ಲೋಕಸಭಾ ಚುನಾವಣೆಯಲ್ಲಿ ಪುರಿಯಿಂದ ಕಣಕ್ಕಿಳಿಯಲಿದ್ದಾರಾ ಮೋದಿ?

Recommended Video

      ಲೋಕಸಭಾ ಚುನಾವಣೆಯಲ್ಲಿ ಪುರಿಯಿಂದ ಕಣಕ್ಕಿಳಿಯಲಿದ್ದಾರಾ ಮೋದಿ..! | Oneindia Kannada

      ಪುರಿ, ಜನವರಿ 03: ಕಳೆದ ಲೋಕಸಭಾ ಚುನಾವಣೆಯಲ್ಲಿ ವಾರಣಾಸಿಯಿಂದ ಸ್ಪರ್ಧಿಸಿದ್ದ ಪ್ರಧಾನಿ ನರಂದ್ರ ಮೋದಿ, ಈ ಬಾರಿ ಒಡಿಶಾದ ಪುಣೆಯಿಂದ ಸ್ಪರ್ಧಿಸುವ ಸಾಧ್ಯತೆ ಇದೆ.

      ಬಿಜೆಪಿ ಹಿರಿಯ ಮುಖಂಡ ಪ್ರದೀಪ್ ಪುರೋಹಿತ್ ಅವರೇ, 'ಮುಂಬರುವ ಲೋಕಸಭಾ ಚುನಾವಣೆಯಲ್ಲಿ ನರೇಂದ್ರ ಮೋದಿಯವರು ಒಡಿಶಾದ ಪುರಿಯಿಂದ ಸ್ಪರ್ಧಿಸುವ ಸಾಧ್ಯತೆಗಳು ಶೇ.90 ರಷ್ಟಿದೆ' ಎಂದಿದ್ದಾರೆ.

      Will PM Narendra Modi contest from Puri in Lok Sabha elections 2019?

      2018 ರ ಅಕ್ಟೋಬರ್ ನಲ್ಲೇ ಈ ಕುರಿತು ಒಡಿಶಾ ಬಿಜೆಪಿ ಘಟಕ ಪ್ರಧಾನಿಯವರಿಗೆ ಮನವಿ ಮಾಡಿತ್ತು.

      "ಮೋದಿಯವರಿಗೆ ಒಡಿಶಾದ ಜನರ ಜೊತೆ ಭಾವನಾತ್ಮಕ ಬೆಸುಗೆ ಇದೆ. ಅವರಿಗೆ ಒಡಿಶಾ ಜನರ ಬಗ್ಗೆ ಅಪಾರವಾದ ಪ್ರೀತಿ ಇದೆ. ಆದ್ದರಿಂದ ಅವರು ಈ ಕ್ಷೇತ್ರದಿಂದ ಸ್ಪರ್ಧಿಸಬಹುದಾದ ಸಾಧ್ಯತೆಯನ್ನು ಅಲ್ಲಗಳೆಯುವಂತಿಲ್ಲ" ಎಂದು ಪುರೋಹಿತ್ ಹೇಳಿದ್ದಾರೆ.

      ಅಕಸ್ಮಾತ್ ಮೋದಿಯವರು ಪುರಿಯಿಂದ ಸ್ಪರ್ಧಿಸಿದ್ದೇ ಆದರೆ, ಒಡಿಶಾದಿಂದ ಲೋಕಸಭೆಗೆ ಸ್ಪರ್ಧಿಸುತ್ತಿರುವ ಎರಡನೇ ಪ್ರಧಾನಿ ಅವರಾಗಲಿದ್ದಾರೆ. 1996 ರಲ್ಲಿ ಮಾಜಿ ಪ್ರಧಾನಿ ಪಿ ವಿ ನರಸಿಂಹ ರಾವ್ ಅವರು ಸಹ ಲೋಕಸಭಾ ಚುನಾವಣೆಗೆ ಒಡಿಶಾದ ಬೆರ್ಹಮ್ಪುರ ಕ್ಷೇತ್ರದದಿಂದ ಸ್ಪರ್ಧಿಸಿದ ಗೆದ್ದಿದ್ದರು.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+