"ದುರ್ಗಾಷ್ಟಮಿಗೆ ಕನ್ಹಯ್ಯಾ ಕುಮಾರ್ ಹತ್ಯೆ ಮಾಡ್ತೆವೆ"

Subscribe to Oneindia Kannada

ಮೀರತ್‌, ಮಾರ್ಚ್. 28: ಜವಾಹರಲಾರಲ್ ನೆಹರು ವಿವಿಯ ವಿದ್ಯಾರ್ಥಿ ಸಂಘದ ಮುಖಂಡ ಕನ್ಹಯ್ಯ ಕುಮಾರ್ ಮತ್ತು ಉಮರ್ ಖಲೀದ್ ಗೆ ಮತ್ತೆ ಬೆದರಿಕೆ ಆರಂಭವಾಗಿದೆ.

ಉತ್ತರ ಪ್ರದೇಶದ ನವ ನಿರ್ಮಾಣ ಸೇನೆ ಮಾರ್ಚ್‌ 31ಕ್ಕೆ ಮುನ್ನ ಇಲ್ಲವೇ ಈ ವರ್ಷ ದುರ್ಗಾಷ್ಟಮಿಗೆ ಮುನ್ನ ಜವಾಹರಲಾಲ್‌ ನೆಹರೂ ವಿವಿ ಆವರಣದೊಳಗೆ ನುಗ್ಗಿ ಕನ್ಹಯ್ಯಾ ಕುಮಾರ್‌ ಮತ್ತು ಉಮರ್‌ ಖಾಲಿದ್‌ ನನ್ನು ಗುಂಡಿಕ್ಕಿ ಕೊಲ್ಲುತ್ತೇನೆ ಎಂದು ಹೇಳಿದೆ.[ಭಾಷಣಕ್ಕೆ ಅಡ್ಡಿ, ಕನ್ಹಯ್ಯ ಕುಮಾರ್‌ ಮೇಲೆ ಚಪ್ಪಲಿ ಎಸೆತ]

new delhi

ಸೈನಿಕರು ಕಾಶ್ಮೀರದಲ್ಲಿ ಮಹಿಳೆಯರ ಮೇಲೆ ಅತ್ಯಾಚಾರ ಮಾಡುತ್ತಿದ್ದಾರೆ ಎಂಬ ಹೇಳಿಕೆ ಸೇರಿದಂತೆ ಕನ್ಹಯ್ಯ ಕುಮಾರ್ ಅವರ ಮಾತಿನಿಂದ ವ್ಯಗ್ರವಾಗಿರುವ ಸೇನೆ ಇದೀಗ ಇಂಥ ಹೇಳಿಕೆ ನೀಡಿದೆ. ಯುಪಿ ನವ ನಿರ್ಮಾಣ ಸೇನೆಯ ರಾಷ್ಟ್ರಾಧ್ಯಕ್ಷ ಅಮಿತ್‌ ಜಾನಿ ಫೇಸ್‌ಬುಕ್‌ನಲ್ಲಿ ಈ ರೀತಿಯ ಬೆದರಿಕೆ ಪತ್ರವೊಂದನ್ನು ಪೋಸ್ಟ್ ಮಾಡಿದ್ದಾರೆ.[ಕನ್ಹಯ್ಯಾ ತಲೆಗೆ ಇನಾಮು ಘೋಷಿಸಿದ್ದವ ಪೊಲೀಸ್ ಅತಿಥಿ]

ನನಗೆ ಕಾಲೇಜು ಆವರಣ ಪ್ರವೇಶ ಮಾಡಲು ಸಾಧ್ಯವಾಗದೇ ಹೋದರೆ ರಾಜಕಾರಣಕ್ಕೆ ಗುಡ್ ಬೈ ಹೇಳುತ್ತೇನೆ ಎಂದು ಜಾನಿ ಇದರೊಂದಿಗೆ ಹೇಳಿದ್ದಾರೆ. ಯಾರನ್ನು ಆದರೂ ಅವಮಾನಿಸಿ ಸಹಿಸಿಕೊಳ್ಳುವಷ್ಟು ದಿನ ಸಹಿಸಿಕೊಳ್ಳುತ್ತೇವೆ. ಆದರೆ ಸೇನೆಯನ್ನು ಮಾತ್ರ ಯಾವ ಕಾರಣಕ್ಕೂ ದೂರ ಬೇಡಿ. ಅದು ನಮ್ಮನ್ನು ಮತ್ತಷ್ಟು ಕೆರಳಿಸುತ್ತದೆ ಎಂದು ಹೇಳಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
A Uttar Pradesh-based political outfit has threatened to gun down Jawaharlal Nehru University (JNU) students Kanhaiya Kumar and Umar Khalid before Durga Ashtami. Uttar Pradesh Navnirman Sena has threatened to storm the JNU campus and gun down Kanhaiya Kumar and Umar Khalid unless the two leave Delhi by March 31.
Please Wait while comments are loading...