ಅಮೆರಿಕದಲ್ಲಿ ಮತ್ತೆ ಶೂಟೌಟ್: ಓರ್ವ ಬಲಿ, ನಾಲ್ವರಿಗೆ ಗಾಯ

ವಾಷಿಂಗ್ಟನ್ ಡಿಸಿ, ಸೆಪ್ಟೆಂಬರ್ 20: ಅಮೆರಿಕದ ಪೆನ್ಸಿಲ್ವಿನಿಯಾದಲ್ಲಿ ನಡೆದ ಶೂಟೌಟ್ ಒಂದರಲ್ಲಿ ಓರ್ವ ವ್ಯಕ್ತಿ ಮೃತನಾಗಿದ್ದು, ನಾಲ್ವರು ಗಾಯಗೊಂಡ ಘಟನೆ ನಡೆದಿದೆ.

ಇಲ್ಲಿನ ಜಿಲ್ಲಾ ಮ್ಯಾಜಿಸ್ಟ್ರೇಟ್ ಕಚೇರಿಯೊಂದರಲ್ಲಿ ಶೂಟೌಟ್ ನಡೆದಿದ್ದು, ಮೃತ ವ್ಯಕ್ತಿ ಗನ್ ಮ್ಯಾನ್ ಇರಬಹುದು ಎನ್ನಲಾಗಿದೆ. ಈ ಕುರಿತು ಖಚಿತ ಮಾಹಿತಿ ಲಭ್ಯವಾಗಿಲ್ಲ. ಘಟನೆಯಲ್ಲಿ ಗಾಯಗೊಂಡವರನ್ನು ಆಸ್ಪತ್ರೆಗೆ ರವಾನಿಸಲಾಗಿದೆ.

ಇತ್ತೀಚೆಗಷ್ಟೇ ಅಮೆರಿಕದ ಫ್ಲೋರಿಡಾದಲ್ಲಿ ನಡೆದ ಶೂಟೌಟ್ ವೊಂದರಲ್ಲಿ ನಾಲ್ವರು ಮೃತಪಟ್ಟಿದ್ದರು.

1 killed, 4 injured in Pennsylvania shooting

ಅದಕ್ಕೂ ಮುನ್ನ ಮೇ ತಿಂಗಳಿನಲ್ಲಿ ಅಮೆರಿಕದ ಟೆಕ್ಸಾಸ್ ಸಿಟಿಯ ಸ್ಯಾಂಟಫೆ ಹೈಸ್ಕೂಲಿನಲ್ಲಿ ನಡೆದ ಶೂಟೌಟ್ ನಲ್ಲಿ ಒಟ್ಟು 10 ಮಕ್ಕಳು ಬಲಿಯಾಗಿದ್ದರು.

ಕಳೆದ ಫೆಬ್ರವರಿಯಲ್ಲಿ ಫ್ಲೋರಿಡಾದ ಶಾಲೆಯೊಂದರಲ್ಲಿ ನಡೆದ ಅದೇ ಶಾಲೆಯ ಹಳೇ ವಿದ್ಯಾರ್ಥಿಯೇ ನಡೆಸಿದ ಶೂಟೌಟ್ ನಲ್ಲಿ 17 ಜನ ಮೃತರಾಗಿದ್ದರು. ಈ ಘಟನೆ ಅಮೆರಿಕದ ಇತಿಹಾಸದಲ್ಲೇ ಅತ್ಯಂತ ಕ್ರೂರ ಘಟನೆ ಅನ್ನಿಸಿತ್ತು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+