ಸಮೀಕ್ಷೆ: ಎನ್ಡಿಎಗೆ ಬಹುಮತ, ಮೋದಿ ಸರ್ಕಾರ ಮತ್ತೆ ಅಧಿಕಾರಕ್ಕೆ

Recommended Video

      Lok Sabha Elections 2019 : ಸಮೀಕ್ಷೆ ಪ್ರಕಾರ ಬಿಜೆಪಿ ಅಧಿಕಾರಕ್ಕೆ, ಆದರೆ ಕಾಂಗ್ರೆಸ್? | Oneindia Kannada

      ಲೋಕಸಭೆ ಚುನಾವಣೆ 2019ಕ್ಕೆ ದಿಕ್ಸೂಚಿ ಎಂದೇ ಬಿಂಬಿಸಲಾಗಿದ್ದ ಪಂಚ ರಾಜ್ಯಗಳ ಚುನಾವಣೆ ಫಲಿತಾಂಶದಲ್ಲಿ ಬಿಜೆಪಿಗೆ ಸೋಲುಂಟಾಗಿದೆ. ಮಧ್ಯಪ್ರದೇಶ, ಛತ್ತೀಸ್ ಗಢ ಹಾಗೂ ರಾಜಸ್ಥಾನದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರುತ್ತಿದೆ. ಮಿಜೋರಾಂ ಹಾಗೂ ತೆಲಂಗಾಣದಲ್ಲಿ ಬಿಜೆಯೇತರ ಸರ್ಕಾರ ಸ್ಥಾಪನೆಯಾಗುತ್ತಿದೆ. ಆದರೆ, ಬಿಜೆಪಿಯ ಶೇಕಡವಾರು ಮತಗಳಿಕೆಯನ್ನು ಛಿದ್ರಗೊಳಿಸಲು ಕಾಂಗ್ರೆಸ್ಸಿಗೆ ಸಾಧ್ಯವಾಗಲಿಲ್ಲ.

      ಲೋಕಸಭೆ ಚುನಾವಣೆ ಮೇಲೆ ಪಂಚ ರಾಜ್ಯಗಳ ಚುನಾವಣೆ ಫಲಿತಾಂಶ ಯಾವುದೇ ಪರಿಣಾಮ ಬೀರಲ್ಲ ಎಂದು ಬಿಜೆಪಿ ಮುಖಂಡರು ಹೇಳುತ್ತಿದ್ದಾರೆ.

      ಇದಕ್ಕೆ ಪೂರಕವಾಗಿ ಜೀ- ವಿಎಂಆರ್ ನಡೆಸಿದ ಸಮೀಕ್ಷೆಯೊಂದರಲ್ಲಿ ಬಿಜೆಪಿಗೆ 212 ಹಾಗೂ ಬಿಜೆಪಿ ನೇತೃತ್ವದ ನ್ಯಾಷನಲ್ ಡೆಮೊಕ್ರಾಟಿಕ್ ಅಲೈಯನ್ಸ್ (ಎನ್ ಡಿಎ)ಗೆ 293 ಸ್ಥಾನಗಳು ಲಭಿಸಲಿದೆ.

      ಮ್ಯಾಜಿಕ್ ಸಂಖ್ಯೆ 272 ದಾಟಲಿರುವ ಬಿಜೆಪಿ, ಮತ್ತೊಮ್ಮೆ ಅಧಿಕಾರಕ್ಕೆ ಬರಲಿದೆ. ಮೋದಿ ಅವರು ಮತ್ತೊಮ್ಮೆ ಪ್ರಧಾನಿಯಾಗಲಿದ್ದಾರೆ ಎಂದು ಹೇಳಿದೆ. ಐದು ರಾಜ್ಯಗಳಿಂದ ಬಂದಿರುವ ಫಲಿತಾಂಶ, ಬಿಜೆಪಿ ಹಾಗೂ ಕಾಂಗ್ರೆಸ್ ಗಳಿಸಿರುವ ಶೇಕಡಾವಾರು ಮತಗಳ ಲೆಕ್ಕಾಚಾರದ ಆಧಾರ ಮೇಲೆ ಜೀ ವಿಎಂಆರ್ ಸಂಸ್ಥೆ ಸಮೀಕ್ಷೆ ನಡೆಸಿ, ದೇಶದ ನಾಲ್ಕು ವಿಭಾಗದಲ್ಲಿ ಎನ್ಡಿಎ ಹಾಗೂ ಯುಪಿಎ ಎಷ್ಟು ಸ್ಥಾನಗಳನ್ನು ಗಳಿಸಬಹುದು ಎಂಬುದನ್ನು ತಿಳಿಸಲಾಗಿದೆ.

      ಅಂತಿಮ ಫಲಿತಾಂಶ :
      ಎನ್​ಡಿಎ - 293
      ಯುಪಿಎ - 233
      ಇತರೆ - 17

      ಉತ್ತರ ಭಾರತದಲ್ಲಿ ಯಾವ ಕೂಟಕ್ಕೆ ಎಷ್ಟು?

      ಉತ್ತರ ಭಾರತದಲ್ಲಿ ಯಾವ ಕೂಟಕ್ಕೆ ಎಷ್ಟು?

      ಉತ್ತರ ಭಾರತದಲ್ಲಿ ಒಟ್ಟು 10 ರಾಜ್ಯಗಳಿದ್ದು, ಒಟ್ಟು 172 ಲೋಕಸಭಾ ಕ್ಷೇತ್ರಗಳಿವೆ. 2014ರಲ್ಲಿ 172 ಸೀಟುಗಳ ಪೈಕಿ ಬಿಜೆಪಿ 137 ಸೀಟು ಗೆದ್ದಿತ್ತು.

      ಜೀ -ವಿಎಂಆರ್ ಸಮೀಕ್ಷೆಯಂತೆ 2019ರಲ್ಲಿ ಬಿಜೆಪಿ 87 ಕ್ಷೇತ್ರಗಳಲ್ಲಿ ಮಾತ್ರ ಗೆಲುವು ಮಾತ್ರ ಗಳಿಸಲು ಸಾಧ್ಯ, 30 ಸೀಟು ಕಾಂಗ್ರೆಸ್​ ಗೆಲ್ಲಲಿದೆ.

      ಆದರೆ, ಎನ್ಡಿಎ ಲೆಕ್ಕಾಚಾರದಲ್ಲಿ ಬಿಜೆಪಿ ನೇತೃತ್ವದ ಮೈತ್ರಿಕೂಟಕ್ಕೆ 91 ಸ್ಥಾನ ಲಭಿಸಲಿದೆ. ಯುಪಿಎಗೆ ಎಸ್ಪಿ ಹಾಗೂ ಬಿಎಸ್ಪಿ ಬಲ ಸಿಗಲಿದೆ ಹೀಗಾಗಿ, ಯುಪಿಎ 76 ಸ್ಥಾನ ಗಳಿಸಬಹುದು., ಎನ್ಡಿಎ ಹಾಗೂ ಯುಪಿಎಯೇತರ ಪಕ್ಷಗಳಿಗೆ 5 ಸ್ಥಾನ ಲಭಿಸಲಿದೆ.

      ದಕ್ಷಿಣ ಭಾರತದಲ್ಲಿ ಯಾವ ಮೈತ್ರಿಕೂಟಕ್ಕೆ ಜಯ

      ದಕ್ಷಿಣ ಭಾರತದಲ್ಲಿ ಯಾವ ಮೈತ್ರಿಕೂಟಕ್ಕೆ ಜಯ

      2014ರಲ್ಲಿ ದಕ್ಷಿಣ ಭಾರತದಲ್ಲಿ ಬಿಜೆಪಿಗೆ 22 ಸೀಟು, ಕಾಂಗ್ರೆಸ್ಸಿಗೆ 19 ಸ್ಥಾನ ಲಭಿಸಿತ್ತು. ಈ ಬಾರಿ ಬಿಜೆಪಿ ಸೀಟು 20ಕ್ಕೆ ಕುಸಿಯಲಿದ್ದು, ಕಾಂಗ್ರೆಸ್ ಸ್ಥಾನ 26ಕ್ಕೇರಲಿದೆ.

      ಎನ್​ಡಿಎ ಮೈತ್ರಿ ಕೂಟದಲ್ಲಿರುವ ವೈಎಸ್ಸಾರ್ ಕಾಂಗ್ರೆಸ್​, ಟಿಆರ್​ಎಸ್​ ಹಾಗೂ ಎಐಎಡಿಎಂಕೆ ಬಲದಿಂದ 67 ಸ್ಥಾನಗಳನ್ನು ಗಳಿಸಬಹುದು. ಕಾಂಗ್ರೆಸ್ ಜತೆ ಟಿಡಿಪಿ ಹಾಗೂ ಡಿಎಂಕೆ ಕೈಜೋಡಿಸಿದರೆ 62 ಸ್ಥಾನ ಗೆಲ್ಲಬಹುದು.

      2019ರ ಜೀ-ವಿಎಂಆರ್ ಭವಿಷ್ಯ
      ಎನ್ಡಿಎ: 67
      ಯುಪಿಎ : 62
      ಇತರೆ : 2

      ಪೂರ್ವ ಭಾರತದಲ್ಲಿ ಯಾರಿಗೆ ಹೆಚ್ಚಿನ ಬಲ?

      ಪೂರ್ವ ಭಾರತದಲ್ಲಿ ಯಾರಿಗೆ ಹೆಚ್ಚಿನ ಬಲ?

      ಪೂರ್ವ ಭಾರತದಲ್ಲಿ 12 ರಾಜ್ಯಗಳಿದ್ದು, 137 ಲೋಕಸಭಾ ಕ್ಷೇತ್ರಗಳಿವೆ.
      2014ರಲ್ಲಿ ಬಿಜೆಪಿ 45 ಸ್ಥಾನ ಗಳಿಸಿತ್ತು, ಕಾಂಗ್ರೆಸ್ 14 ಪಡೆದಿತ್ತು.

      ಎನ್​ಡಿಎಗೆ ಜೆಡಿ(ಯು), ಎಲ್​ಜೆಪಿ ಜತೆ ಮೈತ್ರಿ ಬಲದಿಂದ 54 ಕ್ಷೇತ್ರ ಲಭಿಸಬಹುದು. ಯುಪಿಎಗೆ ಆರ್​ಜೆಡಿ ಹಾಗೂ ಟಿಎಂಸಿ ಕೈಜೋಡಿಸಿದ್ರೆ 73 ಸ್ಥಾನ ಗೆಲ್ಲಬಹುದು.

      ಎನ್ಡಿಎ: 54
      ಯುಪಿಎ: 73
      ಇತರೆ : 10

      ಪಶ್ಚಿಮ ಭಾರತದಲ್ಲಿ ಯಾರ ಪ್ರಾಬಲ್ಯ ಜೋರು?

      ಪಶ್ಚಿಮ ಭಾರತದಲ್ಲಿ ಯಾರ ಪ್ರಾಬಲ್ಯ ಜೋರು?

      ಪಶ್ಚಿಮ ಭಾರತದ 6 ರಾಜ್ಯಗಳ ಪೈಕಿ 103 ಕ್ಷೇತ್ರಗಳಲ್ಲಿ 2014ರಲ್ಲಿ ಬಿಜೆಪಿ 78 ಕಾಂಗ್ರೆಸ್​ ಕೇವಲ 2 ಸ್ಥಾನ ಗೆದ್ದಿತು.

      ಆದರೆ, ಈ ಬಾರಿ ಬಿಜೆಪಿ ತನ್ನ ಪ್ರಾಬಲ್ಯ ಕಳೆದುಕೊಳ್ಳುವ ಸಾಧ್ಯತೆ ಇದೆ. ಒಂದು ವೇಳೆ ಶಿವಸೇನೆ ಹಾಗೂ ಎಂಜೆಪಿ ಜತೆ ಸೇರಿದರೆ 81 ಕ್ಷೇತ್ರ ಗೆಲ್ಲಬಹುದು. ಆದರೆ ಇದು ಎಷ್ಟರ ಮಟ್ಟಿಗೆ ಯಶಸ್ಸು ಕಾಣಲಿದೆ ಎಂಬುದನ್ನ ಕಾಯ್ದು ನೋಡಬೇಕಾಗಿದೆ.

      ಎನ್ಡಿಎ : 81
      ಯುಪಿಎ: 22

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+