Narendra Modi: ನರೇಂದ್ರ ಮೋದಿ ಯಾರ ಕಾಲಿಗೆ ಬಿದ್ರು ಗೊತ್ತಾ? ಆ ವ್ಯಕ್ತಿ ಯಾರು?
ನವದೆಹಲಿ, ಜನವರಿ 30: ಫೆಬ್ರವರಿ 5 ರಂದು ದೆಹಲಿ ವಿಧಾನಸಭಾ ಚುನಾವಣೆ ನಡೆಯುತ್ತಿದ್ದು, ಎಲ್ಲಾ ಪಕ್ಷಗಳಂತೆ ಬಿಜೆಪಿ ಕೂಡ ಚುನಾವಣಾ ಪ್ರಚಾರದಲ್ಲಿ ತೊಡಗಿಕೊಂಡಿದೆ. ಬಿಜೆಪಿ ಪರವಾಗಿ ಪ್ರಧಾನಿ ನರೇಂದ್ರ ಮೋದಿ ಬುಧವಾರ ದೆಹಲಿಯ ಕರವಾಲ್ ನಗರದಲ್ಲಿ ರ್ಯಾಲಿ ನಡೆಸಿದರು.
ಈ ವೇಳೆ ಪ್ರಧಾನಿ ಮೋದಿಯವರು ಪತ್ಪರ್ಗಂಜ್ ಬಿಜೆಪಿ ಅಭ್ಯರ್ಥಿ ರವೀಂದರ್ ಸಿಂಗ್ ನೇಗಿ ಅವರ ಪಾದಗಳನ್ನು ಮೂರು ಬಾರಿ ಮುಟ್ಟಿ ನಮಸ್ಕರಿಸಿದ್ದಾರೆ. ಮೊದಲು ರವೀಂದ್ರ ಸಿಂಗ್ ಅವರು ಪ್ರಧಾನಿ ಮೋದಿ ಪಾದಗಳನ್ನು ಮುಟ್ಟಿ ನಮಸ್ಕರಿಸಿದರು, ಮೋದಿ ಅದಕ್ಕೆ ಪ್ರತಿಯಾಗಿ ರವೀಂದ್ರ ಅವರಿಗೂ ನಮಸ್ಕರಿಸಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಅವರು ಕಾಲಿಗೆ ಬಿದ್ದು ನಮಸ್ಕಾರಿಸಿ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಏಕಾಏಕಿ ಪ್ರಧಾನಿ ನರೇಂದ್ರ ಮೋದಿ ಅವರು ರವೀಂದ್ರ ನೇಗಿ ಕಾಲಿಗೆ ಬಿದ್ದಿದ್ದು ಯಾಕೆ? ರವೀಂದ್ರ ನೇಗಿ ಯಾರು ಎಂಬ ಪ್ರಶ್ನೆ ಕಾಡುತ್ತಿದೆ. ರವೀಂದ್ರ ನೇಗಿ ಅವರ ಪಾದಗಳನ್ನು ಪ್ರಧಾನಿ ಮೋದಿ ಮುಟ್ಟಿದಾಗ ಅಲ್ಲಿದ್ದ ಇತರ ನಾಯಕರೂ ಆಶ್ಚರ್ಯಚಕಿತರಾದರು.
ಬಿಜೆಪಿ ಅಭ್ಯರ್ಥಿ ರವೀಂದ್ರ ನೇಗಿ ಮೂಲತಃ ಉತ್ತರಾಖಂಡದವರು. ಅವರು ಪ್ರಸ್ತುತ ದೆಹಲಿ ಮುನ್ಸಿಪಲ್ ಕಾರ್ಪೊರೇಷನ್ ಸದಸ್ಯ ಮತ್ತು ವಿನೋದ್ ನಗರ ವಾರ್ಡ್-198 ರಿಂದ ಕೌನ್ಸಿಲರ್ ಆಗಿದ್ದಾರೆ. ರವೀಂದ್ರ ನೇಗಿ ಆರ್‌ಎಸ್‌ಎಸ್‌ನಲ್ಲೂ ಉತ್ತಮ ಹಿಡಿತ ಹೊಂದಿದ್ದಾರೆ.
ರವೀಂದರ್ ಸಿಂಗ್ ನೇಗಿ ಅವರ ಕಾಲಿಗೆ ಬಿದ್ದ ಬಳಿಕ ಮೋದಿ ಕಾಲಿಗೆ ಬಿದ್ದಿದ್ದನ್ನ ಕಂಡ ಕೆಲವರು ಇದನ್ನು ಪ್ರಧಾನಿಯವರ ವಿನಯ ಎನ್ನುತ್ತಿದ್ದಾರೆ. ಬಿಜೆಪಿ ಅಭ್ಯರ್ಥಿ ರವೀಂದ್ರ ಸಿಂಗ್ ನೇಗಿ ಅವರು ಈ ಬಾರಿ ಪಟ್ಪರ್ಗಂಜ್ ವಿಧಾನಸಭಾ ಕ್ಷೇತ್ರದಿಂದ ಚುನಾವಣೆಗೆ ಸ್ಪರ್ಧಿಸಿದ್ದಾರೆ. ಈ ಬಾರಿ ಆಮ್ ಆದ್ಮಿ ಪಕ್ಷ ಅವಧ್ ಓಜಾ ಅವರನ್ನು ಕಣಕ್ಕಿಳಿಸಿದೆ.
ಬುಧವಾರ ದೆಹಲಿಯ ಕರವಾಲ್ ನಗರದಲ್ಲಿ ರ್ಯಾಲಿ ಸಂದರ್ಭದಲ್ಲಿ ಪ್ರಧಾನಿಯವರು ಆಗಮಿಸಿದ ನಿಮಿತ್ತ, ವಿವಿಧ ವಿಧಾನಸಭಾ ಕ್ಷೇತ್ರಗಳ ಅಭ್ಯರ್ಥಿಗಳೆಲ್ಲರೂ ಕಾರ್ಯಕ್ರಮಕ್ಕೆ ಆಗಮಿಸಿದ್ದರು. ಆಗ ಒಬ್ಬೊಬ್ಬರಾಗಿ ಸ್ಟೇಜ್ ಮೇಲೆ ಬಂದಿದ್ದಾರೆ. ಪ್ರತಿಯೊಬ್ಬರೂ ಪ್ರಧಾನಿ ಮೋದಿಯವರ ಬಳಿ ಬಂದು, ಪರಿಚಯ ಮಾಡಿಕೊಳ್ಳುವ ಜೊತೆಗೆ ಅವರಿಗೆ ಶೇಕ್‌ಹ್ಯಾಂಡ್ ಮಾಡಿದರು.
ಕೆಲವರಿಗೆ ಪ್ರಧಾನಿ ಮೋದಿ ಅವರು ಕೈಮುಗಿದು, ಬೆನ್ನು ತಟ್ಟಿದ್ರು. ಇನ್ನೂ ಪತ್ಪರ್ಗಂಜ್ ಬಿಜೆಪಿ ಅಭ್ಯರ್ಥಿ ರವೀಂದರ್ ಸಿಂಗ್ ನೇಗಿ ಅವರು ಬಾಗಿ, ಪ್ರಧಾನಿ ಮೋದಿಯವರ ಪಾದಗಳನ್ನ ಸ್ಪರ್ಶಿಸಿ ನಮಸ್ಕಾರ ಮಾಡಿದರು. ಅವರ ತೋಳುಗಳನ್ನ ಹಿಡಿದು, ಎತ್ತಿದ ಪ್ರಧಾನಿ ಮೋದಿ ಅವರ ಪಾದಗಳಿಗೆ ಮೂರು ಬಾರಿ ನಮಸ್ಕಾರ ಮಾಡಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರು ಕಾಲಿಗೆ ನಮಸ್ಕಾರಿಸಿರುವುದು ಮೊದಲೇನೂ ಅಲ್ಲ, ಈ ಹಿಂದೆಯೂ ಪ್ರಧಾನಿ ಮೋದಿಯವರು ಹೀಗೆ ಮಾಡಿದ್ದರು. ಯಾರೆಲ್ಲ ತಮ್ಮ ಕಾಲು ಮುಟ್ಟಿಸಿ ನಮಿಸುತ್ತಾರೋ, ಕಾಲಿಗೆ ಬಿದ್ದವರಿಗೆ ಮತ್ತೆ ತಿರುಗಿ ಅವರ ಪಾದ ನಮಸ್ಕಾರಿಸುತ್ತಿದ್ದರು.












Click it and Unblock the Notifications