ಮೋದಿ ಕುಟುಂಬದ ಬಗ್ಗೆ ಮಾತಾಡಿದ ಕಾಂಗ್ರೆಸ್ಸಿಗರಿಗೆ ಜೇಟ್ಲಿ 3 ಪ್ರಶ್ನೆ
Recommended Video

"ಸಾಧಾರಣ ಕುಟುಂಬದ ಹಿನ್ನೆಲೆಯಿಂದ ಬಂದಿರುವ ಲಕ್ಷಾಂತರ ಪ್ರತಿಭಾವಂತ ಕಾರ್ಯಕರ್ತರು ಕಾಂಗ್ರೆಸ್ ನವರ ನಾಯಕತ್ವ ಪರೀಕ್ಷೆಯಲ್ಲಿ ಫೇಲ್ ಆಗುತ್ತಾರೆ" ಎಂದು ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ಫೇಸ್ ಬುಕ್ ಪೋಸ್ಟ್ ನಲ್ಲಿ ಹಾಕಿದ್ದಾರೆ.
ಇಡೀ ಜಗತ್ತಿಗೆ ರಾಹುಲ್ ಗಾಂಧಿ ಅವರ ತಂದೆ ಯಾರೆಂದು ಗೊತ್ತು. ಆದರೆ ಮೋದಿ ಅವರ ತಂದೆ ಯಾರು ಎಂಬುದು ಯಾರಿಗೂ ಗೊತ್ತಿಲ್ಲ ಎಂದು ರಾಜಸ್ತಾನದ ಚುನಾವಣೆ ಪ್ರಚಾರದ ವೇಳೆ ಕಾಂಗ್ರೆಸ್ ನಾಯಕ ವಿಲಾಸ್ ರಾವ್ ಮುಟ್ಟೆಂವರ್ ನೀಡಿದ್ದ ಹೇಳಿಕೆ ಭಾರೀ ಚರ್ಚೆಗೆ ಕಾರಣವಾಗಿತ್ತು.
ಆ ಹೇಳಿಕೆಗೆ ತಿರುಗೇಟು ನೀಡಿರುವ ಅರುಣ್ ಜೇಟ್ಲಿ, ಕಾಂಗ್ರೆಸ್ ನವರು ಖ್ಯಾತ 'ಕುಟುಂಬದ ಹೆಸರು'ಗಳನ್ನಷ್ಟೇ ರಾಜಕೀಯ ಬ್ರ್ಯಾಂಡ್ ಆಗಿ ಪರಿಗಣಿಸುತ್ತದೆ ಎಂದಿದ್ದಾರೆ.

ಇದೇ ವೇಳೆ ಅರುಣ್ ಜೇಟ್ಲಿ ಮೂರು ಪ್ರಶ್ನೆಗಳನ್ನು ಕೂಡ ಕೇಳಿದ್ದಾರೆ. ಗಾಂಧೀಜಿ ತಂದೆಯ ಹೆಸರೇನು? ಸರ್ದಾರ್ ಪಟೇಲ್ ಅವರ ತಂದೆಯ ಹೆಸರೇನು? ಸರ್ದಾರ್ ಪಟೇಲ್ ಅವರ ಪತ್ನಿಯ ಹೆಸರೇನು? ಎಂದು ಕೇಳಿದ್ದಾರೆ.
ನನಗೆ ಗೊತ್ತಿರುವ ಬಹಳ ಸ್ನೇಹಿತರಿಗೆ ಇದಕ್ಕೆ ಖಚಿತ ಉತ್ತರ ಗೊತ್ತಿಲ್ಲ. ಇದು ಕಾಂಗ್ರೆಸ್ ರಾಜಕಾರಣದ ದುರಂತ ಮತ್ತು ಇದು ದೇಶದ ಮೇಲೆ ಪರಿಣಾಮ ಬೀರಿದೆ.
ದೇಶಕ್ಕೆ ದೊಡ್ಡ ಕೊಡುಗೆ ನೀಡಿದವರನ್ನು ನಿರ್ಲಕ್ಷ್ಯ ಮಾಡಿ, ಒಂದು ಕುಟುಂಬವನ್ನು ಅಧಿಕೃತವಾಗಿ ಗ್ಲಾಮರೈಸ್ ಮಾಡುವುದು ಅವರಿರುವ ಪಕ್ಷ ಹಾಗೂ ದೇಶ ಎರಡಕ್ಕೂ ಅಪಾಯಕಾರಿ. ಪಟೇಲ್, ಸುಭಾಷ್ ಚಂದ್ರ ಬೋಸ್ ರಂಥವರ ಕೊಡುಗೆಗಳ ಬಗ್ಗೆ ಸೂಕ್ತ ಮನ್ನಣೆ ದೊರೆತಿಲ್ಲ. ಒಂದು ಕುಟುಂಬದ ಸದಸ್ಯರನ್ನೇ ಬಹಳ ದೊಡ್ಡದಾಗಿ ಬಿಂಬಿಸಲಾಗಿದೆ ಎಂದಿದ್ದಾರೆ.












Click it and Unblock the Notifications