ಕೊರೊನಾ ಎಫೆಕ್ಟ್: 12 ಲಕ್ಷ ವಿದೇಶಿ ಕಾರ್ಮಿಕರು ಸೌದಿ ಬಿಡುವ ಸಾಧ್ಯತೆ

ರಿಯಾದ್, ಜೂನ್ 17: ಕೊರೊನಾ ವೈರಸ್‌ನಿಂದ ಈಗಾಗಲೇ 3 ಲಕ್ಷ ವಿದೇಶಿ ಕಾರ್ಮಿಕರು ಸೌದಿಯಿಂದ ತಮ್ಮ ತಮ್ಮ ದೇಶಗಳಿಗೆ ಹಿಂತಿರುಗಿದ್ದು, ಮುಂದಿನ ದಿನಗಳಲ್ಲಿ ಈ ಪ್ರಮಾಣ ದೊಡ್ಡ ಮಟ್ಟದಲ್ಲಿ ಹೆಚ್ಚಾಗಲಿದೆ. ಈ ಬಗ್ಗೆ ಜಡ್ವಾ ಇನ್ವೆಸ್ಟ್‌ಮೆಂಟ್ ಮಾಹಿತಿ ನೀಡಿದೆ.

ಕೊರೊನಾದಿಂದ ಅನೇಕ ರಾಷ್ಟ್ರಗಳಲ್ಲಿ ಉದ್ಯೋಗ ಸಮಸ್ಯೆ ಉಂಟಾಗಿದೆ. ಎಷ್ಟೋ ಕಂಪನಿಗಳು ಉದ್ಯೋಗಿಗಳಿಗೆ ಕೆಲಸದಿಂದ ಕಿತ್ತು ಹಾಕುತ್ತಿದ್ದಾರೆ. ಈವರೆಗೆ ಸೌದಿಯಲ್ಲಿ ಮೂರು ಲಕ್ಷ ಕಾರ್ಮಿಕರು ಊರಿಗೆ ತೆರಳಿದ್ದಾರೆ. ಈ ವರ್ಷದ ಕೊನೆಗೆ ಸುಮಾರು 12 ಲಕ್ಷ ಮಂದಿ ವಿದೇಶಿ ಕಾರ್ಮಿಕರು ಸೌದಿ ಅರೇಬಿಯಾ ತೊರೆಯಲಿದ್ದಾರೆ.

ಎಪ್ರಿಲ್ 22 ರಿಂದ ಜೂನ್ 3ರವರೆಗೆ ಅಂದರೆ ಕೇವಲ 42 ದಿನಗಳಲ್ಲಿ 3 ಲಕ್ಷ ಕಾರ್ಮಿಕರು ಸೌದಿ ಬಿಟ್ಟಿದ್ದಾರೆ. ಆರೋಗ್ಯ ವಿಮೆ ದತ್ತಾಂಶ ಈ ಬಗ್ಗೆ ಮಾಹಿತಿ ನೀಡಿದೆ. ಕೊರೊನಾ ವೈರಸ್‌ ಹಬ್ಬುವಿಕೆಯ ನಂತರ ಆದ ಆರ್ಥಿಕ ಸಂಕಷ್ಟದಿಂದ ಉದ್ಯೋಗಿಗಳು ಸೌದಿಯಿಂದ ವಾಪಸ್ ಹೋಗಿದ್ದಾರೆ.

12 Lack Foreigner Workers To Leave Saudi Arabia In 2020

ಕೊರೊನಾದಿಂದ ಮನರಂಜನೆ ಹಾಗೂ ಉತ್ಪಾದನಾ ಫಟಕಗಳು ದೊಡ್ಡ ನಷ್ಟ ಎದುರಿಸುತ್ತಿವೆ. ಕೃಷಿ ಕ್ಷೇತ್ರ ಸಹ ಇದು ಸವಾಲಾಗಿದೆ. ಕಳೆದ ವರ್ಷ ಸುಮಾರು 4.45 ಲಕ್ಷ ವಿದೇಶಿ ಕಾರ್ಮಿಕರು ಸೌದಿಯಿಂದ ಹೊರ ನಡೆದಿದ್ದರು. ಆದರೆ, ಈ ವರ್ಷ ಈ ಪ್ರಯಾಣ ಮೂರರಷ್ಟು ಆಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+