ಇಸ್ಪೀಟ್‌ ಅಡ್ಡೆಯಾದ ಮೆಟ್ರೋ ರೈಲು.. ವಿಡಿಯೋ ಭಾರೀ ವೈರಲ್‌

ಮೆಟ್ರೋ ರೈಲು ಒಂದಲ್ಲ ಒಂದು ವಿಚಾರಕ್ಕೆ ಸುದ್ದಿಯಾಗುತ್ತಲೇ ಇರುತ್ತದೆ. ಮೆಟ್ರೋ ನಿಲ್ದಾಣಗಳಲ್ಲಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆಗಳು ನಡೆದಿವೆ. ಅಲ್ಲದೆ, ರೀಲ್ಸ್‌, ಫೋಟೋಶೂಟ್‌ ಮಾಡಿ ಇತರ ಪ್ರಯಾಣಿಕರಿಗೆ ತೊಂದರೆ ನೀಡಿ ಕೊನೆಗೆ ಪೊಲೀಸರ ಕೈಗೆ ಸಿಕ್ಕಿ ಸಂಕಷ್ಟಕ್ಕೆ ಸಿಲುಕಿದ್ದಾರೆ. ಹಾಗೆಯೇ ಇದೀಗ ಅದೇ ರೀತಿಯ ಘಟನೆಯೊಂದು ನಡೆದಿದೆ.

ಆತ್ಮಹತ್ಯೆ ಮಾಡಿಕೊಂಡು ಸಾವನ್ನಪ್ಪಿರುವ ಘಟನೆ ಇತ್ತೀಚೆಗಷ್ಟೇ ನವದೆಹಲಿನಲ್ಲಿ ಮೆಟ್ರೋ ನಿಲ್ದಾಣದಲ್ಲಿ ನಡೆದಿತ್ತು. ಮತ್ತೇ ಇದೀಗ ಮೆಟ್ರೋ ರೈಲಿನಲ್ಲಿಯೇ ಯುವಕರ ಗೊಂಪೊಂದು ಇಸ್ಪೀಟ್‌ ಆಡುತ್ತಾ ಕುಳಿತ್ತಿದ್ದು, ಈ ವಿಡಿಯೋ ಇದೀಗ ಸಾಮಜಿಕ ಜಾಲತಾಣದಲ್ಲಿ ಭಾರೀ ವೈರಲ್‌ ಆಗುತ್ತಿದೆ.

Youths group Played ispit card at Metro rail video goes viral

ಮೆಟ್ರೋದಲ್ಲಿ ರೊಮ್ಯಾನ್ಸ್‌, ಪ್ರಯಾಣಿಕರಿಗೆ ತೊಂದರೆ ಕೊಟ್ಟು ರೀಲ್ಸ್‌, ಡಾನ್ಸ್‌ ಮಾಡಿದಂತಹ ಘಟನೆಗಳು ನಡೆದಿದ್ದವು. ಇದೀಗ ಮೆಟ್ರೋ ಜೂಜಾಟದ ಅಡ್ಡೆಯಾಗಿದೆ. ನವದೆಹಲಿ ಮೆಟ್ರೋದಲ್ಲಿ ಯುವಕರ ಗುಂಪೊಂದು ಸಾರ್ವಜನಿಕವಾಗಿ ಇಸ್ಪೀಟ್‌ ಆಡಿದ್ದು, ಸದ್ಯ ಈ ವಿಡಿಯೋ ಭಾರೀ ವೈರಲ್‌ ಆಗುತ್ತಿದೆ. rocky_paswan_ji ಎಂಬ ಇನ್ಸ್ಟಾಗ್ರಾಂ ಖಾತೆಯಲ್ಲಿ ಈ ವಿಡಿಯೋವನ್ನು ಹಂಚಿಕೊಳ್ಳಲಾಗಿದೆ. ಇನ್ನು ಈ ಖಾತೆಯಲ್ಲಿ Delhi Metro ಅಂತಲೂ ಶೀರ್ಷಿಕೆಯನ್ನು ಬರೆದುಕೊಂಡಿದ್ದಾರೆ.

ಆಹತ್ಮಹತ್ಯೆ ಮಾಡಿಕೊಂಡ ವ್ಯಕ್ತಿ: 49 ವರ್ಷದ ವ್ಯಕ್ತಿಯೊಬ್ಬರು ಮೆಟ್ರೋ ನಿಲ್ದಾಣದಲ್ಲಿ ಆತ್ಮಹತ್ಯೆ ಮಾಡಿಕೊಂಡು ಪ್ರಾಣ ಕಳೆದುಕೊಂಡಿರುವ ಘಟನೆ ಆಗಸ್ಟ್‌ 08ರ ಮಧ್ಯಾಹ್ನ ನಡೆದಿದೆ.

ಅದರಲ್ಲೂ ಬೆಂಗಳೂರಿನ ನಮ್ಮ ಮಟ್ರೋ ಭಾರೀ ಸುದ್ದಿಯಾಗುತ್ತಲೇ ಇದೆ. ಇತ್ತೀಚೆಗಷ್ಟೇ ನಗರದಲ್ಲಿ ವ್ಯಕ್ತಿಯೊಬ್ಬರು ಮೆಟ್ರೋ ಹಳಿಗೆ ಜಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿತ್ತು. ಅಷ್ಟೇ ಅಲ್ಲದೆ, ಈ ಹಿಂದೆಯೂ ಸಹ ಹಲವರು ಆಹತ್ಮಹತ್ಯೆಗೆ ಯತ್ನಿಸಿದ ಘಟನೆಗಳು ಕೂಡ ನಗರದ ಹಲವು ಮೆಟ್ರೋ ನಿಲ್ದಾಣಗಳಲ್ಲಿ ನಡೆದಿವೆ. ಹಾಗೆಯೇ ಇಂತಹಹದ್ದೇ ಘಟನೆಯೊಂದು ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ನಿನ್ನೆ (ಆಗಸ್ಟ್‌ 08) ನಡೆದಿದೆ.

ಸೂರಜ್ಮಲ್​​ ಮೆಟ್ರೋ ನಿಲ್ದಾಣದಲ್ಲಿ ನಿನ್ನೆ ಮಧ್ಯಾಹ್ನದ ವೇಳಗೆ ಫ್ಲಾಟ್​ಫಾರ್ಮ್​ 1ರಿಂದ ರಸ್ತೆಗೆ ಜಿಗಿದು 49 ವರ್ಷದ ವ್ಯಕ್ತಿ ಆತ್ಮಹತ್ಯೆ ಮಾಡಿದ್ದು, ಈ ದೃಶ್ಯ ಇದೀಗ ಎಲ್ಲೆಡೆ ವೈರಲ್‌ ಆಗುತ್ತಿದೆ. ಇನ್ನು ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿಯನ್ನು ಹರೀಶ್​ ಎಂದು ಗುರುತಿಸಲಾಗಿದ್ದು, ಈತ ಇಂಡಿಯನ್​ ಆಯಿಲ್​ ಕಾರ್ಪೋರೇಷನ್​​ ಲಿಮಿಟೆಡ್‌​ನಲ್ಲಿ ಕೆಲಸ ಮಾಡುತ್ತಿದ್ದರು ಎಂದು ತಿಳಿದುಬಂದಿದ್ದು, ಆತ್ಮಹತ್ಯೆಗೆ ನಿಖರ ಕಾರಣ ಏನೆಂದು ಇನ್ನಷ್ಟೇ ತಿಳಿದುಬರಬೇಕಿದೆ.

ಈ ವ್ಯಕ್ತಿ ಆತ್ಮಹತ್ಯೆ ಮಾಡಿಕೊಂಡಿರುವ ದೃಶ್ಯ ಮೊಬೈಲ್​ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಭದ್ರತಾ ಸಿಬ್ಬಂದಿಗಳು ವ್ಯಕ್ತಿಯನ್ನು ರಕ್ಷಿಸಲು ಮುಂದಾದರೂ ಕೂಡ ನಿರಾಕರಿಸಿ ರಸ್ತೆಗೆ ಜಿಗಿದಿದ್ದು, ಪರಿಣಾಮ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+