Russia: ಅಬ್ಬಬ್ಬಾ ಲಾಟರಿ... ಉತ್ತರ ಕೊರಿಯಾದ 10 ಸಾವಿರ ಸೈನಿಕರು ರಷ್ಯಾ ಪಾಲು!
ಅಬ್ಬಬ್ಬಾ ಲಾಟರಿ... ಅಷ್ಟಕ್ಕೂ ಈ ಮಾತು ಈಗ ರಷ್ಯಾಗೆ ಪಕ್ಕಾ ಅನ್ವಯ ಆಗುತ್ತೆ. ಯಾಕೆ ಅಂದ್ರೆ ಉಕ್ರೇನ್ ವಿರುದ್ಧ ಯುದ್ಧ ಸಾರಿ ಲಕ್ಷ ಲಕ್ಷ ಸೈನಿಕರನ್ನು ಕಳೆದುಕೊಂಡು ರಷ್ಯಾ ಸೇನೆ ಇದೀಗ ದೊಡ್ಡ ಸಂಕಷ್ಟಕ್ಕೆ ಸಿಲುಕಿದೆ. ಇಂತಹ ಸಮಯದಲ್ಲೇ ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಅವರ ಗೆಳೆಯ, ಉತ್ತರ ಕೊರಿಯಾದ ಸರ್ವಾಧಿಕಾರಿ ಕಿಮ್ ಜಾಂಗ್ ಉನ್ ಭರ್ಜರಿ ಗಿಫ್ಟ್ ಕೊಟ್ಟಿದ್ದಾನೆ. ಹಾಗಾದ್ರೆ ಏನದು ಕಿಮ್ ಜಾಂಗ್ ಉನ್ ಕೊಟ್ಟಿರುವ ಉಡುಗೊರೆ? ಆ ಬಗ್ಗೆ ತಿಳಿಯೋಣ ಮುಂದೆ ಓದಿ.
ಉಕ್ರೇನ್ ವಿರುದ್ಧ ಯುದ್ಧ ಸಾರಿದ ನಂತರ ರಷ್ಯಾ ನೂರಾರು ಸಮಸ್ಯೆ ಎದುರಿಸುತ್ತಿದೆ. ಈ ಪೈಕಿ ರಷ್ಯಾ ನೆಲದಲ್ಲಿ ದೊಡ್ಡ ತಲ್ಲಣ ಶುರುವಾಗಿದ್ದು, ಈಗಾಗಲೇ ರಷ್ಯಾ ಮಿಲಿಟರಿ ಲಕ್ಷ ಲಕ್ಷ ಸೈನಿಕರನ್ನ ಕಳೆದುಕೊಂಡಿದೆ ಎಂಬ ಆರೋಪ ಕೂಡ ಇದೆ. ಇಷ್ಟೆಲ್ಲದರ ನಡುವೆ ರಷ್ಯಾ ಬಳಿ ಇರುವ ಲಕ್ಷ ಲಕ್ಷ ಸೈನಿಕರು ಉಕ್ರೇನ್ ವಿರುದ್ಧದ ಯುದ್ಧದಲ್ಲಿ ಜೀವ ಬಿಟ್ಟ ಸುದ್ದಿಯು ಭಯ ಹುಟ್ಟಿಸಿದೆ. ಹೀಗಾಗಿ ರಷ್ಯಾ ಸೇನೆಗೆ ಸೇರುವ ಸೈನಿಕರ ಸಂಖ್ಯೆ ಕೂಡ ಕಡಿಮೆ ಆಗ್ತಿದೆ ಎಂಬ ಆರೋಪ ಇದೆ. ಹೀಗಿದ್ದಾಗ ರಷ್ಯಾಗೆ ದೊಡ್ಡ ಲಾಟರಿ ಹೊಡೆದಿದ್ದು, ಉತ್ತರ ಕೊರಿಯಾ ರಷ್ಯಾ ಪರವಾಗಿ ಹೋರಾಟ ನಡೆಸಲು ತನ್ನ 10 ಸಾವಿರ ಸೈನಿಕರನ್ನೇ ಗಿಫ್ಟ್ ಕೊಡುತ್ತಿದೆ!

ಅಮೆರಿಕ & ಪಾಶ್ಚಿಮಾತ್ಯರ ಸ್ಕೆಚ್ ಏನು?
ರಷ್ಯಾ ಸೇನೆ ಉಕ್ರೇನ್ ನೆಲದ ಮೇಲೆ ಭಾಗಶಃ ಹಿಡಿತ ಸಾಧಿಸಿದ್ದು, ಗೆಲುವಿನ ರಣ ಕೇಕೆಯನ್ನೂ ಹಾಕುತ್ತಿದೆ. ರಷ್ಯಾ ಇಡೀ ಜಗತ್ತಿನಲ್ಲೇ ಅತಿದೊಡ್ಡ ಭೂಮಿ ಹೊಂದಿರುವ ದೇಶ, ಹಾಗೇ ಇಲ್ಲಿ ದೊಡ್ಡ ದೊಡ್ಡ ಕೈಗಾರಿಕೆಗಳು ಕೂಡ ಇವೆ. ಅಮೆರಿಕ & ಯುರೋಪ್ ಮೂಲದ ಕಂಪನಿಗಳು ರಷ್ಯಾದಲ್ಲಿ ವ್ಯವಹಾರ ನಡೆಸುತ್ತಿದ್ದವು. ಆದ್ರೆ ಉಕ್ರೇನ್ ವಿರುದ್ಧ ರಷ್ಯಾ ಯುದ್ಧವನ್ನ ಘೋಷಣೆ ಮಾಡಿದ ಬಳಿಕ ಅಮೆರಿಕ & ಯುರೋಪ್ ಮೂಲದ ಕಂಪನಿಗಳು ಒಂದೊಂದಾಗಿ ರಷ್ಯಾ ಬಿಟ್ಟು ಎಸ್ಕೇಪ್ ಆಗಿವೆ. ಈ ಮೂಲಕ ರಷ್ಯಾ ಉಸಿರುಗಟ್ಟಿಸಿ, ಗೆಲುವು ಸಾಧಿಸಲು ಅಮೆರಿಕ ಪ್ಲಾನ್‌ನ ಕೂಡ ಮಾಡಿತ್ತು. ಆದರೆ ಅದು ಯಾವುದೂ ವರ್ಕೌಟ್ ಆಗುತ್ತಿಲ್ಲ!
ಯುದ್ಧ.. ಯುದ್ಧ.. ಯುದ್ಧ... ಹೀಗೆ ಎಲ್ಲಿ ಕೇಳಿದರೂ ಬರೀ ಯುದ್ಧಗಳ ವಿಚಾರವೇ, ಯುದ್ಧ ಬಿಟ್ಟು ಬೇರೆ ಮಾತುಗಳು ಜಗತ್ತಿನಾದ್ಯಂತ ಈಗ ಹಾಟ್ ನ್ಯೂಸ್ ಆಗಿ ಓಡಾಡುತ್ತಿಲ್ಲ. 2022ರ ಫೆಬ್ರವರಿ ತಿಂಗಳಲ್ಲಿ ಶುರುವಾದ ರಷ್ಯಾ VS ಉಕ್ರೇನ್ ಯುದ್ಧ ಧಗಧಗಿಸ್ತಿದೆ. ಈಗಾಗಲೇ ಲಕ್ಷಾಂತರ ಜನರನ್ನ ಬಲಿ ತೆಗೆದುಕೊಂಡಿರುವ ಈ ಯುದ್ಧ ತಣ್ಣಗಾಗುತ್ತಿಲ್ಲ. ಈ ಸಮಯದಲ್ಲಿ ರಷ್ಯಾ ಕೂಡ ತನ್ನ ದಾಳಿ ಮತ್ತಷ್ಟು ಭೀಕರಗೊಳಿಸಿದೆ ಶತ್ರುವಿನ ಮೇಲೆರಗುತ್ತಿದೆ. ಹೇಗಾದರೂ ಮಾಡಿ ಯುದ್ಧ ನಿಲ್ಲಿಸಬೇಕು ಎಂಬ ಪ್ರಯತ್ನ ಕೂಡ ವಿಫಲವಾಗುತ್ತಿವೆ.












Click it and Unblock the Notifications