ಮುಸ್ಲಿಂ ಮದುವೆಗಳಲ್ಲಿ ಸಂಗೀತ ಕಾರ್ಯಕ್ರಮ ನಡೆಸದಂತೆ ಫತ್ವಾ!
ಶಹರಣ್ಪುರ, ಏಪ್ರಿಲ್ 02: 'ಮದುವೆ ಸಮಾರಂಭಗಳಲಿ ಸಂಗೀತ ಕಾರ್ಯಕ್ರಮಗಳನ್ನು ಆಯೋಜಿಸುವುದು ಇಸ್ಲಾಮಿಕ್ ನಂಬಿಕೆಗಳಿಗೆ ವಿರುದ್ಧವಾದುದು, ಆದ್ದರಿಂದ ಸಂಗೀತ ಕಾರ್ಯಕ್ರಮಗಳಿರುವ ಮದುವೆಗಳಿಗೆ ನಾವು ಬಹಿಷ್ಕಾರ ಹಾಕುತ್ತೇವೆ' ಎಂದು ದಾರುಲ್ ಉಲೂಮ್ ದಿಯೋಬಂದ್ ಮುಸ್ಲಿಂ ಸಂಘಟನೆ ಫತ್ವಾ ಹೊರಡಿಸಿದೆ.
ಯಾವುದೇ ಮದುವೆಗಳಲ್ಲಿ ಸಂಗೀತ, ನೃತ್ಯ ಅಥವಾ ಡಿಜೆ ಕಾರ್ಯಕ್ರಮಗಳಿದ್ದರೆ ಅಂಥ ಮದುವೆಗೆ ನಾವು ಅವಕಾಶ ಮಾಡಿಕೊಂಡುವುದಿಲ್ಲ ಎಂದು ಮುಫ್ತಿ ಅಜರ್ ಹುಸೇನ್ ಎಂಬ ಸಿಟಿ ಕ್ವಾಜಿ ಹೇಳಿದ್ದಾರೆ. ಈ ರೀತಿಯ ಕಾರ್ಯಕ್ರಮಗಳು ಇಸ್ಲಾಮಿಗೆ ವಿರುದ್ಧವಾಗಿವೆ.

ರಾಜಸ್ಥಾನದ ಕೊಟಾ ಎಂಬಲ್ಲಿ ಈಗಾಗಲೇ ಮದುವೆಗಳಲ್ಲಿ ಸಂಗೀತ ಕಾರ್ಯಕ್ರಮಗಳ ಮೇಲೆ ನಿಷೇಧ ಹೇರಲಾಗಿದೆ. ಇಥ ಸಮಾರಂಭಗಳಲ್ಲಿ ಸಂಗೀತ ಕಾರ್ಯಕ್ರಮ ಏರ್ಪಡಿಸುವುದು ಇಸ್ಲಾಂಗೆ ಹೇಗೆ ವಿರುದ್ಧವಾದುದು ಎಂಬ ಬಗ್ಗೆ ಸ್ಪಷ್ಟ ಮಾಹಿತಿ ಲಭ್ಯವಿಲ್ಲ.












Click it and Unblock the Notifications