ಪ್ರಧಾನಿ ನರೇಂದ್ರ ಮೋದಿ ಬಗ್ಗೆ ರಾಹುಲ್ ಗಾಂಧಿಗೆ ಕಾಡಿದ ಪ್ರಶ್ನೆ

ಭಾರತ ಮತ್ತು ಚೀನಾದ ನಡುವಿನ ಸಂಬಂಧ ದಿನದಿಂದಕ್ಕೆ ಹಳಸುತ್ತಲ್ಲೇ ಬರುತ್ತಿರುವ ಈ ವೇಳೆ, ಪ್ರಧಾನಿ ಮೋದಿ ಇಂತಹ ಗಂಭೀರ ವಿಚಾರದಲ್ಲಿ ಯಾಕೆ ಮೌನವಾಗಿದ್ದಾರೆಂದು ರಾಹುಲ್ ಪ್ರಶ್ನಿಸಿದ್ದಾರೆ.

ಪ್ರಧಾನಮಂತ್ರಿ ನರೇಂದ್ರ ಮೋದಿಯವರನ್ನು ಸಂಸತ್ತಿನ ಒಳಗೆ, ಹೊರಗೆ, ಪ್ರಶ್ನಿಸುತ್ತಾ.. ಟೀಕಿಸುತ್ತಾ ಬರುತ್ತಿರುವ ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿಯವರಿಗೆ, ಪ್ರಧಾನಿ ಮೋದಿ ಬಗ್ಗೆ ಇನ್ನೊಂದು ಸಂದೇಹ ಕಾಡಿದೆ.

ಸಿಕ್ಕಿಂ ಗಡಿ ವಿಚಾರದಲ್ಲಿ ಭಾರತ ಮತ್ತು ಚೀನಾದ ನಡುವಿನ ಸಂಬಂಧ ದಿನದಿಂದ ದಿನಕ್ಕೆ ಹಳಸುತ್ತಲ್ಲೇ ಬರುತ್ತಿರುವ ಈ ವೇಳೆ, ಪ್ರಧಾನಿ ಮೋದಿ ಇಂತಹ ಗಂಭೀರ ವಿಚಾರದಲ್ಲಿ ಯಾಕೆ ಮೌನವಾಗಿದ್ದಾರೆಂದು ರಾಹುಲ್ ಪ್ರಶ್ನಿಸಿದ್ದಾರೆ.

ತಮ್ಮ ಟ್ವಿಟ್ಟರ್ ಅಕೌಂಟಿನ ಮೂಲಕ 'Why is our Prime Minister silent on China?' ಎಂದು ರಾಹುಲ್ ಪ್ರಶ್ನಿಸಿದ್ದಾರೆ. ಭಾರತ ದುರ್ಭಲ ಪ್ರಧಾನಮಂತ್ರಿಯೊಬ್ಬರನ್ನು ಹೊಂದಿದೆ ಎಂದು ಕೆಲವು ದಿನಗಳ ಹಿಂದೆ ರಾಹುಲ್ ಟ್ವೀಟ್ ಮಾಡಿದ್ದರು.

ದೋಕ್ಲಾಂ ವಲಯದಲ್ಲಿ ಭಾರತ ತನ್ನ ಸೈನಿಕರನ್ನು ಹಿಂದಕ್ಕೆ ಪಡೆದ ನಂತರವೇ ಮುಂದಿನ ಮಾತುಕತೆ ಎಂದಿರುವ ಚೀನಾ, ಭಾರತ ಸರಕಾರ ಪರಿಸ್ಥಿಯನ್ನು ಸರಿಯಾಗಿ ನಿಭಾಯಿಸದೇ ಇದ್ದಲ್ಲಿ ನಮಗಿರುವ ಮುಂದಿನ ಆಯ್ಕೆಯೆಂದರೆ 'ಯುದ್ದ' ಎನ್ನುವ ಖಡಕ್ ಎಚ್ಚರಿಕೆಯನ್ನು ಚೀನಾ ನೀಡಿತ್ತು.

ಅತ್ತ, ಜರ್ಮನಿಯ ಹ್ಯಾಂಬರ್ಗಿನಲ್ಲಿ ನಡೆಯುತ್ತಿರುವ ಬ್ರಿಕ್ಸ್ ಸಮ್ಮೇಳನದಲ್ಲಿ ಪ್ರಧಾನಿ ಮೋದಿ ಮತ್ತು ಚೀನಾದ ಅಧ್ಯಕ್ಷರು, ತಮ್ಮ ತಮ್ಮ ಭಾಷಣಗಳಲ್ಲಿ ಒಬ್ಬರೊನ್ನಬ್ಬರು ಹೊಗಳುವ ಮೂಲಕ ಎಲ್ಲರೂ ಆಶ್ಚರ್ಯ ಪಡುವಂತೆ ಮಾಡಿದ್ದಾರೆ. ರಾಹುಲ್ ಟ್ವೀಟಿಗೆ ಬಂದಿರುವ ಕೆಲವೊಂದು ರಿಪ್ಲೈಗಳು, ಮುಂದೆ ಓದಿ..

ರಾಹುಲ್ ಟ್ವೀಟ್

ರಾಹುಲ್ ಟ್ವೀಟ್

ರಾಹುಲ್ ಗಾಂಧಿ ಟ್ವೀಟಿಗೆ ಬಂದಂತಹ ಕೆಲವೊಂದು ಟ್ವೀಟ್ ಉತ್ತರಗಳೆಂದರೆ, ನಿಮಗೆ ವಿಶ್ವದ ಮ್ಯಾಪ್ ನಲ್ಲಿ ಚೀನಾ ಎಲ್ಲಿದೆಯೆಂದು ಗೊತ್ತಿರಲಿಕ್ಕಿಲ್ಲ. ವಾಟ್ ಎ ಜೋಕ್ ಮುಂತಾದ ರಿಪ್ಲೈಗಳು ಬಂದಿವೆ.

ಮೋದಿ ವಿರುದ್ದ ಟ್ವೀಟಿಗೆ ಟ್ವಿಟ್ಟಿಗರ ಲೇವಡಿ

ಮೋದಿ ವಿರುದ್ದ ಟ್ವೀಟಿಗೆ ಟ್ವಿಟ್ಟಿಗರ ಲೇವಡಿ

ಅವಾಗಾವಾಗ ವಿದೇಶಕ್ಕೆ ತೆರಳುವುದು, ಸಂಸತ್ತಿನ ಕಲಾಪದ ವೇಳೆ ಸಣ್ಣನಿದ್ದೆಗೆ ಜಾರುವುದು, ಸುಗ್ರೀವಾಜ್ಞೆಯನ್ನು ಹರಿದುಹಾಕುವ ಮೂಲಕ ಸಂವಿಧಾನಕ್ಕೆ ಅಗೌರವ ತೋರುವ ವ್ಯಕ್ತಿಯಿಂದ ಭಾರತದ ವಿದೇಶಾಂಗ ನೀತಿಯ ಬಗ್ಗೆ ಹೇಳಿಕೆ ಎಂದು ಟ್ವಿಟ್ಟಿಗರೊಬ್ಬರು ರಾಹುಲ್ ಗಾಂಧಿಗೆ ಲೇವಡಿ ಮಾಡಿದ್ದಾರೆ.

ಚೀನಾ ಕಂಪೆನಿಗೆ ಮಾಡೆಲ್

ಚೀನಾ ಕಂಪೆನಿಗೆ ಮಾಡೆಲ್

ಭಾರತ, ಚೀನಾದ ವಿರುದ್ದ ಏನು ಕಾರ್ಯತಂತ್ರ ರೂಪಿಸುತ್ತಿದೆ ಎನ್ನುವುದನ್ನು ಬಹಿರಂಗವಾಗಿ ಹೇಳಲು ಸಾಧ್ಯವಿಲ್ಲ. ಭಾರತ ಈಗಾಗಲೇ ಬಿಟ್ಟುಕೊಟ್ಟಿದೆ, ಪ್ರಧಾನಿ ಮೋದಿ ಚೀನಾದ ಪೇಟಿಎಂ ಸಂಸ್ಥೆಯ ಜಾಹೀರಾತಿಗೆ ಮೊಡೆಲ್ ಆಗಿ ಕೆಲಸ ಮಾಡುತ್ತಿದ್ದಾರೆ ಎನ್ನುವ ಟ್ವೀಟ್.

ಕೆಲವೊಂದು ಟ್ವೀಟ್ ಸ್ಯಾಂಪಲ್ ಗಳು

ಕೆಲವೊಂದು ಟ್ವೀಟ್ ಸ್ಯಾಂಪಲ್ ಗಳು

ಮೋದಿಯವರ ಕಣ್ಣು ಇನ್ನೂ ಕೆಂಗಣ್ಣಾಗಿಲ್ಲ, ಅದು ಆದಾಗ ಚೀನಾಗೆ ಸರಿಯಾದ ಪಾಠ ಕಲಿಸಲಿದ್ದಾರೆ. ರಾಹುಲ್ ಗಾಂಧಿ ಬರಬರುತ್ತಾ ಅರವಿಂದ್ ಕೇಜ್ರಿವಾಲ್ ಆಗುತ್ತಿದ್ದಾರೆಯೇ? ಮೋದಿ ದುರ್ಭಲ ಪ್ರಧಾನಿ, ಅವರಿಂದ ಏನೂ ನಿರೀಕ್ಷಿಸಲು ಸಾಧ್ಯವಿಲ್ಲ ಎನ್ನುವ ಟ್ವೀಟುಗಳು.

ಮೋದಿಗೆ ಪ್ರೀತಿ ಜಾಸ್ತಿ

ಮೋದಿಗೆ ಪ್ರೀತಿ ಜಾಸ್ತಿ

ಹೋಗಿ ಮೋದಿಯ ಭಾಷಣವನ್ನು ಕೇಳಿ, ಅಂತರಾಷ್ಟ್ರೀಯ ಮಟ್ಟದಲ್ಲಿ ತಮ್ಮ ಭಾಷಣದಲ್ಲಿ ಹೇಗೆ ನಮ್ಮ ದೇಶವನ್ನು ವ್ಯಂಗ್ಯವಾಡುತ್ತಿದ್ದಾರೆ ನೋಡಿ ಎನ್ನುವ ಟ್ವೀಟ್. ಚೀನಾ ತಮ್ಮ ದೇಶವನ್ನು 'ಚಾಯ್ ನಾ' ಎಂದು ಹೇಳುತ್ತಲ್ಲಾ, ಅದಕ್ಕೆ ಮೋದಿಗೆ ಅವರ ಮೇಲೆ ಪ್ರೀತಿ ಜಾಸ್ತಿ ಎನ್ನುವ ಟ್ವೀಟ್.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+