Actress Oviya Video: ಯಶ್ 'ಕಿರಾತಕ' ನಟಿಯ ವಿಡಿಯೋ ಲೀಕ್, ದೂರು ದಾಖಲಿಸಿದ ಒವಿಯಾ

ಬೆಂಗಳೂರು, ಅಕ್ಟೋಬರ್ 24: ರಾಕಿಂಗ್ ಸ್ಟಾರ್ ಯಶ್ ಅವರ ಕನ್ನಡದ 'ಕಿರಾತಕ' ನಟಿ ಮಿಂಚಿದ್ದ ನಟಿ ಒವಿಯಾ ಅವರದ್ದೆ ಎನ್ನಲಾದ ಖಾಸಗಿ ವಿಡಿಯೋವೊಂದು ಇತ್ತೀಚೆಗೆ ಸಾಮಾಜಿಕ ಜಾಲತಾಣದ ಬಿಸಿ ಹೆಚ್ಚಾಗುವಂತೆ ಮಾಡಿತ್ತು. ಪಡ್ಡೆ ಹೈಕಳ ಮನದಲ್ಲಿ ಹಲ್ ಚಲ್ ಎಬ್ಬಿಸಿತ್ತು. ವಿಡಿಯೋ ಲೀಕ್ ಬೆನ್ನಲ್ಲೆ ಇದೀಗ ನಟಿ ಓವಿಯಾ ಅವರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಯುವಕನೊಂದಿಗೆ ಬೆಡ್‌ರೂಮಿನಲ್ಲಿರುವ ಖಾಸಗಿ ವಿಡಿಯೋವೊಂದು ವೈರಲ್ ಆಗುತ್ತಿದ್ದಂತೆ ನಟಿ ಒವಿಯಾ ಅವರು ಸಖತ್ ಸುದ್ದಿಯಾದರು. ಏಕೆಂದರೆ ನಟಿಯ ಬಲಗೈ ತೋಳ ಮೇಲೆಯೂ ಟ್ಯಾಟೋ ಇದೆ. ವೈರಲ್ ಆದ ವಿಡಿಯೋದಲ್ಲಿ ಸಹ ಅಂತದ್ದೆ ಟ್ಯಾಟೋ ಕಾಣಿಸಿಕೊಂಡಿದೆ. ಇದು ಒವಿಯಾ ಅವರದ್ದ ವಿಡಿಯೋ ಎಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಈ ಹಿಂದೆ ಇದೇ ನಟಿಯು ಯೂಟ್ಯೂಬರ್ ವಿರುದ್ಧವೂ ದೂರು ನೀಡಿದ್ದಾರೆ.

Yash Film Actress Oviya Private Video Viral Actress Filed Complaints in Kerala Station

ಕೇರಳದ ತ್ರಿಶೂರ್ ಪೊಲೀಸ್ ಠಾಣೆಯಲ್ಲಿ ನಟಿ ಒವಿಯಾ ಅವರು ದೂರು ದಾಖಲಿಸಿದ್ದಾರೆ. ನಟಿಯ ತೇಜೋವಧೆ ಮಾಡಲಾಗುತ್ತಿದೆ ಎಂದು ಅವರ ಮ್ಯಾನೇಜರ್ ತಿಳಿಸಿದ್ದಾರೆ. ಉದ್ದೇಶಪೂರ್ವಕವಾಗಿ ಓವಿಯಾ ಅವರ ಘನತೆಗೆ ಚ್ಯುತಿ ತರುವ ಕೆಲಸ ಮಾಡಲಾಗುತ್ತಿದೆ. ಬೇಕು ಅಂತಲೇ ಹೀಗೆಲ್ಲ ಮಾಡಲಾಗುತ್ತಿದೆ ಎಂದು ಅವರು ಮಾಧ್ಯಮಗಳ ಮುಂದೆ ದೂರಿದ್ದಾರೆ. ನಟಿ ದೂರು ನೀಡುವಾಗ ಮ್ಯಾನೇಜರ್ ಸಹ ಇದ್ದರು.

ಇತ್ತೀಚೆಗೆ ಇನ್‌ಸ್ಟಾಗ್ರಾಮ್‌ನಲ್ಲಿ ತಮ್ಮ ಸೆಲ್ಫಿ ಫೋಟೋವೊಂದನ್ನು ನಟಿ ಹಂಚಿಕೊಂಡಿದ್ದರು. ಅದಕ್ಕೆ ವೈರಲ್ ಆದ ವಿಡಿಯೋಗೆ ಸಂಬಂಧಿಸಿದ ಒಂದಷ್ಟು ಕಾಮೆಂಟ್‌ಗಳನ್ನು ಮಾತನಾಡಿದ್ದಾರೆ. ಅದಕ್ಕೆಲ್ಲ ನಟಿ ಓವಿಯಾ ಅವರು ತಮಾಷೆಯಿಂದಲೇ 'ಎಂಜಾಯ್' ಉತ್ತರಿಸಿದ್ದರು.

17 ಸೆಕಂಡ್ ವಿಡಿಯೋ ದಾಗಿದೆ. ಇನ್ನಷ್ಟು ನಿಮಿಷಗಳ ಲೆಂಥಿ ವಿಡಿಯೋ ಸಿಗೋದು ಯಾವಾಗ ಎಂದು ಕಾಮೆಂಟ್ ಮಾಡಿದವರಿಗೆ ಮುಂದಿನ ಸಾರಿ ಕೊಡುವೆ ಎಂದು ತಮಾಷೆಯಾಗಿ ಉತ್ತರಿಸಿದ್ದಾರೆ.

ಇನ್ನೋ ನಟಿಯ ಎಕ್ಸ್‌ ಲವರ್ ಬೇಕು ಅಂತಲೇ ವಿಡಿಯೋ ಲೀಕ್ ಮಾಡಿದ್ದಾರೆ ಎನ್ನಲಾಗುತ್ತಿದೆ. ಅಲ್ಲದೇ ಕೆಟ್ಟದಾಗಿ ಯೂಟ್ಯೂಬರ್ ಒಬ್ಬರು ಮಾತನಾಡಿದ್ದರು. ಹೀಗಾಗಿ ನಟಿ ಒವಿಯಾ ಈ ಇಬ್ಬರು ಮೇಲೂ ದೂರು ದಾಖಲಿಸಿದ್ದಾರೆ. ಇದೇ ಯೂಟ್ಯೂಬರ್ ಬೇರೆ ಬೇರೆ ನಟಿಗಳ ಕುರಿತು ಮಾತನಾಡಿದ್ದ ಎನ್ನಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+