Women's Reservation Bill: ಮಹಿಳಾ ಮೀಸಲಾತಿ ಮಸೂದೆ ಕುರಿತು ತಿಳಿದುಕೊಳ್ಳಬೇಕಾದ ಐದು ಪ್ರಮುಖ ಅಂಶಗಳು

ಮಹಿಳಾ ಮೀಸಲಾತಿ ಮಸೂದೆಯನ್ನು ಲೋಕಸಭೆಯಲ್ಲಿ ಮಂಗಳವಾರ ಮಂಡಿಸಲಾಯಿತು. ಲೋಕಸಭೆ ಮತ್ತು ರಾಜ್ಯದ ವಿಧಾನ ಸಭೆಗಳಲ್ಲಿ ಮಹಿಳೆಯರಿಗೆ ಶೇ 33 ಕೋಟಾವನ್ನು ಈ ಮಸೂದೆ ಖಾತರಿಪಡಿಸುತ್ತದೆ. ಕೇಂದ್ರ ಕಾನೂನು ಸಚಿವ ಅರ್ಜುನ್ ರಾಮ್ ಮೇಘವಾಲ್ ಅವರು ಮಹಿಳಾ ಮೀಸಲಾತಿ ಮಸೂದೆಯನ್ನು ಮಂಡಿಸಿದರು.

ಮಸೂದೆ ಕುರಿತು ನೀವು ತಿಳಿಯಬೇಕಾದ ಐದು ಪ್ರಮುಖ ಅಂಶಗಳು

1- ಸಂಸತ್ತಿನ ಕೆಳಮನೆಯಾದ ಲೋಕಸಭೆಯಲ್ಲಿ ಮಹಿಳೆಯರಿಗೆ ಶೇ 33 ಮೀಸಲಾತಿಯನ್ನು ಈ ಮಸೂದೆ ಕಡ್ಡಾಯಗೊಳಿಸುತ್ತದೆ. ತಿದ್ದುಪಡಿಯ ಪ್ರಕಾರ, ಲೋಕಸಭೆಯಲ್ಲಿ ಒಟ್ಟು ಸ್ಥಾನಗಳ ಪೈಕಿ ಮೂರನೇ ಒಂದು ಭಾಗವು ಮಹಿಳೆಯರಿಗೆ ಮೀಸಲಾಗಿರುತ್ತದೆ. ಈ ಕ್ರಮವು ದೇಶದ ಶಾಸಕಾಂಗದಲ್ಲಿ ಮಹಿಳೆಯರಿಗೆ ಹೆಚ್ಚಿನ ಪ್ರಾತಿನಿಧ್ಯವನ್ನು ಖಾತ್ರಿಪಡಿಸುವ ಪ್ರಯತ್ನವಾಗಿದೆ.

women-reservation-bill-tabled-in-lok-sabha

2) ದೆಹಲಿಯ ರಾಷ್ಟ್ರೀಯ ರಾಜಧಾನಿ ಪ್ರದೇಶದ ವಿಧಾನಸಭೆಗೆ ಈ ಮಸೂದೆ ಅನ್ವವಾಗಲಿದೆ. ದೆಹಲಿ ಅಸೆಂಬ್ಲಿಯಲ್ಲಿ ಪರಿಶಿಷ್ಟ ಜಾತಿಗಳಿಗೆ ಮೀಸಲಾದ ಸ್ಥಾನಗಳಲ್ಲಿ ಮೂರನೇ ಒಂದು ಭಾಗವು ಮಹಿಳೆಯರಿಗೆ ಮೀಸಲಾಗಿರಬೇಕು. ನೇರ ಚುನಾವಣೆಯಿಂದ ಆಯ್ಕೆಯಾದ ಒಟ್ಟು ಸ್ಥಾನಗಳ ಪೈಕಿ ಮೂರನೇ ಒಂದು ಭಾಗದಷ್ಟು ( ಪರಿಶಿಷ್ಟ ಜಾತಿಗಳಿಗೆ ಸೇರಿದ ಮಹಿಳೆಯರಿಗೆ ಮೀಸಲಾದವುಗಳು ಸೇರಿದಂತೆ ) ಮಹಿಳೆಯರಿಗೆ ಮೀಸಲಿಡಬೇಕಾಗುತ್ತದೆ ಎಂದು ಮಸೂದೆ ಹೇಳುತ್ತದೆ.

3) ಭಾರತದ ಎಲ್ಲಾ ರಾಜ್ಯಗಳ ವಿಧಾನಸಭೆಗಳಿಗೆ ಇದು ಅನ್ವಯಿಸುತ್ತದೆ. ಲೋಕಸಭೆ ಮತ್ತು ದೆಹಲಿ ಅಸೆಂಬ್ಲಿ ನಿಬಂಧನೆಗಳಂತೆಯೇ ಉಳಿದ ರಾಜ್ಯಗಳಲ್ಲಿಯೂ ಇದು ಇರಲಿದೆ. ಅನ್ವಯವಾಗುವ ಷರತ್ತಿನ ಅಡಿಯಲ್ಲಿ ಮೀಸಲಾದ ಒಟ್ಟು ಸ್ಥಾನಗಳ ಪೈಕಿ ಮೂರನೇ ಒಂದು ಭಾಗದಷ್ಟು ಮಹಿಳೆಯರಿಗೆ ಮೀಸಲಿಡಬೇಕಾಗುತ್ತದೆ. ಇದರಲ್ಲಿ ಪರಿಶಿಷ್ಟ ಜಾತಿಗಳು ಮತ್ತು ಪರಿಶಿಷ್ಟ ಪಂಗಡಗಳು ಸೇರಿವೆ ಎಂದು ಮಸೂದೆ ಹೇಳಿದೆ.

4) ಮಹಿಳಾ ಮೀಸಲಾತಿಗೆ ಸಂಬಂಧಿಸಿದ ನಿಬಂಧನೆಗಳು ಡಿಲಿಮಿಟೇಶನ್ ನಡೆಸಿದ ನಂತರ ಜಾರಿಗೆ ಬರುತ್ತವೆ ಎಂದು ಮಸೂದೆಯು ಹೇಳುತ್ತದೆ. ಲೋಕಸಭೆ, ರಾಜ್ಯ ವಿಧಾನಸಭೆಗಳು ಮತ್ತು ದೆಹಲಿ ವಿಧಾನಸಭೆಯಲ್ಲಿ ಇದು ಜಾರಿಗೆ ಬರಲಿದೆ.

5) ಈ ಮಸೂದೆಯನ್ನು ಸಂಸತ್ತಿನಲ್ಲಿ ಮಂಡಿಸಲಾಗಿದೆ. ಇದು ನಾಳೆ ಅಂಗೀಕಾರವಾಗುವ ಸಾಧ್ಯತೆ ಇದೆ. ಇದು ಅಂಗೀಕಾರವಾದ ಬಳಿಕ ಡಿಲಿಮಿಟೇಶನ್‌ ಮಾಡಲಾಗುತ್ತದೆ. ಆ ನಂತರ ಈ ಮಸೂದೆಯ ನಿಬಂಧನೆಗಳನ್ನು ಜಾರಿಗೆ ತರಲಾಗುತ್ತದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+