ನೀವು ತುಂಬಾ ಸೆಕ್ಸಿ ಆಗಿದಿರಾ, ಫ್ರೆಂಡ್ ಆಗುವಿರಾ? ರಷ್ಯಾದ ಯೂಟ್ಯೂಬರ್‌ಗೆ ದೆಹಲಿ ಮ್ಯಾನ್ ಪ್ರಶ್ನೆ

ರಷ್ಯಾದ ಖ್ಯಾತ ಯೂಟ್ಯೂಬರ್ ಮಹಿಳೆಗೆ ದೆಹಲಿಯಲ್ಲಿ ವ್ಯಕ್ತಿಯೊಬ್ಬ ಕೆಟ್ಟದಾಗಿ ಮಾತನಾಡಿಸಿದ ವಿಡಿಯೋ ವೈರಲ್ ಆಗಿದೆ. 'ಕೊಕೊ ಇನ್ ಇಂಡಿಯಾ' ಎಂಬ ತನ್ನ ಯೂಟ್ಯೂಬ್ ಪೇಜ್‌ಗೆ ಹೆಸರುವಾಸಿಯಾಗಿರುವ ರಷ್ಯಾದ ಮಹಿಳೆಯೊಬ್ಬರು ದೆಹಲಿಯ ಸರೋಜಿನಿ ನಗರದಲ್ಲಿನ ಜನಪ್ರಿಯ ಮಾರುಕಟ್ಟೆಯಲ್ಲಿ ಅಡ್ಡಾಡುತ್ತಿದ್ದಾಗ ವ್ಯಕ್ತಿಯೊಬ್ಬ ಅವರೊಂದಿಗೆ ಕೆಟ್ಟದಾಗಿ ಮಾತನಾಡಿದ್ದಾನೆ. ಇದಕ್ಕೆ ಕೊಕೊ ಅಭಿಮಾನಿಗಳು ಆಕ್ರೋಶಗೊಂಡಿದ್ದಾರೆ.

ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ದೆಹಲಿಯ ಸರೋಜಿನಿ ನಗರದಲ್ಲಿನ ಜನಪ್ರಿಯ ಬೀದಿ ಮಾರುಕಟ್ಟೆಯಲ್ಲಿ ಕೊಕೊ ಅವರು ಲೈವ್ ಸ್ಟ್ರೀಮಿಂಗ್ ಮಾಡುತ್ತಿರುವಾಗ ವ್ಯಕ್ತಿಯೊಬ್ಬ ಮಾತನಾಡಿಸುತ್ತಾನೆ. ಈ ದೃಶ್ಯ ಮತ್ತೋರ್ವರು ಮಾಡಿದ ದೃಶ್ಯದಲ್ಲಿ ಸೆರೆಯಾಗಿದೆ. ಆ ವ್ಯಕ್ತಿ ಕೊಕೊ ಅವರಿಗೆ, 'ನೀವು ನನ್ನೊಂದಿಗೆ ಸ್ನೇಹ ಹೊಂದಲು ಬಯಸುತ್ತೀರಾ' ಎಂದು ಕೇಳುತ್ತಾನೆ. ಆದರೆ ಆತನ ಮುಂದುವರೆದ ಮಾತು ಸ್ನೇಹಿತನದಿಂದ ಇರುವಂತೆ ಕಾಣಿಸಲಿಲ್ಲ.

ಆ ವ್ಯಕ್ತಿ ಕೊಕೊ ಅವರೊಂದಿಗೆ ಮಾತನಾಡಿದ ರೀತಿ ನೆಟ್ಟಿಗರ ಆಕ್ರೋಶಕ್ಕೆ ಗುರಿಯಾಗಿದೆ. ಆರಂಭದಲ್ಲಿ ವ್ಯಕ್ತಿ 'ಮೇಡಂ ನೀವು ತುಂಬಾ ಸುಂದರವಾಗಿ ಇದಿರಾ. ನನ್ನೊಂದಿಗೆ ಸ್ನೇಹ ಮಾಡುವಿರಾ?' ಎಂದು ಪ್ರಶ್ನೆ ಮಾಡುತ್ತಾನೆ. ಆಗ ಕೊಕೊ ಅವರು ಸಾಮಾನ್ಯವಾಗಿ ಪ್ರತಿಕ್ರಿಯೆ ನೀಡುತ್ತಾರೆ. 'ನನಗೆ ಈಗಾಗಲೇ ತುಂಬಾ ಸ್ನೇಹಿತರು ಇದಾರೆ' ಎನ್ನುತ್ತಾರೆ. ಆಗ ತಕ್ಷಣ ವ್ಯಕ್ತಿ,' ಪರವಾಗಿಲ್ಲ ಮೇಡಂ ಅವರಲ್ಲಿ ನನ್ನನ್ನು ಒಬ್ಬ ಸ್ನೇಹಿತನಾಗಿ ಮಾಡಿಕೊಳ್ಳಿ' ಎನ್ನುತ್ತಾರೆ. ಆಗ ಕೊಕೊ, 'ಈಗಾಗಲೇ ನನಗೆ ತುಂಬಾ ಜನ ಸ್ನೇಹಿತರಿದ್ದಾರೆ, ಹೀಗಿರುವಾಗ ಮತ್ತೆ ಸ್ನೇಹಿತರ ಬೇಡ ಅನಿಸುತ್ತದೆ' ಎನ್ನುತ್ತಾರೆ.

You are very sexy, shall we friend? : delhi man question to Russian YouTuber Koko In India

ಸಂಭಾಷಣೆಯಲ್ಲಿ ಸ್ವಲ್ಪ ಸಮಯದ ನಂತರ ಆತ ಅಸಭ್ಯ ಟೀಕೆಗಳನ್ನು ಮಾಡುತ್ತಾನೆ. "ಆಪ್ ವೈಸೇ ಬಹುತ್ ಮಾದಕ ಹೋ. ಕ್ಯಾ ಆಪ್ (ಸ್ನೇಹಿತ) ಬನ್ನಾ ಪಸಂದ್ ಕರೋಗೆ? (ನೀವು ತುಂಬಾ ಮಾದಕವಾಗಿದ್ದೀರಿ. ನೀವು ನನ್ನ ಸ್ನೇಹಿತೆಯಾಗಲು ಬಯಸುತ್ತೀರಾ)" ಎಂದು ಹೇಳುತ್ತಾನೆ. ಇಷ್ಟು ಹೇಳುತ್ತಿದ್ದಂತೆ ಕೊಕೊ ಅದಕ್ಕೆ ಯಾವ ಪ್ರತಿಕ್ರಿಯೆ ನೀಡದೆ ತೆರಳುತ್ತಾರೆ.

ಕೊಕೊ ಬಗ್ಗೆ....

ರಷ್ಯಾದ ಮಹಿಳೆ ಕೊಕೊ ಭಾರತದ ರಾಜಧಾನಿಯಲ್ಲಿ ನೆಲೆಸಿದ್ದಾರೆ. ಅವರ ವೀಡಿಯೊಗಳನ್ನು ಮಾಡಲು ನಾನಾ ದೇಶಗಳಿಗೆ ಪ್ರವಾಸ ಮಾಡುತ್ತಾರೆ. ಜೊತೆಗೆ ಅವರು ಆಗಾಗ್ಗೆ ತಮ್ಮ ಫಿಟ್‌ನೆಸ್ ದಿನಚರಿಯ ಬಗ್ಗೆ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡುತ್ತಾರೆ. ಅವರ ಪ್ರಯಾಣದ ನೋಟವನ್ನು ಅವರು ಹಂಚಿಕೊಳ್ಳುತ್ತಾರೆ. ಇದರಿಂದಾಗಿ ಅವರು ಸಾಕಷ್ಟು ಅಭಿಮಾನಿಗಳ ಬಳಗವನ್ನು ಹೊಂದಿದ್ದಾರೆ. ಲಕ್ಷಾಂತರ ಜನ ಫಾಲೋವರ್ಸ್ ಹೊಂದಿರುವ ಕೊಕೊ ಜೊತೆಗೆ ಇಂಥಹ ವರ್ತನೆ ಯಾರೂ ಕೂಡ ನಿರೀಕ್ಷಿಸಿಲ್ಲ.

ಕುತೂಹಲಕಾರಿಯಾಗಿ ಅವರು ಭಾರತದಾದ್ಯಂತ ಹಲವಾರು ಸ್ಥಳಗಳಿಗೆ ಭೇಟಿ ನೀಡಿದಾಗ ಮತ್ತು ಹೊಸ ಜನರನ್ನು ಭೇಟಿಯಾಗುವಾಗ ಅವರು ಆತ್ಮವಿಶ್ವಾಸದಿಂದ ಹಿಂದಿಯಲ್ಲಿ ಮಾತನಾಡುತ್ತಾರೆ. ಆದರೆ ದೆಹಲಿಯ ಈ ಘಟನೆಯ ವೇಳೆ ಕೊಕೊ ಮುಖದಲ್ಲಿ ಬೇಸರ ಕಂಡುಬಂದಿದೆ. ದೆಹಲಿ ವ್ಯಕ್ತಿ ಅಸಭ್ಯ ನುಡಿಗೆ ಭಾರೀ ವಿರೋಧ ವ್ಯಕ್ತವಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+