ಮೋದಿ ನಾಯಕತ್ವದಲ್ಲಿ ಸೂಪರ್ ಪವರ್ ಆಗಲಿದೆ ಭಾರತ: ಯೋಗಿ
ಲಕ್ನೋ, ಮೇ 26: "ನರೇಂದ್ರ ಮೋದಿಯವರ ತಾರತಮ್ಯರಹಿತ ಆಡಳಿತ ಇಡೀ ದೇಶದ ಜನರಿಗೂ ವರದಾನವಾಗಿದೆ" ಎಂದು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಹೇಳಿದ್ದಾರೆ.
ಬಿಜೆಪಿ ನೇತೃತ್ವದ ಎನ್ ಡಿಎ ಮೈತ್ರಿಕೂಟ ನಾಲ್ಕು ವರ್ಷಗಳನ್ನು ಪೂರೈಸಿದ ಹಿನ್ನೆಲೆಯಲ್ಲಿ ಮೋದಿ ಸರ್ಕಾರಕ್ಕೆ ಅಭಿನಂದನೆ ಸಲ್ಲಿಸಿದ ಅವರು ಮೋದಿ ಬಗೆಗೆ ಮೆಚ್ಚುಗೆ ವ್ಯಕ್ತಪಡಿಸಿದರು.
"ಕೇಂದ್ರ ಸರ್ಕಾರದಲ್ಲಿ ನಾಲ್ಕು ಯಶಸ್ವೀ ವರ್ಷಗಳ್ನು ಪೂರೈಸಿದ ಪ್ರಧಾನಿ ಮೋದಿ ಮತ್ತು ಅವರ ಇಡೀ ಸಚಿವಾಲಯಕ್ಕೆ ನನ್ನ ಅಭಿನಂದನೆಗಳು. ಅಭಿವೃದ್ಧಿಯ ಎಲ್ಲಾ ಯೋಜನೆಗಳೂ ಎಲ್ಲ ಭೇದಭಾವ ಮತ್ತು ಜಾತಿಯನ್ನು ಮೀರಿ ಬಡವರು, ಸೌಲಭ್ಯವಂಚಿತರು, ಮಹಿಳೆಯರು ಮತ್ತು ರೈತರನ್ನು ತಲುಪಿವೆ" ಎಂದು ಅವರು ಹೇಳಿದರು.

"ಪ್ರಧಾನಿ ಮೋದಿಯವರ ನಾಯಕತ್ವದಲ್ಲಿ ಬಾರತ ಸದ್ಯದಲ್ಲೇ ಸೂಪರ್ ಪವರ್ ಆಗಲಿದೆ ಎಂಬ ವಿಶ್ವಾಸವನ್ನೂ ಇದೇ ಸಂದರ್ಭದಲ್ಲಿ ಅವರು ವ್ಯಕ್ತಪಡಿಸಿದರು."











Click it and Unblock the Notifications