ದೆಹಲಿಯ ಗುಟ್ಕಾ ಕಾರ್ಖಾನೆಯಲ್ಲಿ ಲಿಫ್ಟ್ ಕುಸಿದು 3 ಕಾರ್ಮಿಕರು ಸಾವು
ನವದೆಹಲಿ ಜನವರಿ 9: ಪಶ್ಚಿಮ ದೆಹಲಿಯ ನರೈನಾ ಕೈಗಾರಿಕಾ ಪ್ರದೇಶದಲ್ಲಿ ಕಾರ್ಖಾನೆಯೊಳಗಿನ ಲಿಫ್ಟ್ ಕುಸಿದು ನಿನ್ನೆ ಸಂಜೆ ಮೂವರು ಕಾರ್ಮಿಕರು ಸಾವನ್ನಪ್ಪಿದ್ದಾರೆ ಮತ್ತು ಒಬ್ಬರು ಗಾಯಗೊಂಡಿದ್ದಾರೆ. ಗುಟ್ಕಾ ಕಾರ್ಖಾನೆಯಲ್ಲಿ ಈ ಘಟನೆ ನಡೆದಿದೆ.
ಘಟನೆ ನಡೆದ ತಕ್ಷಣ ಕುಲವಂತ್ ಸಿಂಗ್, 30, ದೀಪಕ್ ಕುಮಾರ್, 26, ಮತ್ತು ಸನ್ನಿ (33) ಅವರನ್ನು ಆಸ್ಪತ್ರೆಗೆ ಸಾಗಿಸಲಾಯಿತು. ಆದರೆ ಅಲ್ಲಿ ಅವರು ಬರುವಾಗಲೇ ಮೃತಪಟ್ಟಿದ್ದಾರೆ ಎಂದು ವೈದ್ಯರು ಘೋಷಿಸಿದ್ದಾರೆ. 24 ವರ್ಷದ ಸೂರಜ್ ಸದ್ಯ ರಾಷ್ಟ್ರ ರಾಜಧಾನಿಯ ಬಿಎಲ್‌ಕೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಲಿಫ್ಟ್ ನಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡು ಕೆಳಗೆ ಬಿದ್ದಿದ್ದಾರೆ. ಇದರಿಂದಾಗಿ ಮೂವರೂ ಸಾವನ್ನಪ್ಪಿದ್ದಾರೆ. ಪೊಲೀಸರು ಸ್ಥಳಕ್ಕೆ ಆಗಮಿಸಿ ತನಿಖೆ ಆರಂಭಿಸಿದ್ದಾರೆ.

ಮತ್ತೊಂದು ಘಟನೆ
ದೆಹಲಿಯ ಸದರ್ ಬಜಾರ್‌ನಲ್ಲಿ ಶನಿವಾರ ದೊಡ್ಡ ಸ್ಫೋಟ ಸಂಭವಿಸಿದೆ. ನೀರಿನ ಪೈಪ್ ಒಡೆದು ಉಂಟಾದ ಸ್ಫೋಟದಲ್ಲಿ ಒಬ್ಬರು ಸಾವನ್ನಪ್ಪಿದ್ದಾರೆ. ಅಪಘಾತದ ಕಾರಣವನ್ನು ಕಂಡುಹಿಡಿಯಲಾಗಲಿಲ್ಲ. ಸ್ಥಳದಲ್ಲಿ ಬೆಂಕಿ ಅಥವಾ ಹೊಗೆ ಯಾವುದೂ ಕಂಡು ಬಂದಿಲ್ಲ. ಕಟ್ಟಡ ಕುಸಿದಿರುವುದು ಕಂಡುಬಂದಿದೆ ಎಂದು ಅಗ್ನಿಶಾಮಕ ಅಧಿಕಾರಿಗಳು ತಿಳಿಸಿದ್ದಾರೆ. ಘಟನೆಗೆ ಕಾರಣ ಸ್ಫೋಟವಲ್ಲ ಎಂದು ದೆಹಲಿ ಪೊಲೀಸರು ತಿಳಿಸಿದ್ದಾರೆ. ಕಾರಣಗಳನ್ನು ಹುಡುಕಲು ಪ್ರಯತ್ನಿಸುತ್ತಿದ್ದೇವೆ ಎಂದರು. ಮೇಲ್ನೋಟಕ್ಕೆ ನೀರಿನ ಪಂಪ್‌ನ ಪೈಪ್ ಒಡೆದಿದೆ.












Click it and Unblock the Notifications