ಈ ದೊಡ್ಡ ಪಕ್ಷ ಸೇರುತ್ತಾರಂತೆ ಸಿಎಂ ವಿಜಯ್‌ ಪತ್ನಿ, ಡಿವೋರ್ಸ್‌ಗೂ ಮೊದಲೇ ಪಾಲಿಟಿಕ್ಸ್‌ಗೆ ಕರೆತರಲು ಖ್ಯಾತ ನಟಿಯ ಮಧ್ಯಸ್ಥಿಕೆ

ತಮಿಳುನಾಡಿನ ಸಿಎಂ ಸಿಂಹಾಸನವೇರಿ ಇನ್ನು ಒಂದು ತಿಂಗಳೂ ಕಳೆದಿಲ್ಲ, ಅದಾಗಲೇ ವಿಜಯ್ ಬದುಕಿನಲ್ಲಿ ದೊಡ್ಡ ಬಿರುಗಾಳಿ ಎದ್ದಿದೆ. ವಿಜಯ್‌ ಹಾಗೂ ಪತ್ನಿ ಸಂಗೀತಾ ದಾಂಪತ್ಯದಲ್ಲಿ ಬಿರುಕು ಮೂಡಿದ್ದು, ಡಿವೋರ್ಸ್‌ಗಾಗಿ ಕೋರ್ಟ್‌ ಮೆಟ್ಟಿಲೇರಿರುವುದು ಗೊತ್ತೇ ಇದೆ. ಪತಿಯ ವಿರುದ್ಧ ಗಂಭೀರ ಆರೋಪಗಳನ್ನು ಮಾಡಲಾಗಿದ್ದು, ಮಗ, ಮಗಳು ಕೂಡ ಅವರಿಂದ ಅಂತರ ಕಾಯ್ದುಕೊಂಡಿದ್ದಾರೆ. ಇದೆಲ್ಲದರ ನಡುವೆ ಸಂಗೀತಾ ಅವರ ಬಗ್ಗೆ ದೊಡ್ಡ ಸುದ್ದಿಯೊಂದು ಹರಿದಾಡುತ್ತಿದೆ. ವಿಜಯ್‌ ರೀತಿ ಪತ್ನಿಯೂ ರಾಜಕೀಯಕ್ಕೆ ಗ್ರ್ಯಾಂಡ್‌ ಎಂಟ್ರಿ ಕೊಡಲಿದ್ದಾರಂತೆ, ಅದು ಕೂಡ ಯಾವುದೋ ಸಣ್ಣ ಪಕ್ಷದಿಂದ ಅಲ್ಲ.

ಸದ್ಯ ಈ ವಿಚಾರ ತಮಿಳುನಾಡು ರಾಜಕಾರಣದಲ್ಲಿ ಬಿರುಗಾಳಿಯಂತೆ ಎದ್ದಿದೆ. ಇತ್ತೀಚೆಗಷ್ಟೇ ತಮಿಳಗ ವೆಟ್ರಿ ಕಳಗಂ (TVK) ಪಕ್ಷದ ಮೂಲಕ ಭರ್ಜರಿ ಯಶಸ್ಸು ಸಾಧಿಸಿ ತಮಿಳುನಾಡಿನ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡಿರುವ ವಿಜಯ್ ಅವರ ವೈಯಕ್ತಿಕ ಜೀವನದ ಏರುಪೇರುಗಳನ್ನು ಬಳಸಿಕೊಂಡು ವಿರೋಧ ಪಕ್ಷಗಳು ಹೊಸ ದಾಳ ಉರುಳಿಸಲು ಸಜ್ಜಾಗಿವೆ ಎಂಬ ಸ್ಫೋಟಕ ಸುದ್ದಿಯೊಂದು ರಾಜಕೀಯ ವಲಯದಲ್ಲಿ ಹರಿದಾಡುತ್ತಿದೆ.

Sangeetha

ಕೆಲ ಮಾಧ್ಯಮಗಳು ವರದಿ ಮಾಡಿರುವ ಪ್ರಕಾರ, ಸಿಎಂ ವಿಜಯ್ ಅವರ ಪತ್ನಿ ಸಂಗೀತಾ ಸ್ವರ್ಣಲಿಂಗಂ ಅವರನ್ನು ಭಾರತೀಯ ಜನತಾ ಪಾರ್ಟಿಗೆ (BJP) ಸೆಳೆಯಲು ತೆರೆಮರೆಯಲ್ಲಿ ಭಾರಿ ಕಸರತ್ತುಗಳು ನಡೆಯುತ್ತಿವೆ. ಈ ವಿಷಯ ಈಗ ಚೆನ್ನೈನ ರಾಜಕೀಯ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ. ಮೂಲಗಳ ಪ್ರಕಾರ, ಸಿಎಂ ವಿಜಯ್ ಅವರ ರಾಜಕೀಯ ಪ್ರಭಾವವನ್ನು ಎದುರಿಸಲು ಮತ್ತು ತಮಿಳುನಾಡಿನಲ್ಲಿ ಬಿಜೆಪಿಗೆ ಗಟ್ಟಿ ನೆಲೆ ಕಲ್ಪಿಸಲು ಹಿರಿಯ ನಾಯಕರು ಈ ಹೊಸ ಕಾರ್ಯತಂತ್ರ ರೂಪಿಸಿದ್ದಾರೆ ಎನ್ನಲಾಗಿದೆ.

ಕ್ಯಾನ್ಸರ್‌ ಪತ್ತೆಯಾದಾಗ ನನಗಾಗಿ ಅವರೆಲ್ಲ ಕಾಯ್ತಾರೆ ಅನ್ಕೊಂಡಿರಲಿಲ್ಲ: ನಟ ಶಿವರಾಜ್‌ಕುಮಾರ್ ಭಾವುಕ
ಕ್ಯಾನ್ಸರ್‌ ಪತ್ತೆಯಾದಾಗ ನನಗಾಗಿ ಅವರೆಲ್ಲ ಕಾಯ್ತಾರೆ ಅನ್ಕೊಂಡಿರಲಿಲ್ಲ: ನಟ ಶಿವರಾಜ್‌ಕುಮಾರ್ ಭಾವುಕ

ಖ್ಯಾತ ನಟಿಯಿಂದ ಮನವೊಲಿಕೆ

ವಿಜಯ್ ಅವರ ಕುಟುಂಬಕ್ಕೆ ಅತ್ಯಂತ ಹತ್ತಿರವಿರುವ, ಸದ್ಯ ಬಿಜೆಪಿಯಲ್ಲಿ ಪ್ರಭಾವಿ ನಾಯಕಿಯಾಗಿ ಗುರುತಿಸಿಕೊಂಡಿರುವ ದಕ್ಷಿಣ ಭಾರತದ ಖ್ಯಾತ ನಟಿಯೊಬ್ಬರು ಸಂಗೀತಾರನ್ನು ಪಕ್ಷಕ್ಕೆ ಕರೆತರಲು ಸಂಧಾನ ನಡೆಸುತ್ತಿದ್ದಾರೆ ಎಂದು ವರದಿಯಾಗಿದೆ. ವಿಜಯ್ ಅವರ ಕುಟುಂಬದ ಸದಸ್ಯರನ್ನೇ ಎದುರಾಳಿ ಪಕ್ಷಕ್ಕೆ ತರುವ ಮೂಲಕ ತಮಿಳುನಾಡಿನಲ್ಲಿ ದೊಡ್ಡ ರಾಜಕೀಯ ಹವಾ ಸೃಷ್ಟಿಸುವುದು ಇದರ ಹಿಂದಿನ ಮುಖ್ಯ ಉದ್ದೇಶ ಎನ್ನಲಾಗಿದೆ.

ವಿಜಯ್ ಹಾಗೂ ಸಂಗೀತಾ ಅವರ ನಡುವೆ ವೈವಾಹಿಕ ಭಿನ್ನಾಭಿಪ್ರಾಯಗಳು ಮೂಡಿ ಅವರು ಬೇರ್ಪಟ್ಟಿದ್ದಾರೆ ಎಂಬ ವದಂತಿಗಳು ಮಾಧ್ಯಮಗಳಲ್ಲಿ ಪದೇ ಪದೇ ಸದ್ದು ಮಾಡುತ್ತಿದ್ದವು. ವಿಜಯ್ ಅವರ ರಾಜಕೀಯ ಜೀವನದ ಅತ್ಯಂತ ಪ್ರಮುಖ ಸಾರ್ವಜನಿಕ ಸಮಾರಂಭಗಳಲ್ಲಿ ಮತ್ತು ಇತ್ತೀಚಿನ ಅವರ ಪ್ರಮಾಣವಚನ ಸ್ವೀಕಾರ ಕಾರ್ಯಕ್ರಮದಲ್ಲೂ ಸಂಗೀತಾ ಮತ್ತು ಅವರ ಮಕ್ಕಳು ಕಾಣಿಸಿಕೊಳ್ಳದೇ ಇರುವುದು ಈ ವದಂತಿಗಳಿಗೆ ಮತ್ತಷ್ಟು ರೆಕ್ಕೆಪುಕ್ಕ ನೀಡುವಂತೆ ಮಾಡಿತ್ತು. ಇದೀಗ ಇದೇ ಕೌಟುಂಬಿಕ ಅಂತರವನ್ನು ರಾಜಕೀಯ ದಾಳವನ್ನಾಗಿ ಬಳಸಿಕೊಳ್ಳಲು ವಿರೋಧ ಪಕ್ಷಗಳು ಮುಂದಾಗಿವೆ ಎನ್ನಲಾಗುತ್ತಿದೆ.

ಯಾರು ಈ ಸಂಗೀತಾ ಸ್ವರ್ಣಲಿಂಗಂ?

ಸಂಗೀತಾ ಅವರು ಮೂಲತಃ ಲಂಡನ್‌ನಲ್ಲಿ ನೆಲೆಸಿದ್ದ ಶ್ರೀಲಂಕಾ ಮೂಲದ ತಮಿಳು ಉದ್ಯಮಿಯೊಬ್ಬರ ಪುತ್ರಿ. ಆರಂಭದಲ್ಲಿ ದಳಪತಿ ವಿಜಯ್ ಅವರ ಅಪ್ಪಟ ಅಭಿಮಾನಿಯಾಗಿದ್ದ ಸಂಗೀತಾ, ಬಳಿಕ ವಿಜಯ್ ಅವರೊಂದಿಗೆ ಸ್ನೇಹ ಬೆಳೆಸಿದ್ದರು. ಈ ಸ್ನೇಹ ಮುಂದೆ ಪ್ರೀತಿಗೆ ತಿರುಗಿ, ಇಬ್ಬರೂ 1999ರಲ್ಲಿ ಹಿರಿಯರ ಸಮ್ಮುಖದಲ್ಲಿ ವಿವಾಹವಾಗಿದ್ದರು. ಈ ದಂಪತಿಗೆ ಜೇಸನ್ ಸಂಜಯ್ ಮತ್ತು ದಿವ್ಯಾ ಸಾಶಾ ಎಂಬ ಇಬ್ಬರು ಮಕ್ಕಳಿದ್ದಾರೆ.

ವಿಜಯ್ ಅವರ ಬೆಳವಣಿಗೆಯನ್ನು ತಡೆಯಲು ಮತ್ತು ಅವರ ಮೇಲೆ ಮಾನಸಿಕ ಹಾಗೂ ರಾಜಕೀಯ ಒತ್ತಡ ಹೇರಲು ಇಂತಹ ವದಂತಿಗಳನ್ನು ಮತ್ತು ತಂತ್ರಗಳನ್ನು ಹರಡಲಾಗುತ್ತಿದೆ ಎಂದು ವಿಜಯ್ ಅವರ ಬೆಂಬಲಿಗರು ಮತ್ತು ಕೆಲವು ರಾಜಕೀಯ ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ. ಸದ್ಯಕ್ಕೆ ಈ ವಿಷಯದ ಕುರಿತು ಖುದ್ದು ಸಂಗೀತಾ ಅವರಾಗಲಿ ಅಥವಾ ಬಿಜೆಪಿ ಹೈಕಮಾಂಡ್ ಆಗಲಿ ಯಾವುದೇ ಅಧಿಕೃತ ಪ್ರಕಟಣೆ ಹೊರಡಿಸಿಲ್ಲ. ಯಾವುದೇ ಅಧಿಕೃತ ಘೋಷಣೆ ಇಲ್ಲದಿದ್ದರೂ ತಮಿಳುನಾಡು ರಾಜಕೀಯದ ಗದ್ದುಗೆಯಲ್ಲಿ ಈ ಸುದ್ದಿ ಮಾತ್ರ ಸದ್ಯಕ್ಕೆ ಭಾರಿ ಸಂಚಲನ ಮೂಡಿಸುತ್ತಿರುವುದಂತೂ ಸುಳ್ಳಲ್ಲ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+