ಭಾರತದ ಏಕೈಕ ರೈಲು ಸಂಪರ್ಕವಿಲ್ಲದ ರಾಜ್ಯ ಸಿಕ್ಕಿಂ: ಕಾರಣ ಮತ್ತು ಪ್ರಯಾಣ ಮಾರ್ಗಗಳ ವಿವರ

ಭಾರತದಂತಹ ವಿಶಾಲವಾದ ದೇಶದಲ್ಲಿ ದೂರದ ಗ್ರಾಮಗಳಿಗೆ ಮತ್ತು ಮಹಾನಗರಗಳನ್ನು ಸಂಪರ್ಕ ಕಲ್ಪಿಸುವ ಪ್ರಮುಖ ಸಾರಿಗೆ ವ್ಯವಸ್ಠೆ ಎಂದರೆ ರೈಲ್ವೇ. ದೇಶದ ಬಹುತೇಕ ಭಾಗಗಳಿಗೆ ರೈಲು ಮಾರ್ಗಗಳ ಮೂಲಕ ಸುಲಭವಾಗಿ ತಲುಪಬಹುದು ಎಂದು ನಂಬಿಕೆಯಿದೆ. ಭಾರತೀಯ ರೈಲ್ವೆಯು ವಿಶ್ವದ ಅತಿ ದೊಡ್ಡ ರೈಲುಗಳಲ್ಲಿ ಒಂದಾಗಿದೆ. ಇದು ಸಮತಟ್ಟಾದ ಪ್ರದೇಶಗಳನ್ನು, ಮರಳು ಭೂಮಿ ಹಾಗೂ ಪರ್ವತ ಪ್ರದೇಶಗಳನ್ನು ಸಂಪರ್ಕಿಸುತ್ತದೆ.

ಆದರೆ ಒಂದು ವಿಶೇಷ ಉದಾಹರಣೆ ಇಲ್ಲಿದೆ. ಸಿಕ್ಕಿಂ, ಹಿಮಾಲಯ ಪರ್ವತದಲ್ಲಿರುವ ಭಾರತದ ಈಶಾನ್ಯ ಭಾಗದಲ್ಲಿರುವ ಒಂದು ಸುಂದರವಾದ ರಾಜ್ಯ, ಈ ರಾಜ್ಯದಲ್ಲಿ ಇಂದಿಗೂ ಭಾರತೀಯ ರೈಲು ಮಾರ್ಗಗಳಾಗಲಿ ಅಥವಾ ರೈಲು ನಿಲ್ದಾಣಗಳಾಗಲಿ ಇಲ್ಲಾ. ಇದರಿಂದಾಗಿ ಇದು ಭಾರತದ ರೈಲು ಸಂಪರ್ಕವಿಲ್ಲದ ಏಕೈಕ ರಾಜ್ಯವಾಗಿದೆ.

Why Sikkim Has No Railway Connectivity

ಸಿಕ್ಕಿಂ ರಾಜ್ಯದಲ್ಲಿ ರೈಲು ಸಂಪರ್ಕ ಇಲ್ಲದಿರುವುದಕ್ಕೆ ಅಲ್ಲಿರುವ ಅದರ ಭೌಗೋಳಿಕ ಸವಾಲುಗಳೆ ಪ್ರಮುಖ ಕಾರಣವಾಗಿದೆ. ಇಲ್ಲಿರುವ ಅತೀ ಎತ್ತರದ ಪರ್ವತಗಳು ಮತ್ತು ಆಳವಾದ ಕಣಿವೆಗಳು ಮತ್ತು ತೀವ್ರ ಹವಾಮಾನ ಬದಲಾವಣೆ, ಭೂಕುಸಿತ ಮತ್ತು ಮಂಜು ಗಡ್ಡೆ ಕರಗುವುದು ಈ ಪ್ರದೇಶಗಳಲ್ಲಿ ಹೆಚ್ಚಾಗಿ ಕಂಡುಬರುತ್ತದೆ. ಈ ಪ್ರದೇಶಗಳಲ್ಲಿ ರೈಲು ಮಾರ್ಗ ನಿರ್ಮಾಣ ಮಾಡಲು ತುಂಬಾ ಕಷ್ಟಕರ ಮತ್ತು ಹಲವು ಸುರಂಗ ಮಾರ್ಗಗಳು ಹಾಗೂ ಸೇತುವೆಗಳ ಅಗತ್ಯತೆ ಹೆಚ್ಚಾಗಬಹುದು.

ಆದರೆ ಈಗ ಸ್ಥಿತಿ ಬದಲಾಗುತ್ತಿದೆ ಪಶ್ಚಿಮ ಬಂಗಾಳದ ಸೇವೋಕ್ ಮತ್ತು ಸಿಕ್ಕಿಂನ ರಂಗ್ಫೋ ನಡುವೆ ಸುಮಾರು 45 ಕಿ.ಮೀ ಉದ್ದದ ರೈಲು ಮಾರ್ಗದ ನಿರ್ಮಾಣ ಕಾರ್ಯ ಭರದಿಂದ ಸಾಗುತ್ತಿದೆ. ತಿಸ್ತಾ ನದಿಯ ಕಣಿವೆಯ ಮೂಲಕ ಹಾದುಹೋಗುವ ಈ ಯೋಜನೆ ದೇಶದ ಅತ್ಯಂತ ಮಹತ್ವಾಕಾಂಕ್ಷೆಯ ರೈಲು ಯೋಜನೆಗಳಲ್ಲಿ ಒಂದಾಗಿದೆ. ಈ ಮಾರ್ಗವು 2027ರಲ್ಲಿ ಪೂರ್ಣಗೂಳ್ಳುವ ನಿರೀಕ್ಷೇಯಿದ್ದು ಮುಂದಿನ ಹಂತದಲ್ಲಿ ಇದನ್ನು ಸಿಕ್ಕಿಂ ರಾಜಧಾನಿ ಗ್ಯಾಂಗ್ಟಾಕ್‌ವರೆಗೆ ವಿಸ್ತರಿಸುವ ಯೋಜನೆಯೂ ಇದೆ.

ಸಿಕ್ಕಿಂಗೆ ತಲುಪುವುದು ಹೇಗೆ

ರೈಲು ಮತ್ತು ರಸ್ತೆ ಮಾರ್ಗಗಳು

ಸಿಕ್ಕಿಂಗೆ ಪ್ರಯಾಣ ಮಾಡಲು ಪ್ರವಾಸಿಗರು ಹೆಚ್ಚಾಗಿ ಆಯ್ಕೆ ಮಾಡಿಕೊಳ್ಳುವ ಮಾರ್ಗವೆಂದರೆ, ಮೊದಲು ಪಶ್ಚಿಮ ಬಂಗಾಳದ ನ್ಯೂ ಜಲ್ಪೈಗುರಿ(NJP) ರೈಲು ನಿಲ್ದಾಣಕ್ಕೆ ತಲುಪಬೇಕು. ಇದು ದೆಹಲಿ ಮತ್ತು ಕೋಲ್ಕತ್ತದಂತಹ ಪ್ರಮುಖ ನಗರಗಳಿಗೆ ಉತ್ತಮ ಸಂಪರ್ಕ ಹೊಂದಿರುವ ಮಾರ್ಗವಾಗಿದೆ. ಅಲ್ಲಿಂದ ಸಿಲಿಗುರಿ ಮೂಲಕ ಜೀಪ್, ಟ್ಯಾಕ್ಸಿ ಮತ್ತು ಬಸ್ ಬಳಸಿ 4 ರಿಂದ 5 ಗಂಟೆಗಳಲ್ಲಿ ಗ್ಯಾಂಗ್ಟಾಕ್ ತಲುಪಬಹುದು.

Why Sikkim Has No Railway Connectivity

ವಿಮಾನ ಮತ್ತು ರಸ್ತೆ ಮಾರ್ಗಗಳು

ವೇಗವಾಗಿ ತಲುಪಬೇಕು ಎಂದು ಬಯಸುವವರಿಗೆ ಈ ವಿಮಾನ ಮಾರ್ಗ ಸೂಕ್ತ. ಸಿಕ್ಕಿಂನಲ್ಲಿರುವ ಪಾಕ್ಯಾಂಗ್ ವಿಮಾನ ನಿಲ್ದಾಣ ಇದ್ದರು ಅಲ್ಲಿ ವಿಮಾನಗಳ ಸಂಚಾರ ಸೀಮಿತವಾಗಿದೆ. ಆದ್ದರಿಂದ ಹತ್ತಿರದ ಬಾಗ್ಡೋಗ್ರಾ ವಿಮಾನ ನಿಲ್ದಾಣವು ಹೆಚ್ಚು ಅನುಕೂಲಕರವಾಗಿದೆ. ಅಲ್ಲಿಂದ ರಸ್ತೆ ಮಾರ್ಗಗಳ ಮೂಲಕ ಗ್ಯಾಂಗ್ಟಾಕ್ ತಲುಪಲು 4 ರಿಂದ 5 ಗಂಟೆಗಳು ಬೇಕಾಗುತ್ತದೆ.

ರಸ್ತೆ ಮಾರ್ಗ:

ರಸ್ತೆ ಮಾರ್ಗದ ಪ್ರಯಾಣವನ್ನು ಇಷ್ಟಪಡುವರಿಗೆ ಸಿಕ್ಕಿಂ ರಾಜ್ಯವು ಒಂದು ಸುಂದರ ಆಯ್ಕೆ ಆಗಿದೆ. ಪಶ್ಚಿಮ ಬಂಗಾಳದಿಂದ ಉತ್ತಮ ರಸ್ತೆ ಸಂಪರ್ಕವಿದ್ದು, ಸಿಲಿಗುರಿಯಿಂದ ಆರಂಭವಾಗುವ ಪ್ರಯಾಣವು ಸಮತಟ್ಟ ಪ್ರದೇಶದಿಂದ ಸುಂದರವಾದ ಪರ್ವತಗಳ ಹಸಿರಿನ ನಡುವೆ ಸಾಗುವ ಈ ಪ್ರಯಾಣವು ಒಂದು ಅದ್ಬುತವಾದ ಅನುಭವವನ್ನು ನೀಡುತ್ತದೆ.

ರೈಲು ಸಂಪರ್ಕ ಇಲ್ಲದಿರುವುದು ಸಿಕ್ಕಿಂನ ಪ್ರಾಕೃತಿಕ ಸೌಂದರ್ಯ ಮತ್ತು ಶಾಂತತೆಯನ್ನು ಕಾಪಾಡಿಕೊಳ್ಳುವಲ್ಲಿ ಸಹಕಾರಿಯಾಗಿದೆ ಎನ್ನಬಹುದು. ಇಲ್ಲಿ ತಲುಪುವುದು ಕೇವಲ ಸ್ಥಳವಲ್ಲಾ ಇದು ಒಂದು ಮರೆಯಲಾಗದ ಪ್ರಯಾಣದ ಅನುಭವ. ಮುಂದಿನ ಕೆಲವು ವರ್ಷಗಳಲ್ಲಿ ರೈಲು ಸಂಪರ್ಕ ಲಭ್ಯವಾದರೂ ಕೂಡ ಪ್ರಸ್ತತ ಲಭ್ಯವಿರುವ ರಸ್ತೆ ಮತ್ತು ರೈಲು ಮಾರ್ಗಗಳು ಅತ್ಯುತ್ತಮವಾದ ಅನುಭವ ನೀಡುತ್ತವೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+