ರಸ್ತೆ ದಾಟುತ್ತಿದ್ದಾಗ ವೇಗದ ಲಾರಿ ಡಿಕ್ಕಿ: ಮಹಿಳೆ ಸಾವು
ಜಗದಲ್ಪುರ (ಛತ್ತೀಸ್ ಗಢ), ಜೂನ್ 20: ವೇಗದ ಲಾರಿಯೊಂದು ರಸ್ತೆಯಲ್ಲಿ ಬರುತ್ತಿರುವಾಗಲೇ, ರಸ್ತೆ ದಾಟುತ್ತಿದ್ದ ಮಹಿಳೆಯ ಮೇಲೆ ಲಾರಿ ಹರಿದು ಆಕೆ ಸಾವನ್ನಪ್ಪಿದ ಘಟನೆ ಛತ್ತೀಸ್ ಗಢದ ಜಗದಲ್ಪುರ ಎಂಬಲ್ಲಿ ನಡೆದಿದೆ.
ಮಹಿಳೆಯನ್ನು ತಕ್ಷಣವೇ ಆಸ್ಪತ್ರೆಗೆ ಸೇರಿಸಲಾಯಿತಾದರೂ, ಆಕೆ ಬದುಕುಳಿಯಲಿಲ್ಲ. ಲಾರಿ ಚಾಲಕ ನಾಪತ್ತೆಯಾಗಿದ್ದಾನೆ. ಉದ್ರಿಕ್ತ ಜನರು ಲಾರಿಯನ್ನು ಸುಟ್ಟಿದ್ದಾರೆ. ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.













Click it and Unblock the Notifications