ಅನುಮಾನಕ್ಕೆ ದಾರಿಯಾಯ್ತು ಚೀನಾದಿಂದ ಬಂದ ಯಾಕ್ ಪ್ರಾಣಿಗಳ ಹಿಂಡು

ನವದೆಹಲಿ, ಸೆಪ್ಟೆಂಬರ್ 09: ಚೀನಾದಿಂದ ಬಂದ ಯಾಕ್ ಪ್ರಾಣಿಗಳ ಹಿಂಡು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.

Recommended Video

      ಮತ್ತೆ China ಗಡಿಯಲ್ಲಿ ದೊಣ್ಣೆ ಹಿಡಿದು ನಿಂತ ಚೀನಾ ಸೈನಿಕರು | Oneindia Kannada

      ಭಾರತ ಮತ್ತು ಚೀನಾ ದೇಶಗಳ ಯೋಧರು ಲಡಾಖ್‌ನ ಪ್ಯಾಂಗೊಂಗ್ ಸರೋವರದ ದಕ್ಷಿಣದಲ್ಲಿ ಜಮಾವಣೆಗೊಳ್ಳುತ್ತಿದ್ದ ಸಮಯದಲ್ಲೇ ಪ್ರಾಣಿಗಳು ಕಂಡುಬಂದಿರುವುದು ಅನುಮಾನಕ್ಕೆ ದಾರಿಯಾಗಿದೆ.

      ಯಾಕ್​ ಪ್ರಾಣಿಗಳನ್ನು ಇಂಡಿಯನ್​ ಆರ್ಮಿ ಮಾನವೀಯತೆ ದೃಷ್ಠಿಯಿಂದ ಹಿಂದಿರುಗಿಸಿತು. ಆದರೆ, ಇದೇ ಯಾಕ್​ಗಳಲ್ಲಿ ಬೇಹುಗಾರಿಕಾ ಸಾಧನವಿರಬಹುದಾ ಎಂಬ ಪ್ರಶ್ನೆ ಮೂಡಿದ್ದು, ಅದನ್ನು ತಳ್ಳಿಹಾಕುವಂತಿಲ್ಲ. ಉದಾಹರಣೆ ಕಳೆದ ವರ್ಷದ ಏಪ್ರಿಲ್​ನಲ್ಲಿ ನಾರ್ವೆ ಕರಾವಳಿಯಲ್ಲಿ ಬೆಲುಗಾ ತಿಮಿಂಗಿಲವನ್ನು ಹಿಡಿಯಕಲಾಗಿತ್ತು.

      Yaks Stray Across Indo-China border

      ತುಂಬಾ ಬುದ್ಧಿವಂತ ಹಾಗೂ ಸ್ನೇಹ ಸ್ವಭಾವದ ಪ್ರಾಣಿಯಾಗಿರುವ ಬೆಲುಗಾ ತಲೆಯ ಸುತ್ತ ಗುಪ್ತಚರ ಇಲಾಖೆಗೆ ಸೂಚನೆ ನೀಡುವಂತಹ ಎಲೆಕ್ಟ್ರಾನಿಕ್​ ಸಾಧನವನ್ನು ಅಳವಡಿಸಲಾಗಿತ್ತು.

      ಕಳೆದ ವಾರದವೂ ಸಹ ಇದೇ ಯಾಕ್​ ಪ್ರಾಣಿಗಳ ಹಿಂಡು ಗಡಿ ದಾಟಿ ಬಂದಿದ್ದವು. ಈ ವೇಳೆ ಅಲ್ಲಿಯೇ ಇದ್ದ ಭಾರತೀಯ ಸೈನಿಕರು ಅವುಗಳನ್ನು ತಮ್ಮ ವಶಕ್ಕೆ ಪಡೆದುಕೊಂಡಿದ್ದರು. 7 ದಿನಗಳವರೆಗೆ ಅವುಗಳ ಪಾಲನೆ ಮಾಡಿದ್ದ ಯೋಧರು ಮಾನವೀಯತೆ ದೃಷ್ಠಿಯಿಂದ ಚೀನಾ ಮಾಲೀಕರಿಗೆ ಹಿಂದಿರುಗಿಸಿದ್ದರು.

      ಮೊದಲೇ ಚೀನಾ ಮತ್ತು ಭಾರತ ನಡುವೆ ಗಡಿವಿವಾದ ನಡೆಯುತ್ತಿದ್ದು, ಚೀನಾ ನಿರಂತರವಾಗಿ ಗಡಿಯಲ್ಲಿ ಕ್ಯಾತೆ ತೆಗೆಯುತ್ತಿದೆ. ಹೀಗಿರುವಾಗ ಚೀನಾದಿಂದ ಬಂದಂತಹ ಜಾನುವಾರುಗಳು ಮುಗ್ಧ ಜೀವಿಗಳೇ ಆಗಿದ್ದರು ಅವು ಚೀನಾಗೆ ಸೇರಿದ್ದಾಗಿದ್ದರಿಂದ ಸಂಶಯ ಬರದೇ ಇರದು.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+