ಯೆಮನ್ ನಲ್ಲಿ ಕಾರ್ ಬಾಂಬ್ ದಾಳಿ: 11 ಜನ ಸಾವು
ಸಾನಾ(ಯೆಮನ್), ಜನವರಿ 30: ಅರಬ್ ರಾಷ್ಟ್ರ ಯೆಮನ್ ನ ಮಿಲಿಟರಿ ಚೆಕ್ ಪಾಯಿಂಟ್ ನಲ್ಲಿ ಸಂಭವಿಸಿದ ಭೀಕರ ಕಾರ್ ಬಾಂಬ್ ದಾಳಿಯಲ್ಲಿ 11 ಜನ ಮೃತರಾಗಿದ್ದಾರೆ.
ಮಿಲಿಟರಿ ಚೆಕ್ ಪಾಯಿಂಟಿಗೆ ಬಂದ ಗನ್ ಮ್ಯಾನ್ ವೊಬ್ಬ ಇದ್ದಕ್ಕಿದ್ದಂತೆ ಗುಂಡು ಹಾರಿಸಲು ಆರಂಭಿಸಿ, ನಂತರ ಕಾರನ್ನು ಚೆಕ್ ಪಾಯಿಂಟ್ ಒಳಗೆ ನುಗ್ಗಿಸಿದ್ದಾನೆ.
ಈ ಸಂದರ್ಭದಲ್ಲಿ ಸಂಭವಿಸಿದ ಕಾರ್ ಬಾಂಬ್ ಸ್ಫೋಟದಲ್ಲಿ 11 ಜನ ಮೃತರಾಗಿದ್ದು, ಹಲವರಿಗೆ ಗಾಯವಾಗಿದೆ. ಹೆಚ್ಚಿನ ಮಾಹಿತಿ ಲಭ್ಯವಾಗಿಲ್ಲ.

ಘಟನೆ ಯೆಮನ್ ನ ಶಾಬ್ವಾ ದ ರಾಜಧಾನಿ ಅಟಾಖ್ ಎಂಬಲ್ಲಿ ನಡೆದಿದೆ. ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.












Click it and Unblock the Notifications