ಮಹಿಳೆಯರ ಬೋಗಿ ರೈಲಿನ ಮಧ್ಯೆ ಅಳವಡಿಸಲು ರೈಲ್ವೆ ಇಲಾಖೆ ಕ್ರಮ
ಬೆಂಗಳೂರು, ಮೇ 5: ರೈಲಿನಲ್ಲಿ ಮಹಿಳಾ ಬೋಗಿಗಳನ್ನು ಹಿಂದಿನ ಎಂಜಿನ್ ಬಳಿ ಜೋಡಿಸುವ ಬದಲು ರೈಲಿನ ಮಧ್ಯದಲ್ಲಿ ಜೋಡಿಸುವುದರ ಜತೆಗೆ ಈ ಬೋಗಿಗೆ ಪ್ರತ್ಯೇಕ ಬಣ್ಣ ಬಳಿಯಲು ರೈಲ್ವೆ ಮಂಡಳಿ ನಿರ್ಧರಿಸಿದೆ.
ಮಹಿಳಾ ಪ್ರಯಾಣಿಕರು ತಮ್ಮ ಬೋಗಿಯನ್ನು ಸುಲಭವಾಗಿ ಗುರುತಿಸಲು ನೆರವಾಗುವ ಉದ್ದೇಶದಿಂದ ಪ್ರತ್ಯೇಕ ಬಣ್ಣ ಬಳಿಯಲಾಗುವುದು. ಅಲ್ಲದೆ ಈ ಬೋಗಿಗಳಿಗೆ ಹೆಚ್ಚುವರಿ ಭದ್ರತೆ ಒದಗಿಸುವುದರ ಜತೆಗೆ ಸಿಸಿ ಕ್ಯಾಮೆರಾ ಅಳವಡಿಸಲಾಗುವುದು.
ಮಹಿಳಾ ಪ್ರಯಾಣಿಕರ ಸುರಕ್ಷತೆ ಸಂಬಂಧ ಅಭಿಪ್ರಾಯ ಹಾಗೂ ಸಲಹೆಗಳನ್ನು ನೀಡುವಂತೆ ರೈಲ್ವೆ ಮಂಡಳಿ ಅಧ್ಯಕ್ಷ ಅಶ್ವಿನಿ ಲೋಹಾನಿ ಎಲ್ಲಾ ರೈಲ್ವೆ ವಲಯಗಳ ಪ್ರಬಂಧಕರಿಗೆ ಸೂಚನೆ ನೀಡಿದ್ದಾರೆ.

ಅವರಿಂದ ಸಲಹೆ ಬಂದ ಬಳಿಕ ಅಂತಿಮ ನಿರ್ಧಾರ ಕೈಗೊಳ್ಳಲಾಗುವುದು ಎಂದು ಅಧಿಕಾರಿ ಮಾಹಿತಿ ನೀಡಿದ್ದಾರೆ. ರೈಲ್ವೆ ಟಿಕೆಟ್ ಕಾಯ್ದಿರಿಸಲು ಭಾರತೀಯ ರೈಲ್ವೆ ಕ್ಯಾಟಿರಿಂಗ್ ಅಂಡ್ ಟೂರಿಸಂ ಕಾರ್ಪೊರೇಷನ್ ಈಗ ಇನ್ನೊಂದು ಹೊಸ ಸೇವೆಗೆ ಚಾಲನೆ ನೀಡಿದೆ.
ಐಆರ್‌ಸಿಟಿಸಿ ಇ-ವ್ಯಾಲೆಟ್ ಬಳಕೆದಾರರು ಈಗ ರೈಲು ಟಿಕೆಟ್ ಗಳನ್ನು ತಮ್ಮ ಮೊಬೈಲ್ ಅಪ್ಲಿಕೇಷನ್ ಐಆರ್‌ಸಿಟಿಸಿ ರೈಲ್ ಕನೆಕ್ಟ್ ಮೂಲಕ ಬುಕ್ ಮಾಡಬಹುದಾಗಿದೆ ಎಂದು ಟ್ವಿಟ್ಟರ್‌ನಲ್ಲಿ ಐಆರ್‌ಸಿಟಿಸಿ ಹೇಳಿದೆ.












Click it and Unblock the Notifications