• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಕಾಂಗ್ರೆಸ್ ಅಧ್ಯಕ್ಷ ಪಟ್ಟಕ್ಕೆ ರಾಹುಲ್ ಗಾಂಧಿ ಹಿಂದೇಟು ಇದೇ ಕಾರಣಕ್ಕಾ?

|

2014ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ನೇತೃತ್ವದ ಎನ್ಡಿಎ ಮೈತ್ರಿಕೂಟದ ಪ್ರಧಾನಿ ಅಭ್ಯರ್ಥಿಯಾಗಿದ್ದ ನರೇಂದ್ರ ಮೋದಿ ವಾರಣಾಸಿ ಮತ್ತು ವಡೋದರ ಎರಡೂ ಕ್ಷೇತ್ರದಿಂದ ಸ್ಪರ್ಧಿಸಿ ಗೆದ್ದಿದ್ದರು. 2019ರ ಚುನಾವಣೆಯಲ್ಲಿ ವಾರಣಾಸಿಯನ್ನು ಮಾತ್ರ ಮೋದಿ ಆಯ್ಕೆಮಾಡಿಕೊಂಡರು ಮತ್ತು ಭಾರೀ ಮತಗಳ ಅಂತರದಿಂದ ಜಯಶೀಲರಾದರು.

ಇತ್ತ ಕಾಂಗ್ರೆಸ್ ಪಕ್ಷದ ಕಡೆಗೆ ತಿರುಗುವುದಾದರೆ, 2014ರ ಚುನಾವಣೆಯಲ್ಲಿ ಅಮೇಥಿಯಲ್ಲಿ ಮಾತ್ರ ಸ್ಪರ್ಧಿಸಿದ್ದ ರಾಹುಲ್ ಗಾಂಧಿ, ಈ ಬಾರಿ ಅಮೇಥಿ ಜೊತೆ ವಯನಾಡ್ ಕ್ಷೇತ್ರದಲ್ಲೂ ಸ್ಪರ್ಧಿಸಿದ್ದರು. ರಾಹುಲ್ ಕೇರಳದ ಕ್ಷೇತ್ರದಿಂದ ಮಾತ್ರ ಭಾರೀ ಅಂತರದಿಂದ ಗೆಲುವು ಸಾಧಿಸಿದರು.

ಎರಡು ಚುನಾವಣೆಯನ್ನು ಹೋಲಿಸುವುದಾದರೆ, ಅಂದು ಒಂದೇ ಕ್ಷೇತ್ರ ಸಾಕು ಎನ್ನುವ ವಿಶ್ವಾಸದಿಂದ ಇಲೆಕ್ಷನ್ ಎದುರಿಸಿದ್ದ ರಾಹುಲ್ ಗಾಂಧಿಗೆ, ಈ ಬಾರಿ ಸೋಲಿನ ಭೀತಿ ಕಾಡಿತು ಎನ್ನುವುದು ಅತ್ಯಂತ ಸ್ಪಷ್ಟ. ಅವರ ನಿರೀಕ್ಷೆ ಹುಸಿಯಾಗಲಿಲ್ಲ, ತಲತಲಾಂತರದ ತಮ್ಮ ಕರ್ಮಭೂಮಿ ಅಮೇಥಿಯಲ್ಲಿ ಸೋಲು ಅನುಭವಿಸಿದರು.

ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ 'ಬಂಗಲೆ' ಕಿತ್ತುಕೊಳ್ಳಲಿರುವ ಕೇಂದ್ರ ಸರ್ಕಾರ

ರಾಹುಲ್ ಗಾಂಧಿಗೆ ಇದ್ದ ಸೇಫೆಸ್ಟ್ ಕ್ಷೇತ್ರ ಕೇರಳದಲ್ಲಿ ಮಾತ್ರ ಎಂದೇ ವ್ಯಾಖ್ಯಾನಿಸಲಾಗುತ್ತಿತ್ತು ಮತ್ತು ಅದೇ ನಿಜವಾಯಿತು. ಚುನಾವಣೆಯ ಸೋಲಿನ ನಂತರ ರಾಹುಲ್ ಅಧ್ಯಕ್ಷ ಹುದ್ದೆಗೆ ರಾಜೀನಾಮೆ ನೀಡಲು ಮುಂದಾಗಿದ್ದದ್ದು ಗೊತ್ತೇ ಇದೆ. ಹಲವು ಒತ್ತಡದ ಹೊರತಾಗಿಯೂ, ರಾಹುಲ್ ಹುದ್ದೆಯಲ್ಲಿ ಮುಂದುವರಿಯಲು ಹಿಂದೇಟು ಹಾಕುತ್ತಲೇ ಇದ್ದಾರೆ.

ಅಮೇಥಿಯಲ್ಲಿನ ಸೋಲು ರಾಹುಲ್ ಗೆ ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ

ಅಮೇಥಿಯಲ್ಲಿನ ಸೋಲು ರಾಹುಲ್ ಗೆ ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ

ರಾಹುಲ್ ಗಾಂಧಿ ರಾಜೀನಾಮೆಯನ್ನು ಕಾಂಗ್ರೆಸ್ಸಿನವರು ಒಪ್ಪಿಕೊಳ್ಳುವುದಿಲ್ಲ ಎನ್ನುವುದು ಗೊತ್ತಿರುವ ವಿಚಾರ, ಅದರಂತೆಯೇ ನಡೆಯುತ್ತಿದೆ ಕೂಡಾ... ಆದರೆ, ರಾಹುಲ್ ಗಾಂಧಿ ತನ್ನ ನಿರ್ಧಾರದಿಂದ ಹಿಂದಕ್ಕೆ ಸರಿಯುತ್ತಿಲ್ಲ ಎನ್ನುವುದು ಕೂಡಾ ಅಷ್ಟೇ ಸತ್ಯ, ಕಾರಣ ಅಮೇಥಿಯಲ್ಲಿನ ಸೋಲು ಅವರಿಗೆ ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ.

ರಾಜ್ಯ ಕಾಂಗ್ರೆಸ್ ಸಹವಾಸ ಸಾಕು: ರಾಹುಲ್ ಗೆ ಮೊರೆಯಿಟ್ಟ ಕೆ ಸಿ ವೇಣುಗೋಪಾಲ್?

ತನ್ನ ಮತ್ತು ಕುಟುಂಬದ ರಾಜಕೀಯ ಕರ್ಮಭೂಮಿಯನ್ನು ಉಳಿಸಿಕೊಳ್ಳಲಾಗಲಿಲ್ಲ

ತನ್ನ ಮತ್ತು ಕುಟುಂಬದ ರಾಜಕೀಯ ಕರ್ಮಭೂಮಿಯನ್ನು ಉಳಿಸಿಕೊಳ್ಳಲಾಗಲಿಲ್ಲ

ತನ್ನ ಮತ್ತು ಕುಟುಂಬದ ರಾಜಕೀಯ ಕರ್ಮಭೂಮಿಯನ್ನು ಉಳಿಸಿಕೊಳ್ಳಲಾಗಲಿಲ್ಲ ಎನ್ನುವ ನೋವು ರಾಹುಲ್ ಗಾಂಧಿಗೆ ಕಾಡುತ್ತಿದೆ ಎನ್ನುವುದು ಅವರ ಪರಮಾಪ್ತ ವಲಯದಲ್ಲಿ ಕೇಳಿ ಬರುತ್ತಿರುವ ಮಾತು. ನೆಹರೂ- ಗಾಂಧಿ ಕುಟುಂಬಕ್ಕೆ ರಾಜಕೀಯ ಕೊಂಡಿಯಂತಿದ್ದ ಅಮೇಥಿಯಲ್ಲೇ ಸೋಲು ಎಂದರೆ ಎಂತಹ ಅವಮಾನ. ಕಾಂಗ್ರೆಸ್ ಅನ್ನು ಮತ್ತೆ ಅಧಿಕಾರಕ್ಕೆ ತರಲಾಗದಿದ್ದದ್ದು ನಂತರದ ಮಾತು, ತಾನೇ ಸೋತೆ ಎಂದರೆ ಆದು ಕೂಡಾ ಅಮೇಥಿಯಲ್ಲಿ!!

ಏನೇ ಮಾಡಿದರೂ, ಮಾಡದಿದ್ದರೂ ಜನತೆ ಕೈಬಿಡುವುದಿಲ್ಲ ಎನ್ನುವ ಅತಿಯಾದ ವಿಶ್ವಾಶ

ಏನೇ ಮಾಡಿದರೂ, ಮಾಡದಿದ್ದರೂ ಜನತೆ ಕೈಬಿಡುವುದಿಲ್ಲ ಎನ್ನುವ ಅತಿಯಾದ ವಿಶ್ವಾಶ

ಅಮೇಥಿಯಲ್ಲಿನ ಸೋಲಿಗೆ ಕಾರಣ ಯಾರು? ಏನೇ ಮಾಡಿದರೂ, ಮಾಡದಿದ್ದರೂ ತನ್ನನ್ನು ಅಲ್ಲಿನ ಜನತೆ ಕೈಬಿಡುವುದಿಲ್ಲ ಎನ್ನುವ ಅತಿಯಾದ ವಿಶ್ವಾಸವೇ ರಾಹುಲ್ ಗಾಂಧಿ ಸೋಲಿಗೆ ಕಾರಣವಾಯಿತೇ? ಬಿಜೆಪಿಯ ಅಭ್ಯರ್ಥಿ ಸ್ಮೃತಿ ಇರಾನಿ, 2014ರ ಚುನಾವಣೆಯಲ್ಲಿ ರಾಹುಲ್ ಎದುರು ಸೋತ ಕೂಡಲೇ, ಮುಂದಿನ ಚುನಾವಣೆಯನ್ನು ಗೆಲ್ಲಲೇಬೇಕೆಂದು ಅಂದಿನಿಂದಲೇ ಕ್ಷೇತ್ರದ ಮತದಾರರಿಗೆ ಹತ್ತಿರವಾದದ್ದು ರಾಹುಲ್ ಸೋಲಿಗೆ ಕಾರಣವಾಯಿತೇ?

ಅಮೇಥಿ ಸೋಲಿನ ಶಾಕ್ ನಿಂದ ರಾಹುಲ್ ಇನ್ನೂ ಹೊರಬಂದಿಲ್ಲ

ಅಮೇಥಿ ಸೋಲಿನ ಶಾಕ್ ನಿಂದ ರಾಹುಲ್ ಇನ್ನೂ ಹೊರಬಂದಿಲ್ಲ

ರಾಜಕೀಯದಲ್ಲಿ ಏರಿಳಿತ ಸಾಮಾನ್ಯ, ಆದರೆ ಸ್ಮೃತಿ ಇರಾನಿ ಎದುರು ಅಮೇಥಿ ಸೋಲಿನ ಶಾಕ್ ನಿಂದ ರಾಹುಲ್ ಇನ್ನೂ ಹೊರಬಂದಂತಿಲ್ಲ. ತನ್ನ ರಾಜೀನಾಮೆಯ ನಿರ್ಧಾರದಿಂದ ರಾಹುಲ್ ಹಿಂದಕ್ಕೆ ಸರಿಯುತ್ತಿಲ್ಲ. ನೆಹರೂ - ಗಾಂಧಿ ಕುಟುಂಬದ ಹೊರತಾಗಿ ಕಾಂಗ್ರೆಸ್ ಅಧ್ಯಕ್ಷಗಾದಿಗೆ ಯಾರು ಸೂಕ್ತ ಎನ್ನುವ ಮಾತು ಅಲ್ಲಲ್ಲಿ ಚರ್ಚೆಯ ವಿಷಯವಾಗಿದೆ.

ಕಾಂಗ್ರೆಸ್ ಮುಖಂಡರು ಕನಸು ಮನಸಿನಲ್ಲೂ ನೆನೆಸಿರಕ್ಕಿಲ್ಲ

ಕಾಂಗ್ರೆಸ್ ಮುಖಂಡರು ಕನಸು ಮನಸಿನಲ್ಲೂ ನೆನೆಸಿರಕ್ಕಿಲ್ಲ

ಈ ರೀತಿಯ ಪರಿಸ್ಥಿತಿಯನ್ನು ಎಐಸಿಸಿ ಅಧ್ಯಕ್ಷರೇ ಎದುರಿಸಬೇಕಾಗಿ ಬರಬಹುದು ಎಂದು ಕಾಂಗ್ರೆಸ್ ಮುಖಂಡರು ಕನಸು ಮನಸಿನಲ್ಲೂ ನೆನೆಸಿರಲಿಕ್ಕಿಲ್ಲ. ನೆಹರೂ - ಗಾಂಧಿ ಕುಟುಂಬದವರೇ ಅಧ್ಯಕ್ಷಗಾದಿಯಲ್ಲಿ ಬಹುತೇಕ ಇದ್ದಿದ್ದರಿಂದ, ರಾಹುಲ್ , ಸೋನಿಯಾ, ಪ್ರಿಯಾಂಕ ಹೊರತಾಗಿ ಯಾರನ್ನೂ ಕಾಂಗ್ರೆಸ್ ಮುಖಂಡರು ಊಹಿಸುತ್ತಲೂ ಇಲ್ಲ. ಹಾಗಾಗಿಯೇ, ರಾಹುಲ್ ಸೋಲು, ಅವರಂತೆ, ಅವರ ಪಕ್ಷದವರಿಗೂ ತೀವ್ರವಾಗಿ ಕಾಡುತ್ತಿದೆ.

English summary
Why Rahul Gandhi not agreeing to continue as Congress President even after lot of pressure from inside the party? The loss in Amethi made him so disturbed?
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more