ಚಲಿಸುತ್ತಿರುವ ಕಾರಿನಲ್ಲಿ ಎಂಟು ಗಂಟೆ ಅತ್ಯಾಚಾರ ಮಾಡಿದ ಅಮಾನವೀಯರು
ಸೋಹ್ನಾ (ಹರ್ಯಾಣ), ಜೂನ್ 20: ಬಿಹಾರದ ಸಾಮೂಹಿಕ ಅತ್ಯಾಚಾರ ಪ್ರಕರಣ ಮರೆಯಾಗುವ ಮುನ್ನವೇ ಹರ್ಯಾಣದ ಸೋಹ್ನಾ ಎಂಬಲ್ಲಿ ಮತ್ತೊಂದು ಸಾಮೂಹಿಕ ಅತ್ಯಾಚಾರ ಪ್ರಕರಣ ನಡೆದಿದೆ.
ನಿನ್ನೆ (ಜೂನ್ 19) ರಾತ್ರಿ 8:30 ರ ಸಮಯದಲ್ಲಿ ಸ್ವಿಫ್ಟ್ ಕಾರಿನಲ್ಲಿ ಬಂದ ಕಾಮುಕರು, ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಮಹಿಳೆಯೊಬ್ಬರನ್ನು ಅಪಹರಿಸಿದ್ದಾರೆ.

ಹರ್ಯಾಣ, ದೆಹಲಿ ಮತ್ತು ಉತ್ತರ ಪ್ರದೇಶ ಮೂರು ರಾಜ್ಯಗಳಲ್ಲೂ ಕಾರನ್ನು ಓಡಿಸಿ, ಸತತ ಎಂಟು ಗಂಟೆ ಕಾಲ ಆಕೆಯ ಮೇಲೆ ಅತ್ಯಾಚಾರ ಎಸಗಿದ್ದಾರೆ. ನಂತರ ಉತ್ತರ ಪ್ರದೇಶದ ಗ್ರೇಟರ್ ನೋಯ್ಡಾದ ಕಾಸ್ನಾ ಪೊಲೀಸ್ ಠಾಣೆಯ ಬಳಿ ಆಕೆಯನ್ನು ಎಸೆದು ಹೋಗಿದ್ದಾರೆ.
ಸಂತ್ರಸ್ತೆಯನ್ನು ಸದ್ಯಕ್ಕೆ ಆಸ್ಪತ್ರೆಗೆ ಸೇರಿಸಲಾಗಿದ್ದು, ವೈದ್ಯಕೀಯ ಪರೀಕ್ಷೆಗಳು ನಡೆಯುತ್ತಿವೆ. ಆರೋಪಿಗಳ ಕುರಿತು ಹೆಚ್ಚಿನ ಮಾಹಿತಿ ಲಭ್ಯವಾಗಿಲ್ಲ.












Click it and Unblock the Notifications