YouTube ಸ್ಥಗಿತಗೊಂಡಿದೆಯೇ ? ನೂರಾರು ಬಳಕೆದಾರರಿಗೆ ಎದುರಾಯ್ತು ಸಂಕಷ್ಟ, ಏನಿದು ಸಮಸ್ಯೆ

YouTube ವಿಶ್ವದಾದ್ಯಂತ ಮನ್ನಣೆ ಗಳಿಸಿರುವ ಸಾಮಾಜಿಕ ಜಾಲತಾಣದಲ್ಲಿ ಸಮಸ್ಯೆ ಎದುರಾಗಿದೆ. YouTube ಸ್ಥಗಿತಗೊಂಡಿದೆಯೇ? ಎನ್ನುವ ಚರ್ಚೆ ನಡೆಯುತ್ತಿದ್ದು, ಅಪ್‌ಲೋಡ್ ಸಮಸ್ಯೆ ಆಗುತ್ತಿರುವ ಬಗ್ಗೆ ಹಲವರು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

ಔಟೇಜ್-ಟ್ರ್ಯಾಕಿಂಗ್ ಪ್ಲಾಟ್ ಫಾರ್ಮ್ ಡೌನ್ ಡೆಕ್ಟರ್ ಪ್ರಕಾರ, ಹಲವಾರು ಬಳಕೆದಾರರು ಪ್ರಸ್ತುತ YouTube ನಲ್ಲಿ ಸಮಸ್ಯೆಗಳನ್ನು ವರದಿ ಮಾಡುತ್ತಿದ್ದಾರೆ. ಹೆಚ್ಚಿನ ದೂರುಗಳು ವಿಡಿಯೋಗಳು ಮತ್ತು ಇತರ ವಿಷಯವನ್ನು ಸ್ಟ್ರೀಮಿಂಗ್ ಪ್ಲಾಟ್ ಫಾರ್ಮ್‌ಗೆ ಅಪ್ ಲೋಡ್ ಮಾಡುವಾಗ ಉಂಟಾಗುವ ಸಮಸ್ಯೆಗಳಿಗೆ ಸಂಬಂಧಿಸಿವೆ ಎಂದು ಹೇಳಲಾಗಿದೆ.

YouTube

YouTube ನಲ್ಲಿ ವೀಡಿಯೊಗಳನ್ನು ಅಪ್ ಲೋಡ್ ಮಾಡಲು ಸಾಧ್ಯವಾಗುತ್ತಿಲ್ಲವೇ? ನೀವು ಹಾಗಾದರೆ ಈ ಸಮಸ್ಯೆಯನ್ನು ಎದುರಿಸುತ್ತಿರುವವರು ನೀವು ಮಾತ್ರವಲ್ಲ. YouTube ಬಳಕೆದಾರರು ವೀಡಿಯೊ-ಸ್ಟ್ರೀಮಿಂಗ್ ಪ್ಲಾಟ್ ಫಾರ್ಮ್ ನಲ್ಲಿ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಡೌನ್ ಡೆಕ್ಟೆಕ್ಟರ್ ವೆಬ್ ಸೈಟ್ ಪ್ರಕಾರ, ಮಧ್ಯಾಹ್ನ 3 ಗಂಟೆಯ ನಂತರ ತೀವ್ರ ಸಮಸ್ಯೆ ಆಗಿರುವುದು ವರದಿಯಾಗಿದೆ.

ಯೂಟ್ಯೂಬ್ ಬಳಕೆದಾರರಿಗೆ ಸಮಸ್ಯೆ

ಇನ್ನು ಮೇ 13ರ ಬುಧವಾರದಂದು ಯೂಟ್ಯೂಬ್ ಅಪ್ಲೋಡಿಂಗ್‌ ಸಿಸ್ಟಂನಲ್ಲಿ ಸಮಸ್ಯೆ ಎದುರಾಗಿದ್ದು, ಇದರಿಂದ ಲಕ್ಷಾಂತರ ಜನರು ಸಮಸ್ಯೆ ಎದುರಿಸುವಂತೆ ಆಯಿತು. ಮುಖ್ಯವಾಗಿ ಯೂಟ್ಯೂಬ್‌ನಲ್ಲಿ ವಿಡಿಯೋಗಳನ್ನು ಅಪ್ಲೋಡ್ ಮಾಡುವುದಕ್ಕೆ ಯೂಟ್ಯೂಬ್ ಕಂಟೆಂಟ್ ಕ್ರಿಯೇಟರ್ ಹಾಗೂ ಸುದ್ದಿ ಮಾಧ್ಯಮಗಳು ಸೇರಿದಂತೆ ಹಲವರು ಸಮಸ್ಯೆ ಎದುರಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿತ್ತು. ಅಂದಾಜು ನೂರಕ್ಕೂ ಹೆಚ್ಚು ಬಳಕೆದಾರರು ಈ ಸಂಬಂಧ ದೂರು ದಾಖಲಿಸಿದ್ದರು.

ಗೂಗಲ್‌ ಡೌನ್ ಸಮಸ್ಯೆ

ಬುಧವಾರ ಯೂಟ್ಯೂಬ್‌ನಲ್ಲಿ ಸಮಸ್ಯೆ ಎದುರಾಗಿದ್ದರೆ. ಮಂಗಳವಾರ ಬೆಳಿಗ್ಗೆಯೇ ಗೂಗಲ್‌ನಲ್ಲಿ ಸಮಸ್ಯೆ ಎದುರಾಗಿತ್ತು. ಗೂಗಲ್ ಸರ್ಚ್‌ನಲ್ಲಿ ಸಮಸ್ಯೆ ಎದುರಾಗಿತ್ತು. ಒಂದರಿಂದ ಎರಡು ಗಂಟೆ ಅವಧಿಯ ವರೆಗೂ ಈ ಸಮಸ್ಯೆ ಮುಂದುವರಿದಿತ್ತು. ವಿವಿಧ ಸೋಶಿಯಲ್ ಮೀಡಿಯಾಗಳಲ್ಲಿ ಸಮಸ್ಯೆಗಳು ಎದುರಾಗುತ್ತಿರುವುದು ಬಳಕೆದಾರರಿಗೆ ಸಮಸ್ಯೆ ಆಗುತ್ತಿದೆ. ಕಳೆದ ಕೆಲವು ತಿಂಗಳುಗಳ ಹಿಂದೆ ಎಕ್ಸ್‌ನಲ್ಲಿಯೂ ಇದೇ ಮಾದರಿಯಲ್ಲಿ ಪದೇ ಪದೆ ಸಮಸ್ಯೆ ಎದುರಾಗುತ್ತಿತ್ತು. ಇದೀಗ ಈ ಸಮಸ್ಯೆಗೆ ಕಾಣಿಸಿಕೊಳ್ಳುತ್ತಿಲ್ಲ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+