ನಿಕಾ ತಂದೆ ವೃತ್ತಿಪರ ಬಾಕ್ಸಿಂಗ್ ತರಬೇತುದಾರರಾಗಿದ್ದಾರೆ. ಎವ್ನಿಕಾ ತಂದೆ ರುಸ್ಟ್ರಾಮ್ ಸಾದ್ವಾಕಾಸ್ ಅವರಿಂದ ತರಬೇತಿ ಪಡೆದಿದ್ದಾರೆ. ಎವ್ನಿಕಾ ಅವರು ರಷ್ಯಾದ ವೊರೊನೆಜ್‌ನಲ್ಲಿ ತನ್ನ ತಂದೆ, ತಾಯಿ ಮತ್ತು ಏಳು ಒಡಹುಟ್ಟಿದವರೊಂದಿಗೆ ವಾಸವಿದ್ದಾರೆ. ಇವರಿಗೆ ತಂದೆ ಸಾದ್ವಾಕಾಸ್ ವಾರದಲ್ಲಿ ಐದು ದಿನ ತರಬೇತಿ ನೀಡುತ್ತಾರೆ. ಹೆಚ್ಚಿನ ತರಬೇತಿಯು ಅವರ ಮನೆಯ ಸುತ್ತಲಿನ ಕಾಡಿನಲ್ಲಿ ನಡೆಯುತ್ತದೆ. ಮರಗಳನ್ನು ಪಂಚಿಂಗ್ ಮೂಲಕ ಒಂದೇ ನಿಮಿಷದಲ್ಲಿ ಹೊಡೆದುರುಳಿಸುವ ಈ ಬಾಲಕಿಯನ್ನು ಪ್ರಶಂಸಿಸಲಾಗುತ್ತಿದೆ.

12-Year-Old Kazakhstani Boxer Knocks Down Tree With Her Punches, Dubbed As ‘World’s Strongest Girl’
ಅದು ಅಲ್ಲದೆ. ಆಕೆಯ ಇನ್‌ಸ್ಟಾಗ್ರಾಮ್ ಖಾತೆಯಲ್ಲಿನ ಮತ್ತೊಂದು ಕ್ಲಿಪ್ 12 ವರ್ಷದವಳಿದ್ದಾಗ ಬಾಕ್ಸಿಂಗ್ ಪಂಚ್ ಮೂಲಕ ಬಾಗಿಲನ್ನು ಹೊಡೆದುರುಳಿಸುತ್ತಾಳೆ. "ನಾನು ಬಾಕ್ಸಿಂಗ್ ಅನ್ನು ಇಷ್ಟಪಡುತ್ತೇನೆ. ಏಕೆಂದರೆ ನಾನು ಸೈಡ್ ಹುಕ್ ಅನ್ನು ಎಸೆದಾಗ ಮತ್ತು ನಾನು ಬಲವಾಗಿ ಹೊಡೆದಾಗ, ಅದು ಮಾಡುವ ಶಬ್ದವನ್ನು ನಾನು ಇಷ್ಟಪಡುತ್ತೇನೆ. ನಾನು ವೇಗವಾಗಿ ಹೊಡೆಯುವಾಗ ಬರುವ ಶಬ್ದವನ್ನು ನನಗೆ ತುಂಬಾ ಇಷ್ಟವಾಗುತ್ತದೆ. ಜೊತೆಗೆ ನಾನು ಪಂಚ್‌ಗಳನ್ನು ವೇಗವಾಗಿ ಮಾಡುವುದನ್ನು ಆನಂದಿಸುತ್ತೇನೆ" ಎಂದು ಎವ್ನಿಕಾ ಈ ಹಿಂದೆ ಮೇಲ್ ಆನ್‌ಲೈನ್‌ಗೆ ತಿಳಿಸಿದ್ದರು.


ತನ್ನ ಮಗಳ ಪ್ರತಿಭೆಯ ಬಗ್ಗೆ ಮಾಧ್ಯಮಗಳೊಂದಿಗೆ ಮಾತನಾಡಿದ ಸಾದ್ವಾಕಾಸ್, "ಇವ್ನಿಕಾ ನಾಲ್ಕು ವರ್ಷದವಳಿದ್ದಾಗ, ಅವಳು ಬಾಕ್ಸಿಂಗ್ ವಿಚಾರದಲ್ಲಿ ತೋರಿಸುತ್ತಿರುವ ಆಸಕ್ತಿಯನ್ನು ನಾನು ಗಮನಿಸಿದ್ದೇನೆ. ಅವಳು ತುಂಬಾ ಗಮನ ಮತ್ತು ಪರಿಶ್ರಮಿಯಾಗಿದ್ದಳು. ಇದು ಅವಳನ್ನು ಉನ್ನತ ಮಟ್ಟಕ್ಕೆ ಕರೆದೊಯ್ಯಲು ಸಹಕಾರಿಯಾಗಿದೆ ಎಂದು ನನಗೆ ಖಚಿತವಾಯಿತು. ಹೀಗಾಗಿ ನಾನು ಅವಳಿಗೆ ಬಾಕ್ಸಿಂಗ್ ತರಬೇತಿ ನೀಡಿದೆ. ನಾನು ಅಭಿವೃದ್ಧಿಪಡಿಸಬೇಕಾದದ್ದನ್ನು ಅವಳಲ್ಲಿ ನೋಡುತ್ತಿದ್ದೇನೆ" ಎಂದು ಇವ್ನಿಕಾ ತಂದೆ ಹೇಳಿದ್ದಾರೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+