Delhi Election 2025: ಮಹಿಳಾ ಅಭ್ಯರ್ಥಿಗಳ ಸಂಖ್ಯೆ ಹೆಚ್ಚಳ, ಅಖಾಡದಲ್ಲಿರುವ ನಾರಿಯರ ವಿವರ
ದೆಹಲಿ, ಜನವರಿ 29: ದೆಹಲಿ ವಿಧಾನಸಭಾ ಚುನಾವಣೆಗೆ ದಿನಗಣನೆ ಆರಂಭವಾಗಿದೆ. ಈ ಬಾರಿಯು ಚುನಾವಣೆಯಲ್ಲಿ ಮಹಿಳೆಯರಿಗೆ ಹೆಚ್ಚಿನ ಆದ್ಯತೆ ಸಿಕ್ಕಿದೆ. ಕಳೆದ ಸಾಲಿನ ದೆಹಲಿ ಚುನಾವಣೆಗೆ ಹೋಲಿಕೆ ಮಾಡಿದರೆ ಈ ಸಲ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳಾ ಅಭ್ಯರ್ಥಿಗಳು ಅಖಾಡದಲ್ಲಿದ್ದಾರೆ. ದೆಹಲಿಯ ಒಟ್ಟು ಒಟ್ಟು 70 ಕ್ಷೇತ್ರಗಳಿಂದ 96 ಮಂದಿ ಮಹಿಳೆಯರು ಕಣದಲಿದ್ದಾರೆ ಎಂದು ಚುನಾವನೆ ಆಯೋಗ ತಿಳಿಸಿದೆ.
ಫೆಬ್ರವರಿ 5 ರಂದು ನಡೆಯಲಿರುವ ದೆಹಲಿ ವಿಧಾನಸಭಾ ಚುನಾವಣೆಗೆ ಈ ಬಾರಿ ಒಟ್ಟು 699 ಅಭ್ಯರ್ಥಿಗಳು ಸ್ಪರ್ಧೆಸಿದ್ದಾರೆ. ಇದರಲ್ಲಿ 96 ಮಂದಿ ಮಹಿಳೆಯರು ಇದ್ದಾರೆ. ಕಳೆದ ಬಾರಿಯ (2020) ದೆಹಲಿ ಚುನಾವಣೆಯಲ್ಲಿ 70 ಕ್ಷೇತ್ರಗಳಿಂದ 672 ಕಣದಲಿದ್ದರೆ, ಅದರಲ್ಲಿ 76 ಮಂದಿ ಮಹಿಳೆಯರಿದ್ದರು. ಈ ಸಲ ನಾರಿಯರ ಸಂಖ್ಯೆ ಏರಿಕೆ ಆಗಿದೆ ಎಂದು ವರದಿ ಆಗಿದೆ.

ಸರ್ಕಾರಗಳು ಮಹಿಳಾದ ಮತದಾರರನ್ನು ಗಮನದಲ್ಲಿಟ್ಟುಕೊಂಡು ರಾಜಕೀಯ ಪಕ್ಷಗಳು ಮಹಿಳಾ ಅಭ್ಯರ್ಥಿಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಕಣಕ್ಕಿಳಿಸಿದ್ದಾರೆ. ಈ ಪೈಕಿ ಬಿಜೆಪಿ ಮತ್ತು ಆಮ್ ಅದ್ಮಿ ಪಕ್ಷ (ಎಎಪಿ) ತಲಾ 09 ಮಂದಿ ಮಹಿಳೆಯನ್ನು ಕಣಕ್ಕಿಳಿಸಿದ್ದಾರೆ.
ಕಾಂಗ್ರೆಸ್ ದೆಹಲಿ ಒಟ್ಟು ಕ್ಷೇತ್ರಗಳಲ್ಲಿ ಮಹಿಳಾ ಅಭ್ಯರ್ಥಿಗಳಿಗೆ ಟಿಕೆಟ್ ನೀಡಿದೆ. ಹಿಂದಿನ ವಿಧಾನಸಭಾ ಚುನಾವಣೆಗಳಿಗೆ ಹೋಲಿಕೆ ಮಾಡಿದರೆ ಎಎಪಿ, ಬಿಜೆಪಿ ಮತ್ತು ಕಾಂಗ್ರೆಸ್ ಈ ಬಾರಿ ಮಹಿಳಾ ಅಭ್ಯರ್ಥಿಗಳಿಗೆ ಹೆಚ್ಚಿನ ಸಂಖ್ಯೆಯಲ್ಲಿ ಟಿಕೆಟ್ ನೀಡಿರುವುದು ಗೊತ್ತಾಗುತ್ತದೆ. ಹಾಗಾದರೆ ದೆಹಲಿಯಲ್ಲಿ ಪ್ರಮುಖ ಮಹಿಳಾ ಅಭ್ಯರ್ಥಿಗಳು ಯಾರು, ಯಾವ ಕ್ಷೇತ್ರದಿಂದ ಸ್ಪರ್ಧಿಸಲಿದ್ದಾರೆ ಎಂದು ತಿಳಿಸಿದರು.
ದೆಹಲಿ ಚುನಾವಣೆ 2025: ಪ್ರಮುಖ ಮಹಿಳಾ ಅಭ್ಯರ್ಥಿಗಳು
* ಅತಿಶಿ ಮರ್ಲೆನಾ: ಎಎಪಿ
ಆಮ್ ಆದ್ಮಿ ಪಕ್ಷದ ಪ್ರಮುಖ ನಾಯಕರಿಯ, ದೆಹಲಿ ಸಿಎಂ ಅತಿಶಿ ಅವರು ಇಲ್ಲಿನ ಕಲ್ಕಾಜಿ ವಿಧಾನಸಭಾ ಕ್ಷೇತ್ರಿದಂದ ಸ್ಪರ್ಧಿಸಿದ್ದಾರೆ. 2020ರಲ್ಲಿ ಒಟ್ಟು 55,897 ಮತಗಳ ಅಂತರದಿಂದ ಭರ್ಜರಿ ಗೆಲುವು ಸಾಧಿಸಿದ್ದರು.
* ರಾಖಿ ಬಿರ್ಲಾ : ಎಎಪಿ
ಆಮ್ ಅದ್ಮಿ ಪಕ್ಷದ ಮತ್ತೋರ್ವ ಮಹಿಳಾ ಅಭ್ಯರ್ಥಿ ರಾಖಿ ಬಿರ್ಲಾಅವರು ಮಂಗೋಲ್ ಪುರಿ (ಎಸ್‌ಸಿ) ಕ್ಷೇತ್ರದಿಂದ ಸ್ಪರ್ಧಿಸುತ್ತಿದ್ದಾರೆ. ಸ್ನಾತಕೋತ್ತರ ಪದವೀಧರೆಯಾದ ಇವರು ಈ ಹಿಂದಿನ ಚುನಾವಣೆಯಲ್ಲಿ 74,154 ಮತಗಳನ್ನು ಪಡೆದಿದ್ದಾರೆ.
* ಶಿಖಾ ರೈ : ಬಿಜೆಪಿ
ಬಿಜೆಪಿಯ ಪ್ರಮುಖ ಮಹಿಳಾ ಅಭ್ಯರ್ಥಿಗಳಲ್ಲಿ ಒಬ್ಬರಾದ ಶಿಖಾ ರೈ ಗ್ರೇಟರ್ ಕೈಲಾಶ್ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧೆಗೆ ಇಳಿದಿದ್ದಾರೆ. ಎಎಪಿ ನಾಯಕ ಸೌರಭ್ ಭಾರದ್ವಾಜ್ ವಿರುದ್ಧ ತೀವ್ರ ಪೈಪೋಟಿ ಒಡ್ಡಲು ತಯಾರಿ ನಡೆಸಿದ್ದಾರೆ. ಇವರು ರೂ.6.38 ಕೋಟಿ ಆಸ್ತಿ ಮಾಲೀಕರಾಗಿದ್ದಾರೆ.
* ಬಂದನ ಕುಮಾರಿ: ಎಎಪಿ
ಆಮ್ ಆದ್ಮಿ ಪಕ್ಷದ ಮಹಿಳಾ ಅಭ್ಯರ್ಥಿ ಬಂದನ ಕುಮಾರಿ ಶಾಲಿಮಾರ್ ಬಾಗ್ ಕ್ಷೇತ್ರದಿಂದ ಸ್ಪರ್ಧೆಗೆ ಇಳಿದಿದ್ದಾರೆ. 2020 ರ ಚುನಾವಣೆಯಲ್ಲಿ 57,707 ಮತ ಗಳಿಸಿ ಗೆದಿದ್ದಾರೆ.
* ಅಲ್ಕಾ ಲಂಬಾ : ಕಾಂಗ್ರೆಸ್
ಕಾಂಗ್ರೆಸ್ ಅಭ್ಯರ್ಥಿಯಾಗಿ ಕಲ್ಕಾಜಿ ಕ್ಷೇತ್ರದಿಂದಲೇ ಅಲ್ಕಾ ಲಂಬಾ ಅವರು ಸಿಎಂ ಅತಿಶಿ ವಿರುದ್ಧ ಕಣಕ್ಕಿಳಿದಿದ್ದಾರೆ. ಇವರು ಅವರು ವಿದ್ಯಾರ್ಥಿ ನಾಯಕಿಯಾಗಿ ಗುರುತಿಸಿಕೊಂಡಿದ್ದಾರೆ. ಇವರು ಸುಮಾರು 3.39 ಕೋಟಿ ರೂ. ಆಸ್ತಿ ಒಡತಿಯಾಗಿದ್ದಾರೆ.
* ಪ್ರೀತಿ ತೋಮರ್: ಎಎಪಿ
ಎಎಪಿ ಮತ್ತೋರ್ವ ನಾಯಕಿ ತ್ರಿ ನಗರ ಕ್ಷೇತ್ರದಿಂದ ಕಣಕ್ಕಿಳಿದಿದ್ದಾರೆ. ಇವರು 2020ರ ಚುನಾವಣೆಯಲ್ಲಿ 58,504 ಮತಗಳನ್ನು ಪಡೆದು ಗೆಲುವು ಸಾಧಿಸಿದ್ದಾರೆ. ಇವರ ಒಟ್ಟು ಆಸ್ತಿ 1.93 ಕೋಟಿ ರೂ.ಮೌಲ್ಯದ್ದಾಗಿದೆ ಎಂದು ಮೂಗಳು ತಿಳಿಸಿವೆ.
ಧನ್ವತಿ ಚಾಂಡೇಲಾ: ಎಎಪಿ
ದೆಹಲಿಯ ಪ್ರಮುಖ ಕ್ಷೇತ್ರಗಳಲ್ಲಿ ಒಂದಾಗಿರುವ ರಾಜೌರಿ ಗಾರ್ಡನ್ ಕ್ಷೇತ್ರದ ಸೀಟನ್ನು ಎಎಪಿ ಧನ್ವತಿ ಚಾಂಡೇಲಾ ಅವರು ಪಡೆದಿದ್ದಾರೆ. ಇವರು ಕಳೆದ ಭಾರಿ 62,212 ಮತಗಳನ್ನು ಗಳಿಸಿದ್ದರು.
ಉಳಿದಂತೆ ಕಾಂಗ್ರೆಸ್‌ನಿಂದ ಅರಿಬಾ ಖಾನ್ ಅವರು ಓಖ್ಲಾ ಕ್ಷೇತ್ರ, ಎಎಪಿ ನಾಯಕಿಯರಾದ ರಾಜ್ ಕುಮಾರಿ ಧಿಲ್ಲೋನ್ ಅವರು ಹರಿ ನಗರ ಕ್ಷೇತ್ರ, ಭಾವನಾ ಗೌರ್ ಅವರು ಪಾಲಂ, ಪ್ರಮೀಳಾ ಟೋಕಾಸ್ ಅವರು ಆರ್ ಕೆ ಪುರಂನಿಂದ ಸ್ಪರ್ಧಿಸಿದ್ದಾರೆ.












Click it and Unblock the Notifications