Video Viral: ಸೀರೆ ಉಟ್ಟು ತಲೆ ಮೇಲೆ 2 ಸಿಲಿಂಡರ್ ಇಟ್ಟು ಡ್ಯಾನ್ಸ್ ಮಾಡಿದ ಮಹಿಳೆ- ಎಲ್ಲಿದ್ದೆ ಇಲ್ಲಿತನಕ ಎಂದ ನೆಟ್ಟಿಗರು...
ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ಕೆಲವು ವಿಡಿಯೋಗಳು ಭಾರೀ ವೈರಲ್ ಆಗುತ್ತಿವೆ. ರಾಜಕೀಯ, ಸಿನಿಮಾ ಸುದ್ದಿಗಳ ಹೊರತಾಗಿ ಕೆಲ ವಿಡಿಯೋಗಳು ಅಚ್ಚರಿಯನ್ನು ಮೂಡಿಸುವಂತಿವೆ.
ಹೌದು.. ಇತ್ತೀಚೆಗೆ ವೈರಲ್ ಆದ ವಿಡಿಯೋದಲ್ಲಿ ಮಹಿಳೆಯೊಬ್ಬಳು ತನ್ನ ಶಕ್ತಿ ಪ್ರದರ್ಶನ ಮಾಡಿದ್ದಾಳೆ. ಆಕೆಯ ಶಕ್ತಿ ಪ್ರದರ್ಶನ ಕಂಡು ಜನ ಶಾಕ್ ಆಗಿದ್ದಾರೆ. ಹೆಣ್ಣು ಮಕ್ಕಳು ತಲೆ ಮೇಲೆ ಬಿಂದಿಗೆ ಹೋರುವುದನ್ನು ನಾವೆಲ್ಲಾ ನೋಡಿದ್ದೇವೆ. ಈ ಹಿಂದೆ ಹೆಂಗಸರು ತಲೆ ಮೇಲೆ ಕಟ್ಟಿಗೆಯ ಹೊರೆ ಹೊತ್ತು, ಸೋಂಟದ ಮೇಲೆ ನೀರಿನ ಬಿಂದಿಗೆ ಇಟ್ಟುಕೊಂಡು ಕಿ.ಮೀಟರ್ ಗಟ್ಟಲೆ ನಡೆಯುತ್ತಿದ್ದರು. ಕೆಲ ಹಳ್ಳಿಯಲ್ಲಿ ಇಂತಹ ದೃಶ್ಯವನ್ನು ನಾವು ಇಂದಿಗೂ ನೋಡಬಹುದು.

ಆದರೆ ಇಲ್ಲೊಂದು ವಿಡಿಯೋದಲ್ಲಿ ಒಬ್ಬ ಮಹಿಳೆ ತಲೆ ಮೇಲೆ ಗ್ಯಾಸ್ ಸಿಲಿಂಡರ್ ಹೊತ್ತು ನೃತ್ಯ ಮಾಡುತ್ತಿರುವುದು ಕಂಡು ಬಂದಿದೆ. ಅದು ಒಂದೇ ಗ್ಯಾಸ್ ಸಿಲಿಂಡರ್ ಅಲ್ಲ, ಬದಲಿಗೆ ಎರಡು ಗ್ಯಾಸ್ ಸಿಲಿಂಡರ್ ಅನ್ನು ಒಂದರ ಮೇಲೆ ಒಂದು ಇಟ್ಟುಕೊಂಡು ಅದರ ಮೇಲೆ ಬಿಂದಿಗೆ ಇಟ್ಟು ಮಹಿಳೆ ಡ್ಯಾನ್ಸ್ ಮಾಡಿದ್ದಾಳೆ. ಇದು ಮಹಿಳೆಯ ಶಕ್ತಿಯನ್ನು ತೋರಿಸುತ್ತದೆ.
ಸಾಮಾನ್ಯವಾಗಿ ಒಂದು ಗ್ಯಾಸ್ ಸಿಲಿಂಡರ್ ಅನ್ನು ಕೈಯಿಂದ ಎತ್ತಲು ಕಷ್ಟವಾಗುತ್ತದೆ. ಸಾಕಷ್ಟು ಕಷ್ಟು ಪಟ್ಟರು ಒಂದು ಫುಲ್ ಗ್ಯಾಸ್ ಸಿಲಿಂಡರ್ ಅನ್ನು ಹೆಗಲ ಮೇಲೆ ಹೊತ್ತುಕೊಳ್ಳಬಹುದು. ಆದರೆ ಈ ಮಹಿಳೆ ಎರಡು ಗ್ಯಾಸ್ ಸಿಲಿಂಡರ್ ಅನ್ನು ತಲೆ ಮೇಲೆ ಹೊತ್ತುಕೊಂಡಿದ್ದಾಳೆ. ಖಾಲಿ ಸಿಲಿಂಡರ್ ತೂಕ 15.9 ಕೆಜಿ ಹಾಗೂ ಅನಿಲ ತುಂಬಿದ ಸಿಲಿಂಡರ್ 14.2 ಕೆಜಿ ಸೇರಿ ತುಂಬಿದ ಸಿಲಿಂಡರ್ ಒಟ್ಟು 30.1ಕೆಜಿ ಇರುತ್ತದೆ.

ಹೀಗಾಗಿ ಖಾಲಿ ಸಿಲಿಂಡರ್ ಆದರೂ ಹೊತ್ತುಕೊಳ್ಳುವುದು ಅಷ್ಟು ಸುಲಭವಲ್ಲ. ಹೀಗಿರುವಾಗ ಎರಡು ಸಿಲಿಂಡರ್ ತಲೆ ಮೇಲೆ ಹೊತ್ತುಕೊಳ್ಳುವುದು ಮಹಿಳೆಗಿರುವ ಶಕ್ತಿಯನ್ನು ತೋರಿಸುತ್ತದೆ. ಹೀಗಾಗಿ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗುತ್ತಿದೆ. ಈ ವೈರಲ್ ವಿಡಿಯೋದಲ್ಲಿರುವ ಮಹಿಳೆಯ ಶಕ್ತಿಗೆ ಸಾಕಷ್ಟು ಮೆಚ್ಚುಗೆ ವ್ಯಕ್ತವಾಗಿದೆ. ಸಾಕಷ್ಟು ಪ್ರತಿಕ್ರಿಯೆಗಳು ಬಂದಿವೆ.
ನೀತು ಎಂಬ ಹೆಸರಿನ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಈ ಮಹಿಳೆಯ ಇಂತಹ ಹಲವಾರು ವಿಡಿಯೋಗಳಿವೆ. ಮಹಿಳೆ ಎರಡು ಗ್ಯಾಸ್ ಸಿಲಿಂಡರ್‌ಗಳನ್ನು ತಲೆಯ ಮೇಲೆ ಹೊತ್ತುಕೊಳ್ಳುವುದು ಮಾತ್ರವಲ್ಲದೆ ಇನ್ನು ಸಾಕಷ್ಟು ಇಂತಹ ಪ್ರದರ್ಶನದ ವಿಡಿಯೋಗಳನ್ನು ತನ್ನ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
ಮತ್ತೊಂದು ವಿಡಿಯೋದಲ್ಲಿ ಇವರು ತಲೆ ಮೇಲೆ ಗಾಜಿನ ಗ್ಲಾಸ್ ಇಟ್ಟು ನಂತರ ಅದರ ಮೇಲೆ 15.9 ಕೆಜಿ ತೂಕದ ಗ್ಯಾಸ್ ಸಿಲಿಂಡರ್ ಇಟ್ಟುಕೊಂಡಿದ್ದಾರೆ. ಮತ್ತೊಂದು ವಿಡಿಯೋದಲ್ಲಿ ನೀರಿನ ಬಾಟಲಿ ಮೇಲೆ, ಗ್ಲಾಸ್, ಡಬ್ಬಿಗಳ ಮೇಲೆ ಗ್ಯಾಸ್ ಸಿಲಿಂಡರ್ ಇಟ್ಟುಕೊಂಡಿದ್ದಾರೆ.
ಇನ್ನೊಂದು ಅಚ್ಚರಿಯ ವಿಡಿಯೋ ಅಂದರೆ ಇವರು ಒಂದಲ್ಲ ಎರಡಲ್ಲ ಬರೋಬ್ಬರಿ ಮೂರು ಗ್ಲಾಸ್ ಮೇಲೆ ಗ್ಯಾಸ್ ಸಿಲಿಂಡರ್ ಇಟ್ಟುಕೊಂಡಿದ್ದಾರೆ. ಗ್ಯಾಸ್ ಸಿಲಿಂಡರ್ ತಲೆ ಮೇಲೆ ಇಟ್ಟುಕೊಂಡು ಮತ್ತೊಂದು ಗ್ಯಾಸ್ ಸಿಲಿಂಡರ್ ಮೇಲೆ ಹತ್ತಿ ನಿಲ್ಲುತ್ತಾರೆ. ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳಲಾಗಿರುವ ಈ ವಿಡಿಯೋಗಳಿಗೆ ಭಾರೀ ಮಚ್ಚುಗೆ ವ್ಯಕ್ತವಾಗಿದೆ. ಸೀರೆಯನ್ನು ಉಟ್ಟ ಮಹಿಳೆಯ ಶಕ್ತಿ ಕಂಡು ಜನ ಬೆರಗಾಗಿದ್ದಾರೆ. ಮಹಿಳೆಯ ಪ್ರದರ್ಶನಕ್ಕೆ ನೆಚ್ಚಿಗರು ಅಚ್ಚರಿಗೊಂಡಿದ್ದಾರೆ.












Click it and Unblock the Notifications