Bank: ಬ್ಯಾಂಕ್ ಖಾತೆ ನಿಷ್ಕ್ರಿಯವಾದ್ರೆ ಕಂಡು ಹಿಡಿಯುವುದು ಹೇಗೆ? ರಿ ಆಕ್ಟಿವೇಟ್‌ಗೆ ಏನು ಮಾಡಬೇಕು?

ಕೆಲವರಲ್ಲಿ ಒಂದಕ್ಕಿಂತ ಹೆಚ್ಚು ಬ್ಯಾಂಕ್‌ ಅಕೌಂಟ್‌ಗಳು ಇರುತ್ತವೆ. ಹೀಗಾಗುವಾಗ ಒಂದು ಅಕೌಂಟ್‌ ಅನ್ನು ಬಳಸದೇ ಹಾಗೆಯೇ ಬಿಟ್ಟಿರಬಹುದು. ಯಾವುದಾದರೂ ಬ್ಯಾಂಕ್‌ ಅಕೌಂಟನ್ನು ಬಳಸದೇ ಹಾಗೆಯೇ ಬಿಟ್ಟಿದ್ದರೆ ಅದರ ಸ್ಥಿತಿಯನ್ನು ಪರಿಶೀಲಿಸುವುದು ಬಹಳ ಮುಖ್ಯವಾಗಿರುತ್ತದೆ. ಭಾರತೀಯ ರಿಸರ್ವ್ ಬ್ಯಾಂಕ್ (RBI) ಕೂಡಾ ನಿಯಮಿತವಾಗಿ ಬ್ಯಾಂಕ್ ಖಾತೆದಾರರಿಗೆ ಟೆಕ್ಸ್ಟ್‌ ಮೆಸೇಜ್‌, ಇಮೇಲ್‌ಗಳು ಮತ್ತು ಅಧಿಕೃತ ಪತ್ರಿಕಾ ಪ್ರಕಟಣೆಗಳ ಮೂಲಕ ಅವರ ಬಳಕೆಯಾಗದೆ ಇರುವ ಬ್ಯಾಂಕ್ ಖಾತೆಗಳನ್ನು ಮೇಲ್ವಿಚಾರಣೆ ಮಾಡಲು ಮತ್ತು ಅದು ಆಕ್ಟಿವ್‌ ಆಗಿದೆಯೇ ಎನ್ನುವುದನ್ನು ಚೆಕ್‌ ಮಾಡುವಂತೆ ಸಲಹೆ ನೀಡುತ್ತಾ ಇರುತ್ತದೆ.

ಆರ್‌ಬಿಐ ನಿಯಮಗಳ ಪ್ರಕಾರ, ಬ್ಯಾಂಕ್ ಖಾತೆದಾರರು 2 ವರ್ಷಗಳಿಗಿಂತ ಹೆಚ್ಚು ಕಾಲ ಯಾವುದೇ ವಹಿವಾಟು ನಡೆಸದಿದ್ದರೆ ಬ್ಯಾಂಕ್ ಖಾತೆ ನಿಷ್ಕ್ರಿಯವಾಗುತ್ತದೆ. ಆರ್ಥಿಕ ಸ್ಥಿರತೆ ಮತ್ತು ಖಾತೆ ಭದ್ರತೆಯನ್ನು ಖಚಿತಪಡಿಸಿಕೊಳ್ಳಲು ಬ್ಯಾಂಕುಗಳು ಈ ಕ್ರಮವನ್ನು ಅನುಸರಿಸುತ್ತದೆ.

Bank Account 1

ಒಂದು ವೇಳೆ ನಿಮ್ಮ ಖಾತೆ ಕೂಡಾ ನಿಷ್ಕ್ರಿಯವಾಗಿದ್ದರೆ ನಿಮ್ಮ ಖಾತೆಯನ್ನು ಪುನಃ ಸಕ್ರಿಯಗೊಳಿಸಲು ಮತ್ತು ಸಾಮಾನ್ಯ ಬಳಕೆಯನ್ನು ಪುನರಾರಂಭಿಸಲು ಅಗತ್ಯವಿರುವ KYC ಮತ್ತು ದಾಖಲೆ ಸಲ್ಲಿಕೆಯನ್ನು ಪೂರ್ಣಗೊಳಿಸಲು ನೀವು ಬ್ಯಾಂಕ್ ಅನ್ನು ಸಂಪರ್ಕಿಸಬಹುದು.

ನಿಮ್ಮ ಬ್ಯಾಂಕ್ ಖಾತೆ ನಿಷ್ಕ್ರಿಯವಾದಾಗ ಏನಾಗುತ್ತದೆ?

ಇಲ್ಲಿ ಗಮನಿಸಬೇಕಾದ ಮೊದಲ ಅಂಶವೆಂದರೆ, ನಿಷ್ಕ್ರಿಯ ಖಾತೆ ಎಂದರೆ ಅದರಲ್ಲಿರುವ ಹಣ ಎಲ್ಲಿಗೂ ಹೋಗುವುದಿಲ್ಲ. ಬ್ಯಾಂಕ್‌ ಆ ಹಣವನ್ನು ತನ್ನದಾಗಿಸುವುದೂ ಇಲ್ಲ. ಆದರೆ, ಅಂತಹ ಖಾತೆಗಳಲ್ಲಿನ ಹಣವನ್ನು ಖಾತೆದಾರರು ತಕ್ಷಣವೇ ಹಿಂಪಡೆಯಲು ಅಥವಾ ಬಳಸಲು ಸಾಧ್ಯವಾಗುವುದಿಲ್ಲ. ಯಾಕೆಂದರೆ ಅವರು ಖಾತೆಯನ್ನು ಮತ್ತೆ ಮುಕ್ತವಾಗಿ ಬಳಸುವ ಮೊದಲು ಬ್ಯಾಂಕಿನ ರಿ ಅಕ್ಟಿವೇಶನ್‌ ಸರ್ವಿಸ್‌ ಅನ್ನು ಪೂರ್ಣಗೊಳಿಸಬೇಕಾಗಬಹುದು.

ಅಂತಹ ಸನ್ನಿವೇಶದಲ್ಲಿ, ಬ್ಯಾಂಕ್ ಖಾತೆದಾರರು ತಮ್ಮ ಬ್ಯಾಂಕಿಂಗ್ ಸಂಸ್ಥೆಯನ್ನು ಸಂಪರ್ಕಿಸಿ ತಮ್ಮ KYC ಅನ್ನು ಅಪ್‌ಡೇಟ್‌ ಮಾಡಬೇಕಾಗುತ್ತದೆ. ಬ್ಯಾಂಕಿನ ನಿಯಮಗಳು ಮತ್ತು ನಿಬಂಧನೆಗಳಿಗೆ ಅನುಸಾರವಾಗಿ, ಯಾವುದೇ ಬ್ಯಾಂಕ್ ಶಾಖೆಯಲ್ಲಿ ಅಥವಾ ವೀಡಿಯೊ KYC ಸೌಲಭ್ಯದ ಮೂಲಕ ಡೇಟಾ ಮತ್ತು KYC ವಿವರಗಳನ್ನು ಅಪ್ಡೇಟ್‌ ಮಾಡಬಹುದು.

ಆರ್‌ಬಿಐ ಹೊಸ ಕೆವೈಸಿ - ಆಧಾರ್, ಪ್ಯಾನ್ ಮತ್ತು ವಿಳಾಸ ಪುರಾವೆ - ಮೂಲಕ ರಿ ಅಕ್ಟಿವೇಶನ್‌ ಪ್ರಕ್ರಿಯೆಯನ್ನು ಕಡ್ಡಾಯಗೊಳಿಸುತ್ತದೆ. ಸಾಮಾನ್ಯವಾಗಿ ಶಾಖೆಯಲ್ಲಿ, ನಿಷ್ಕ್ರಿಯ ಖಾತೆಗಳು ಆನ್‌ಲೈನ್ ಚಾನೆಲ್‌ಗಳನ್ನು ಬಳಸುವ ಹಾಗಿಲ್ಲ. ಇದನ್ನು ಹಾಗೆಯೇ ಬಿಟ್ಟರೆ ಅಂತಹ ಖಾತೆಗಳು ಹಣದ ಜಾಲಗಳು ಮತ್ತು ವಂಚನೆಗೆ ಸುಲಭವಾಗಿ ಗುರಿಯಾಗುತ್ತವೆ. ಶಾಖೆಗೆ ಭೇಟಿ ನೀಡಿಯೇ ರಿ ಆಕ್ಟಿವೇಶನ್‌ ಮಾಡಿಸುವ ಬದಲು ವೀಡಿಯೊ-ಕೆವೈಸಿ ಅಥವಾ ಅಪ್ಲಿಕೇಶನ್ ಆಧಾರಿತ ಮರುಸಕ್ರಿಯಗೊಳಿಸುವಿಕೆಗೆ ಆರ್‌ಬಿಐ ಅನುಮತಿ ನೀಡಬಹುದು.

ನಿಮ್ಮ ಬಳಿ ಕೂಡಾ ಬಳಸದ ಯಾವುದೇ ಹಳೆಯ ಸೇವಿಂಗ್‌ ಅಕೌಂಟ್‌ ಸ್ಯಾಲರಿ ಅಕೌಂಟ್‌ ಅಥವಾ ಇತರ ಬ್ಯಾಂಕ್ ಖಾತೆಗಳಿದ್ದರೆ ಅದನ್ನು ತಕ್ಷಣ ಗುರುತಿಸಬೇಕು. ಆ ಅಕೌಂಟ್‌ಗಳು ಇನ್ನೂ ಸಕ್ರಿಯವಾಗಿವೆಯೇ ಎನ್ನುವುದನ್ನು ಎಚ್ಚರಿಕೆಯಿಂದ ಪರಿಶೀಲಿಸಬೇಕು.

ಹಳೆಯ ಬ್ಯಾಂಕ್ ಖಾತೆಗಳನ್ನು ಏಕೆ ಟ್ರ್ಯಾಕ್ ಮಾಡಬೇಕು?

ಬ್ಯಾಂಕ್ ಖಾತೆದಾರರು ತಮ್ಮ ಖಾತೆಯನ್ನು ನಿರಂತರವಾಗಿ ಮೇಲ್ವಿಚಾರಣೆ ಮಾಡಿದಾಗ, ಅದು ಅವರ KYC ವಿವರಗಳು, ಫೋನ್ ಸಂಖ್ಯೆಗಳು ಮತ್ತು ಸಂಪರ್ಕ ಇಮೇಲ್ ಐಡಿಗಳನ್ನು ಅಪ್‌ಡೇಟ್‌ ಮಾಡುವ ಮೂಲಕ ಯಾವುದೇ ಅಸಾಮಾನ್ಯ ಚಟುವಟಿಕೆಯನ್ನು ಗುರುತಿಸಲು ಸಹಾಯ ಮಾಡುತ್ತದೆ..

ಹಳೆಯ ಖಾತೆಯನ್ನು ಆಕ್ಟಿವೇಟ್‌ ಮಾಡುವ ಬಗ್ಗೆ ಖಾತೆದಾರರು ಎಚ್ಚರಿಕೆಯ ಹೆಜ್ಜೆ ಇಡಬೇಕು. ಯಾವುದೇ ಥರ್ಡ್‌ ಪಾರ್ಟಿ ಅಥವಾ ವ್ಯಕ್ತಿಯೊಂದಿಗೆ OTP ಗಳು, ATM ಪಿನ್‌ಗಳು, ಇಂಟರ್ನೆಟ್ ಬ್ಯಾಂಕಿಂಗ್ ಪಾಸ್‌ವರ್ಡ್‌ಗಳು, ಡೆಬಿಟ್/ ಕ್ರೆಡಿಟ್ ಕಾರ್ಡ್ ಪಿನ್‌ಗಳು ಅಥವಾ ಇತರ ಗೌಪ್ಯ ಮಾಹಿತಿಯನ್ನು ಎಂದಿಗೂ ಶೇರ್‌ ಮಾಡಿಕೊಳ್ಳಬೇಡಿ.

ನಿಮ್ಮ ಬ್ಯಾಂಕ್ ಖಾತೆಯನ್ನು ಪುನಃ ಸಕ್ರಿಯಗೊಳಿಸಲು ಹಂತ-ಹಂತದ ಪ್ರಕ್ರಿಯೆ

1.ನಿಮ್ಮ ಹತ್ತಿರದ ಬ್ಯಾಂಕ್ ಶಾಖೆಗೆ ಖುದ್ದಾಗಿ ಭೇಟಿ ನೀಡಿ.

2.ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಮಾತನಾಡಿ..

3.ಖಾತೆಯನ್ನು ಪುನಃ ಸಕ್ರಿಯಗೊಳಿಸುವ ಸಂಪೂರ್ಣ ಪ್ರಕ್ರಿಯೆಯನ್ನು ಸ್ಪಷ್ಟವಾಗಿ ಅರ್ಥಮಾಡಿಕೊಳ್ಳಿ,

4.ಪ್ರಕ್ರಿಯೆಯನ್ನು ಸರಾಗವಾಗಿ ಪೂರ್ಣಗೊಳಿಸಲು ಅಗತ್ಯವಿರುವ ಅಗತ್ಯ ದಾಖಲೆಗಳ ಪಟ್ಟಿಯನ್ನು
ಪರಿಶೀಲಿಸಿ.

5.ಚಾಲ್ತಿಯಲ್ಲಿರುವ ನಿಯಮಗಳು ಮತ್ತು ನಿಬಂಧನೆಗಳಿಗೆ ಅನುಸಾರವಾಗಿ ದಾಖಲೆಗಳನ್ನು ಸಲ್ಲಿಸಿ.

6.ಇಷ್ಟಾದ ನಂತರ, ಬ್ಯಾಂಕಿನ ನಿಯಮಗಳಿಗೆ ಅನುಸಾರವಾಗಿ ಬ್ಯಾಂಕ್ ಖಾತೆಯನ್ನು ಪುನಃ ಸಕ್ರಿಯಗೊಳಿಸಲಾಗುತ್ತದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+