Vande Bharat Train: ಕಾರ್‌ಗಳಂತೆ ರೈಲುಗಳಲ್ಲಿ ಸೀಟ್ ಬೆಲ್ಟ್ ಯಾಕಿಲ್ಲ? ಕಾರಣ ಏನು ಎಂದು ತಿಳಿಯಿರಿ
ಕಾರಿನಲ್ಲಿ ಪ್ರಯಾಣಿಸುವವರಿಗೆ 2 ಪಾಯಿಂಟ್ ಅಥವಾ 3 ಪಾಯಿಂಟ್ ಸೀಟ್ ಬೆಲ್ಟ್ ನೀಡಲಾಗುತ್ತದೆ. ಆದರೆ ರೈಲಿನಲ್ಲಿ ಪ್ರತಿದಿನ ಲಕ್ಷಾಂತರ, ಕೋಟಿ ಜನರು ಪ್ರಯಾಣಿಸುತ್ತಾರೆ. ಎಲ್ಲಕ್ಕಿಂತ ಹೆಚ್ಚಾಗಿ ರೈಲಿನ ಸರಾಸರಿ ವೇಗವು ಸಾಮಾನ್ಯವಾಗಿ ಕಾರಿಗಿಂತ ಹೆಚ್ಚು. ಇಷ್ಟಾಗಿಯೂ ರೈಲುಗಳಲ್ಲಿ ಸೀಟ್‌ಬೆಲ್ಟ್ ಏಕೆ ಇಲ್ಲ? ಇದಕ್ಕೆ ಉತ್ತರ ಇಲ್ಲಿದೆ.
ರೈಲುಗಳಲ್ಲಿ ಸೀಟ್‌ಬೆಲ್ಟ್ ಏಕೆ ನೀಡುವುದಿಲ್ಲ ಎಂದು ನೀವು ಎಂದಾದರೂ ಯೋಚಿಸಿದ್ದೀರಾ? ಈ ಪ್ರಶ್ನೆಗೆ ಉತ್ತರವನ್ನು ಹುಡುಕುತ್ತಿರುವ ನಮ್ಮಂತಹ ಜನರಲ್ಲಿ ನೀವು ಸಹ ಒಬ್ಬರಾಗಿದ್ದರೆ, ನಾವು ನಿಮಗಾಗಿ ಈ ಪ್ರಶ್ನೆಗೆ ಉತ್ತರವನ್ನು ತಂದಿದ್ದೇವೆ. ಅದರ ಬಗ್ಗೆ ವಿವರವಾಗಿ ತಿಳಿದುಕೊಳ್ಳೋಣ.

ಪ್ರಯಾಣಿಕರ ಸುರಕ್ಷತೆಗಾಗಿ ಸೀಟ್ ಬೆಲ್ಟ್ ಹಾಕಲಾಗಿದ್ದು, ಕಾರುಗಳಲ್ಲಿಯೂ ಸೀಟ್ ಬೆಲ್ಟ್ ಕಡ್ಡಾಯಗೊಳಿಸಲಾಗಿದೆ. ಇತ್ತೀಚಿನ ದಿನಗಳಲ್ಲಿ ಕಾರುಗಳಲ್ಲಿ ಹಾಗೂ ವಿಮಾನಗಳಲ್ಲಿ, ದುಬಾರಿ ಟ್ರಕ್‌ಗಳಲ್ಲೂ ಸೀಟ್‌ಬೆಲ್ಟ್‌ಗಳನ್ನು ನೀಡಲಾಗುತ್ತದೆ. ಆದರೆ ರೈಲುಗಳಲ್ಲಿ ಸೀಟ್‌ಬೆಲ್ಟ್‌ಗಳನ್ನು ಏಕೆ ನೀಡುವುದಿಲ್ಲ ಎಂಬುದು ವಿಚಿತ್ರ. ಆದರೆ ಇದು ಮಾನ್ಯ ಪ್ರಶ್ನೆಯಾಗಿದೆ. ವಂದೇ ಭಾರತ್‌ನಂತಹ ದೇಶದ ಆಧುನಿಕ ರೈಲುಗಳಲ್ಲಿಯೂ ಸೀಟ್‌ಬೆಲ್ಟ್‌ಗಳು ಎಲ್ಲಿಯೂ ಕಾಣಿಸುವುದಿಲ್ಲ. ಸೀಟ್ ಬೆಲ್ಟ್ ಕೊಡದಿದ್ದರೆ ರೈಲು ಪ್ರಯಾಣ ಸುರಕ್ಷಿತ ಎಂದು ಭಾವಿಸಬೇಡಿ. ಇತರ ಯಾವುದೇ ವಾಹನಗಳಂತೆ ರೈಲು ಪ್ರಯಾಣದ ಸಮಯದಲ್ಲಿಯೂ ಅಪಾಯವಿದೆ.
ಭಾರತದಲ್ಲಿ ಪ್ರತಿದಿನ ರೈಲು ಅಪಘಾತಗಳು ನಡೆಯುತ್ತಲೇ ಇರುತ್ತವೆ. ವಂದೇ ಭಾರತ್ ರೈಲು ಕೂಡ ಕೆಲ ದಿನಗಳ ಹೀಮದೆ ಟ್ರ್ಯಾಕ್‌ನಲ್ಲಿ ಹಸುವಿಗೆ ಡಿಕ್ಕಿ ಹೊಡೆದಿತ್ತು. ಭಾರತದಲ್ಲಿ ಪ್ರತಿದಿನ, ರೈಲುಗಳು ಹಳಿಯನ್ನು ತಪ್ಪುವುದು ಅಥವಾ ಘರ್ಷಣೆಯ ಅಪಾಯಕ್ಕೆ ಸಿಲುಕಿಕೊಳ್ಳುತ್ತವೆ. ಈ ವೇಳೆ ರೈಲು ಅಪಘಾತವು ಅಪಾರ ಪ್ರಮಾಣದ ಜೀವ ಮತ್ತು ಆಸ್ತಿ ನಷ್ಟವನ್ನು ಉಂಟುಮಾಡುತ್ತದೆ. ರೈಲು ಅಪಘಾತದ ಪರಿಸ್ಥಿತಿ ಭಾರತದಲ್ಲಿ ಮಾತ್ರ ಇಲ್ಲ, ಈ ಸಮಸ್ಯೆ ಪ್ರಪಂಚದಾದ್ಯಂತ ಹರಡಿದೆ. ಆದರೆ ರೈಲಿನಲ್ಲಿ ಸೀಟ್ ಬೆಲ್ಟ್ ಸೌಲಭ್ಯವು ಯಾವುದೇ ದೇಶದಲ್ಲಿ ಲಭ್ಯವಿಲ್ಲ.
ನಮ್ಮಲ್ಲಿ ಅನೇಕರು ವಿವಿಧ ಕಾರಣಗಳಿಗಾಗಿ ರೈಲಿನಲ್ಲಿ ಪ್ರಯಾಣಿಸುತ್ತಾರೆ. ಇದಕ್ಕೆ ಒಂದು ಪ್ರಮುಖ ಕಾರಣವೆಂದರೆ ದೀರ್ಘ ಪ್ರಯಾಣವನ್ನು ರೈಲಿನಲ್ಲಿ ಮಾಡುವುದು. ರೈಲಿನಲ್ಲಿ ಧೀರ್ಘ ಕಾಲದವರೆಗೆ ಪ್ರಯಾಣ ಮಾಡುವುದರಿಂದ ಸೀಟ್ ಬೆಲ್ಟ್ ದೊಡ್ಡ ಅಡಚಣೆಯಾಗಬಹುದು. ಕೆಲವು ರೈಲುಗಳಲ್ಲಿ ಮಲಗುವ ಸೌಲಭ್ಯವೂ ಇದೆ. ಹೀಗಾಗಿ ಸೀಟ್ಬೆಲ್ಟ್ ದೊಡ್ಡ ಸಮಸ್ಯೆಯಾಗಬಹುದು.

ರೈಲು ಪ್ರಯಾಣ ಸ್ವಾತಂತ್ರ್ಯಕ್ಕೆ ಹೆಸರುವಾಸಿಯಾಗಿದೆ. ಮತ್ತೊಂದೆಡೆ, ದೂರದ ಪ್ರಯಾಣದಲ್ಲಿ ಸೀಟ್ ಬೆಲ್ಟ್ ಅನ್ನು ಕಡ್ಡಾಯಗೊಳಿಸಿದರೆ, ನಂತರ ಸೀಟಿನಿಂದ ಎದ್ದು ಎಲ್ಲೋ ನಡೆಯಲು ಸ್ವಾತಂತ್ರ್ಯ ಹೋಗುತ್ತದೆ. ಇದು ತೊಂದರೆಗೆ ಕಾರಣವಾಗಬಹುದು. ಇದರಿಂದಾಗಿ ರೈಲಿನಲ್ಲಿ ಸೀಟ್ ಬೆಲ್ಟ್ ಹಾಕಿಲ್ಲ. ರೈಲು ಎಷ್ಟೇ ವೇಗವಾಗಿ ಚಲಿಸಿದರೂ ಅದರಲ್ಲಿ ಚಲಿಸುವುದು ತುಂಬಾ ಸುಲಭ.
ಅನೇಕ ದೇಶಗಳು ರೈಲಿನಲ್ಲಿ ಸೀಟ್ ಬೆಲ್ಟ್ ನೀಡಲು ಪ್ರಯತ್ನಿಸಿದರೂ, 100 ರಲ್ಲಿ 26 ಜನರು ಮಾತ್ರ ಸೀಟ್ ಬೆಲ್ಟ್ ಬಳಸುತ್ತಿದ್ದಾರೆ. ರೈಲು ಪ್ರಯಾಣದ ವೇಳೆ ಅನೇಕರು ಸೀಟ್ ಬೆಲ್ಟ್ ಬಳಸುವುದಿಲ್ಲ. ರೈಲಿನಲ್ಲಿ ಸೀಟ್ ಬೆಲ್ಟ್ ಬದಲಿಗೆ ಉತ್ತಮ ಸೀಟ್ ಅಳವಡಿಸಿ ರೈಲು ಪ್ರಯಾಣವನ್ನು ಇನ್ನಷ್ಟು ಸುರಕ್ಷಿತವಾಗಿಸಬಹುದು.












Click it and Unblock the Notifications