ಅವೆಂಜರ್ಸ್ ಎಂಡ್ ಗೇಮ್‌ಗಿಂತಲೂ ಚಂದ್ರಯಾನ ಅಗ್ಗ ಹೇಗೆ?
ಬೆಂಗಳೂರು, ಜುಲೈ 24: ಹಾಲಿವುಡ್‌ನ ಸೂಪರ್ ಹಿಟ್ ಚಿತ್ರ ಅವೆಂಜರ್ಸ್ ಎಂಡ್ ಗೇಮ್ ಚಿತ್ರ ನಿರ್ಮಾಣ ವೆಚ್ಚಕ್ಕಿಂತ ಚಂದ್ರಯಾನ 2 ಯೋಜನೆಗೆ ಕಡಿಮೆ ಹಣ ಬಳಕೆಯಾಗಿದೆ.
ಚಂದ್ರಯಾನ 2ಗೆ 124 ಮಿಲಿಯನ್ ಡಾಲರ್ (978 ಕೋಟಿ) ಹಣ ವ್ಯಯವಾಗಿದ್ದರೆ, ಅವೆಂಜರ್ಸ್ ಎಂಡ್ ಗೇಮ್‌ಗೆ ಇದರ ಮೂರು ಪಟ್ಟು ಎಂದರೆ 356 ಮಿಲಿಯನ್ ಡಾಲರ್ ಹಣ ವ್ಯಯಿಸಲಾಗಿದೆ.
ನಾಸಾ ಸೇರಿ ವಿಶ್ವದ ಪ್ರಮುಖ ಬಾಹ್ಯಾಕಾಶ ಸಂಸ್ಥೆಗಳಿಗೂ ಇದು ಆಶ್ಚರ್ಯ ಮೂಡಿಸಿದೆ. ಮಂಗಳಯಾನ ಸಂದರ್ಭದಲ್ಲಿಯೂ ಇದೇ ರೀತಿಯ ಕೌತುಕವು ವಿಶ್ವದ ಬಾಹ್ಯಾಕಾಶ ವಿಜ್ಞಾನಿಗಳಿಗೆ ಆರಂಭವಾಗಿತ್ತು.

ಇಸ್ರೋ ವಿಜ್ಞಾನಿಗಳ ಪ್ರಕಾರ ಚಂದ್ರಯಾನ 2ಕ್ಕೆ ಸಂಪೂರ್ಣ ದೇಶೀಯ ತಂತ್ರಜ್ಞಾನವನ್ನೇ ಬಳಸಿರುವುದು ಮೂಲ ಕಾರಣವಾಗಿದೆ. ಚಂದ್ರಯಾನ 2ಕ್ಕೆ ತಾಂತ್ರಿಕ ನೆರವು ನೀಡಲು ರಷ್ಯಾದೊಂದಿಗೆ ತಾಂತ್ರಿಕ ನೆರವು ಪಡೆಯಲು ಒಪ್ಪಂದ ಮಾಡಿಕೊಳ್ಳಲಾಗಿತ್ತು.
ಆದರೆ ಕೊನೆಯ ಕ್ಷಣದಲ್ಲಿ ಗೊಂದಲಮಯವಾದ ಹಿನ್ನೆಲೆಯಲ್ಲಿ ಇಸ್ರೋದ ವಿಜ್ಞಾನಿಗಳ ಮೇಲೆ ಚಂದ್ರಯಾನದ ಎಲ್ಲಾ ಉಪಕರಣಗಳ ಹೊಣೆಗಾರಿಕೆ ಬಿತ್ತು, ಅನಂತರದಲ್ಲಿ ಭಾರತದ ಕಂಪನಿಗಳ ಮೂಲಕವೇ ಚಂದ್ರಯಾನ 2ರ ವಿವಿಧ ಉಪಕರಣಗಳಿಗೆ ಬೇಕಾದ ಯಂತ್ರಗಳನ್ನು ಇಸ್ರೋ ಖರೀಧಿಸಿತ್ತು,
ಬಳಿಕ ಅಭಿವೃದ್ಧಿಪಡಿಸಲು ಆರಂಭಿಸಿತ್ತು. ಇನ್ನೂ ಸಾಕಷ್ಟು ಉಪಕರಣಗಳನ್ನು ಇಸ್ರೋ ವಿಜ್ಞಾನಿಗಳೇ ಅಭಿವೃದ್ಧಿ ಪಡಿಸಿದ್ದರು. ಅಮೆರಿಕದ ನಾಸಾ ಸೇರಿ ಇತರೆ ವಿದೇಶಿ ಬಾಹ್ಯಾಕಾಶ ಸಂಸ್ಥೆಯ ರೀತಿ ಭಾರತವು ವೈಜ್ಞಾನಿಕ ಪ್ರಯೋಗಗಳ ಮೇಲೆ ದುಬಾರಿ ವೆಚ್ಚ ಮಾಡಲು ಸಾಧ್ಯವಿಲ್ಲ ಎನ್ನುವುದು ಇಸ್ರೋಗು ತಿಳಿದಿತ್ತು.
ಇದೇ ಕಾರಣಕ್ಕೆ ಭಾರತದಲ್ಲಿನ ಸಣ್ಣ ಉದ್ಯಮಿಗಳೊಂದಿಗೆ ಒಪ್ಪಂದ ಮಾಡಿಕೊಂಡು ಜಿಎಸ್‌ಎಲ್‌ವಿ ಮಾಕ್ 3 ಆರ್ಬಿಟರ್ ಲ್ಯಾಂಡರ್ ವಿಕ್ಂ, ರೋವರ್ ಪ್ರಾಜ್ಞಾನ್ ನಿರ್ಮಾಣಕ್ಕೆ ಮುಂದಾಗಲಾಯಿತು.
ಇದರಲ್ಲಿ 603 ಕೋಟಿ ರೂಗಳನ್ನು ಸಂಪೂರ್ಣ ಚಂದ್ರಯಾನ 2 ಗೆ ಸಂಬಂಧಿಸಿದ ಉಪಕರಣಗಳ ನಿರ್ಮಾಣ ಬಳಕೆ ಮಾಡಲಾಗಿದೆ.
ಇಸ್ರೋ ಅಧ್ಯಕ್ಷ ಕೆ ಶಿವನ್ ಪ್ರಕಾರ ಇದಕ್ಕೆ ವೆಚ್ಚ ಮಾಡಿದ್ದ 603 ಕೋಟಿ ರೂ ಗಳನ್ನು ಶೇ. 60 ಭಾಗ ಭಾರತೀಯ ಸಣ್ಣ ಪುಟ್ಟ ಕಂಪನಿಗಳಿಗೆ ಹೋದರೆ ಉಳಿದ ಶೇ. 40 ಭಾಗ ವಿಶ್ವವಿದ್ಯಾಲಯಗಳಿಗೆ ತಲುಪಿದೆ.
ಚಂದ್ರಯಾನ 2 ಎಂಬ ಭಾರತದ ಹೆಮ್ಮೆಯ ಯೋಜನೆಯಲ್ಲಿ 620 ಸಂಸ್ಥೆಗಳು ಕೈ ಜೋಡಿಸಿದ್ದವು. ಇದರಲ್ಲಿ 500 ವಿಶ್ವವಿದ್ಯಾಲಯ ಹಾಗೂ 50 ಕಂಪನಿಗಳಾಗಿವೆ.












Click it and Unblock the Notifications