ಎದೆ ಮೇಲೆ ಕೈಇಡುತ್ತಿದ್ದ, ಹಾಸಿಗೆಗೆ ಬರುವಂತೆ ಪೀಡಿಸುತ್ತಿದ್ದ..: ಎಫ್‌ಐಆರ್‌ನಲ್ಲಿ ಕುಸ್ತಿಪಟುಗಳ ಶಾಕಿಂಗ್ ಹೇಳಿಕೆಗಳು
ಕುಸ್ತಿಪಟುಗಳ ಹೋರಾಟ: ನವದೆಹಲಿ, ಜೂನ್ 02: ಭಾರತದ ಅಗ್ರ ಕುಸ್ತಿಪಟುಗಳಾದ ಸಾಕ್ಷಿ ಮಲಿಕ್, ಬಜರಂಗ್ ಪುನಿಯಾ ಮತ್ತು ವಿನೇಶ್ ಫೋಗಟ್ ತಮ್ಮ ಒಲಿಂಪಿಕ್ ಮತ್ತು ವಿಶ್ವ ಚಾಂಪಿಯನ್‌ಶಿಪ್ ಪದಕಗಳನ್ನು ಗಂಗಾ ನದಿಯಲ್ಲಿ ಮುಳುಗಿಸುವ ನಿರ್ಧಾರದಿಂದ ಹಿಂದೆ ಸರಿದಿದ್ದಾರೆ. ಹರಿದ್ವಾರದಲ್ಲಿ ಎರಡು ಗಂಟೆಗಳ ಕಾಲ ನಡೆದ ಪ್ರತಿಭಟನೆಯ ನಂತರ ಈ ನಿರ್ಧಾರಕ್ಕೆ ಬಂದಿದ್ದಾರೆ. ರೈತ ನಾಯಕರು ಕುಸ್ತಿಪಟುಗಳಿಗೆ ಬೆಂಬಲ ನೀಡಿದ್ದಾರೆ. ನ್ಯಾಯ ಸಿಗುವವರೆಗೂ ಹೋರಾಡಲು ತೀರ್ಮಾನಿಸಿದ್ದಾರೆ.
ಜಂತರ್ ಮಂತರ್‌ನಲ್ಲಿರುವ ತಮ್ಮ ಪ್ರತಿಭಟನಾ ಸ್ಥಳವನ್ನು ಪೊಲೀಸರು ತೆರವುಗೊಳಿಸಿದ ನಂತರ ಕುಸ್ತಿಪಟುಗಳು ಹರಿದ್ವಾರಕ್ಕೆ ತೆರಳಿದರು. ಮಹಿಳಾ ಕುಸ್ತಿಪಟುಗಳಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪ ಹೊತ್ತಿರುವ ಭಾರತೀಯ ಕುಸ್ತಿ ಒಕ್ಕೂಟದ ಅಧ್ಯಕ್ಷ ಮತ್ತು ಬಿಜೆಪಿ ಸಂಸದ ಬ್ರಿಜ್ ಭೂಷಣ್ ಶರಣ್ ಸಿಂಗ್ ಅವರನ್ನು ಬಂಧಿಸುವಂತೆ ಒತ್ತಾಯಿಸಿ ಅವರು ಏಪ್ರಿಲ್ 23 ರಿಂದ ಜಂತರ್ ಮಂತರ್‌ನಲ್ಲಿ ಧರಣಿ ನಡೆಸುತ್ತಿದ್ದಾರೆ.
ವಿನೇಶ್ ಫೋಗಟ್ ವಿಶ್ವ ಚಾಂಪಿಯನ್‌ಶಿಪ್ ಪದಕ ವಿಜೇತರಾಗಿದ್ದರೆ, ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಭಜರಂಗ್ ಪುನಿಯಾ ಕಂಚು ಗೆದ್ದಿದ್ದಾರೆ ಮತ್ತು ಸಾಕ್ಷಿ ಮಲಿಕ್ ರಿಯೊ 2016 ರ ಕಂಚಿನ ಪದಕ ವಿಜೇತರಾಗಿದ್ದಾರೆ.
ಬಿಜೆಪಿ ಸಂಸದ ಬ್ರಿಜ್ ಭೂಷಣ್ ಶರಣ್ ಸಿಂಗ್ ವಿರುದ್ಧ ದೆಹಲಿ ಪೊಲೀಸರು ಎರಡು ಎಫ್‌ಐಆರ್‌ಗಳನ್ನು ದಾಖಲಿಸಿದ್ದಾರೆ. ಈ ಎಫ್‌ಐಆರ್‌ನಲ್ಲಿ ಆಘಾತಕಾರಿ ಆರೋಪಗಳು ದಾಖಲಾಗಿವೆ.

ಕುಸ್ತಿಪಟುಗಳ ಆರೋಪ ನಂಬರ್ 1
'ಒಂದು ದಿನ ನಾನು ರೆಸ್ಟೋರೆಂಟ್‌ಗೆ ಊಟಕ್ಕೆ ಹೋಗುತ್ತಿದ್ದಾಗ, ಆರೋಪಿ (ಸಿಂಗ್) ನನ್ನನ್ನು ಪ್ರತ್ಯೇಕವಾಗಿ ತನ್ನ ಊಟದ ಟೇಬಲ್‌ಗೆ ಕರೆದಿದ್ದನು. ನನ್ನ ಒಪ್ಪಿಗೆ ಇಲ್ಲದೇ ನನ್ನ ಸ್ತನಗಳ ಮೇಲೆ ಕೈ ಇಟ್ಟನು. ಆಗ ನನಗೆ ಸಂಪೂರ್ಣ ಆಘಾತ ಮತ್ತು ಆಶ್ಚರ್ಯವಾಯಿತು. ಮತ್ತೆ ತನ್ನ ಕೈಯನ್ನು ನನ್ನ ಎದೆಗೆ ಮೇಲಕ್ಕೆ ಸರಿಸಿದನು. ಇದನ್ನೇ ಮೂರರಿಂದ ನಾಲ್ಕು ಸಾರಿ ಪುನರಾವರ್ತಿಸಿದನು.

ಕುಸ್ತಿಪಟುಗಳ ಆರೋಪ ನಂಬರ್ 2
ಡಬ್ಲ್ಯುಎಫ್‌ಐ ಕಚೇರಿಯಲ್ಲಿ, ಆತ ( ಸಿಂಗ್ ) ನನ್ನ ಒಪ್ಪಿಗೆಯಿಲ್ಲದೆ ನನ್ನ ಅಂಗೈ, ಮೊಣಕಾಲು, ತೊಡೆಗಳು ಮತ್ತು ಭುಜಗಳನ್ನು ಸ್ಪರ್ಶಿಸಲು ಪ್ರಾರಂಭಿಸಿದನು. ನಾನು ಆ ಕ್ಷಣದಲ್ಲಿ ನಡುಗಲು ಪ್ರಾರಂಭಿಸಿದೆ. ನಾವು ಕುಳಿತಿರುವಾಗ ಅವನು ನನ್ನ ಕಾಲುಗಳಿಗೆ ತನ್ನ ಕಾಲುಗಳನ್ನು ಸ್ಪರ್ಶಿಸುತ್ತಿದ್ದನು. ನನ್ನ ಮೊಣಕಾಲುಗಳನ್ನು ಮುಟ್ಟಿತ್ತಿದ್ದನು. ಅವನು ನನ್ನ ಎದೆಯ ಮೇಲೆ ತನ್ನ ಕೈಯನ್ನು ಇಟ್ಟನು. ನನ್ನ ಉಸಿರಾಟವನ್ನು ಪರೀಕ್ಷಿಸುವ ನೆಪದಲ್ಲಿ ನನ್ನ ಹೊಟ್ಟೆಯ ಕೆಳಗೆ ಕೈಯಾಡಿಸಿದನು. ಆತನ ಏಕೈಕ ಉದ್ದೇಶವು ಸ್ಪರ್ಶಿಸುವುದಾಗಿತ್ತು. ಅದು ಅನುಚಿತ ವರ್ತನೆಯಾಗಿತ್ತು.

ಕುಸ್ತಿಪಟುಗಳ ಆರೋಪ ನಂಬರ್ 3
'ನಾನು ಚಾಪೆಯ ಮೇಲೆ ಮಲಗಿದ್ದಾಗ, ಆರೋಪಿ (ಸಿಂಗ್) ನನ್ನ ಬಳಿಗೆ ಬಂದನು. ಇದರಿಂದ ನನಗೆ ಆಘಾತ ಮತ್ತು ಆಶ್ಚರ್ಯ ಉಂಟಾಯಿತು. ನನ್ನ ಅನುಮತಿಯನ್ನು ಪಡೆಯದೆ ನನ್ನ ಟಿ-ಶರ್ಟ್ ಅನ್ನು ಎಳೆದುಕೊಂಡು ಸ್ತನಗಳ ಮೇಲಿಟ್ಟನು. ನನ್ನ ಉಸಿರಾಟವನ್ನು ಪರೀಕ್ಷಿಸುವ/ಪರಿಶೀಲಿಸುವ ನೆಪದಲ್ಲಿ ನನ್ನ ಸ್ತನಗಳನ್ನು ಮುಟ್ಟಿದನು. ಆ ನಂತರ ತನ್ನ ಕೈಗಳನ್ನು ನನ್ನ ಹೊಟ್ಟೆ ಕೆಳಗೆ ಜಾರಿಸಿದನು.

ಕುಸ್ತಿಪಟುಗಳ ಆರೋಪ ನಂಬರ್ 4
ಫೆಡರೇಶನ್ ಕಛೇರಿಗೆ ನಾನು ಭೇಟಿ ನೀಡಿದಾಗ. ನನ್ನನ್ನು ಆರೋಪಿಯ (ಸಿಂಗ್) ಕೋಣೆಗೆ ಕರೆಸಲಾಯಿತು. ನನ್ನ ಜೊತೆಗಿದ್ದ ನನ್ನ ಸಹೋದರನನ್ನು ಹಿಂದೆ ಉಳಿಯುವಂತೆ ಆದೇಶಿಸಲಾಯಿತು. ಇತರ ವ್ಯಕ್ತಿಗಳ ನಿರ್ಗಮನದ ನಂತರ, ಆರೋಪಿ (ಸಿಂಗ್) ಬಾಗಿಲನ್ನು ಮುಚ್ಚಿದನು. ನನ್ನನ್ನು ತನ್ನ ಕಡೆಗೆ ಎಳೆದುಕೊಂಡು ನನ್ನೊಂದಿಗೆ ಬಲವಂತದ ದೈಹಿಕ ಸಂಪರ್ಕವನ್ನು ಮಾಡಲು ಪ್ರಯತ್ನಿಸಿದನು.

ಕುಸ್ತಿಪಟುಗಳ ಆರೋಪ ನಂಬರ್ 5
ಆರೋಪಿ ( ಸಿಂಗ್ ) ನನ್ನನ್ನು ನನ್ನ ಹೆತ್ತವರೊಂದಿಗೆ ಫೋನ್‌ನಲ್ಲಿ ಮಾತನಾಡುವಂತೆ ಮಾಡಿದನು. ಆ ಸಮಯದಲ್ಲಿ ನನ್ನ ಬಳಿ ವೈಯಕ್ತಿಕ ಮೊಬೈಲ್ ಫೋನ್ ಇರಲಿಲ್ಲ. ಆರೋಪಿ (ಸಿಂಗ್) ಅವನು ಕುಳಿತಿದ್ದ ಅವನ ಹಾಸಿಗೆಯ ಕಡೆಗೆ ನನ್ನನ್ನು ಕರೆದನು. ಇದ್ದಕ್ಕಿದ್ದಂತೆ ಅವನು ನನ್ನನ್ನು ಬಲವಂತವಾಗಿ ತಬ್ಬಿಕೊಂಡನು. ನನ್ನ ಅನುಮತಿಯಿಲ್ಲದೆ ನಡೆಯುತ್ತಿದ್ದ ಕ್ರಿಯೆಗೆ ನಾನು ಬೆಚ್ಚಿಬಿದ್ದಿದ್ದೆ. ತನ್ನ ಲೈಂಗಿಕ ಉದ್ದೇಶಗಳನ್ನು ಪೂರೈಸಲು ನನಗೆ ಅಗತ್ಯ ವಸ್ತುಗಳನ್ನು ಖರೀದಿಸಲು ಆತ ನನಗೆ ಲಂಚ ನೀಡಲು ಪ್ರಯತ್ನಿಸುತ್ತಿದ್ದನು.

ಕುಸ್ತಿಪಟುಗಳ ಆರೋಪ ನಂಬರ್ 6
ನನ್ನ ಉಸಿರಾಟವನ್ನು ಪರೀಕ್ಷಿಸುವ ನೆಪದಲ್ಲಿ ಆರೋಪಿ (ಸಿಂಗ್) ನನ್ನನ್ನು ಕರೆದನು. ಅವನು ನನ್ನ ಟಿ-ಶರ್ಟ್ ಅನ್ನು ಎಳೆದು ನನ್ನ ಹೊಟ್ಟೆಯ ಕೆಳಗೆ ತನ್ನ ಕೈಯನ್ನು ಜಾರಿಸಿ ಹೊಕ್ಕುಳದ ಮೇಲೆ ಕೈಯಾಡಿಸಿದನು. ಆರೋಪಿಯು (ಸಿಂಗ್) ಯಾವಾಗಲೂ ಅನುಚಿತವಾದ ಮಾತುಗಳನ್ನು ಆಡುತ್ತಿದ್ದನು. ಕೆಟ್ಟ ಸನ್ನೆಗಳನ್ನು ಮಾಡುತ್ತಿದ್ದನು. ನಾನು ಸೇರಿದಂತೆ ಹುಡುಗಿಯರು ಉಪಹಾರ, ಮಧ್ಯಾಹ್ನದ ಊಟ ಅಥವಾ ರಾತ್ರಿಯ ಊಟಕ್ಕೆ ಒಂಟಿಯಾಗಿ ಹೋಗದಿರಲು ಸಾಮೂಹಿಕವಾಗಿ ನಿರ್ಧರಿಸಿದೆವು.

ಕುಸ್ತಿಪಟುಗಳ ಆರೋಪ ನಂಬರ್ 7
ನಾನು ಕೊನೆಯ ಸಾಲಿನಲ್ಲಿ ನಿಂತಿದ್ದಾಗ ಆರೋಪಿ (ಸಿಂಗ್) ಬಂದು ನನ್ನ ಪಕ್ಕದಲ್ಲಿ ನಿಂತನು. ನಾನು ಇದ್ದಕ್ಕಿದ್ದಂತೆ ನನ್ನ ಪೃಷ್ಠದ ಮೇಲೆ ಕೈಯನ್ನು ಇಟ್ಟನು. ಆರೋಪಿ (ಸಿಂಗ್) ಅತ್ಯಂತ ಅಸಭ್ಯ ಮತ್ತು ಆಕ್ಷೇಪಾರ್ಹವಾಗಿ ವರ್ತಿಸಿದನು. ನನ್ನ ಒಪ್ಪಿಗೆಯಿಲ್ಲದೇ ಇದ್ದಾಗ ಆತನ ವರ್ತನೆಗಳಿಂದ ನಾನು ದಿಗ್ಭ್ರಮೆಗೊಂಡೆ. ನಾನು ದೂರ ಹೋಗಲು ಪ್ರಯತ್ನಿಸಿದಾಗ, ನನ್ನ ಭುಜವನ್ನು ಬಲವಂತವಾಗಿ ಹಿಡಿದೆಳೆದನು.












Click it and Unblock the Notifications