ಹೋಟೆಲ್ ಗಳಲ್ಲಿ ಅಳವಡಿಸುವ ಸೇವಾ ಶುಲ್ಕ ಇನ್ನು ಕಾನೂನು ಬಾಹಿರ
ರೆಸ್ಟೋರೆಂಟ್ ಗಳಲ್ಲಿ ಸೇವಾ ಶುಲ್ಕ ಪದ್ಧತಿಯನ್ನು ರದ್ದುಗೊಳಿಸಬೇಕೆಂದು ಈಗಾಗಲೇ ಎಲ್ಲರಿಗೂ ಸೂಚನೆ ನೀಡುವಂತೆ ಎಲ್ಲಾ ರಾಜ್ಯಗಳಿಗೂ ಸಂದೇಶ ರವಾನಿಸಲಾಗಿದೆ ಎಂದು ತಿಳಿಸಿದ ಕೇಂದ್ರ ಆಹಾರ ಸಚಿವ ರಾಮ್ ವಿಲಾಸ್ ಪಾಸ್ವಾನ್.
ನವದೆಹಲಿ, ಏಪ್ರಿಲ್ 14: ಯಾವುದೇ ರೆಸ್ಟೋರೆಂಟ್ ಗಳಲ್ಲಿ ಇನ್ನು ಸೇವಾ ಶುಲ್ಕ ವಿಧಿಸುವುದು ಕಾನೂನು ಪ್ರಕಾರ ಅಪರಾಧವಾಗಲಿದೆ ಎಂದು ಕೇಂದ್ರ ಆಹಾರ ಸಚಿವ ರಾಮ್ ವಿಲಾಸ್ ಪಾಸ್ವಾನ್ ತಿಳಿಸಿದ್ದಾರೆ.
ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರೆಸ್ಟೋರೆಂಟ್ ಗಳಲ್ಲಿ ಸೇವಾ ಶುಲ್ಕ ಪದ್ಧತಿಯನ್ನು ರದ್ದುಗೊಳಿಸಬೇಕೆಂದು ಈಗಾಗಲೇ ಎಲ್ಲರಿಗೂ ಸೂಚನೆ ನೀಡುವಂತೆ ಎಲ್ಲಾ ರಾಜ್ಯಗಳಿಗೂ ಸಂದೇಶ ರವಾನಿಸಲಾಗಿದೆ.

ಹಾಗಾಗಿ, ಹೋಟೆಲ್ ಬಿಲ್ ಗಳಲ್ಲಿ ಅಥವಾ ಮೆನುಗಳಿಲ್ಲಿಯೂ ಸೇವಾ ಶುಲ್ಕ ನಮೂದಿಸುವುದು ಇನ್ನು ಕಾನೂನು ಪ್ರಕಾರ ಅಪರಾಧವಾಗಲಿದೆ ಎಂದು ಪಾಸ್ವಾನ್ ತಿಳಿಸಿದರು.
ಕೆಲ ತಿಂಗಳುಗಳ ಹಿಂದೆಯೇ ಈ ಬಗ್ಗೆ ರಾಜ್ಯಗಳಿಗೆ ಸೂಚನೆ ಕಳುಹಿಸಲಾಗಿತ್ತಾದರೂ, ಕೆಲವು ರಾಜ್ಯಗಳಲ್ಲಿ ಇದಿನ್ನೂ ಅನುಷ್ಠಾನಗೊಂಡಿಲ್ಲದಿರುವುದು ಗಮನಕ್ಕೆ ಬಂದಿದೆ. ಹಾಗಾಗಿ, ಇದನ್ನು ಕಟ್ಟುನಿಟ್ಟಾಗಿ ಅಳವಡಿಸುವಂತೆ ಮತ್ತೊಮ್ಮೆ ರಾಜ್ಯ ಸರ್ಕಾರಗಳಿಗೆ ಸೂಚನೆ ಕಳುಹಿಸಲಾಗಿದೆ ಎಂದು ತಿಳಿಸಿದರು.












Click it and Unblock the Notifications