‘ಜೊಮ್ಯಾಟೊ’ ಕಂಪನಿ ಬಾಸ್ ಹೆಂಡತಿ ಇವರೇನಾ ನೋಡಿ?
ಭಾರತದಲ್ಲಿ ಫುಡ್ ಡೆಲಿವರಿ ಮಾಡೋಕೆ ಮತ್ತೊಂದು ಹೆಸರೇ 'ಜೊಮ್ಯಾಟೊ' ಅಂತಾರೆ. ಯಾಕಂದ್ರೆ 'ಜೊಮ್ಯಾಟೊ' ಕೆಲವೇ ವರ್ಷದಲ್ಲಿ ಸಖತ್ ಹೆಸರು ಗಳಿಸಿದೆ. ಫೇಮಸ್ ಆಗಿ, ಪ್ರತಿಯೊಬ್ಬರಿಗೂ ಪರಿಚಿತವಾಗಿದೆ. ಆದರೆ ಇಂತಿಪ್ಪ 'ಜೊಮ್ಯಾಟೊ' ಕಂಪನಿಯ ಬಾಸ್ ಹೆಂಡತಿ ಯಾರು ಅಂತಾ ಗೊತ್ತಾ? ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ.
'ಜೊಮ್ಯಾಟೊ' ಕಂಪನಿ ಸಿಇಒ ಆಗಿರುವ ದೀಪಿಂದರ್ ಗೋಯಲ್ ಅವ್ರು ಮೆಕ್ಸಿಕನ್ ಮೂಲದ ಮಾಡೆಲ್ ಒಬ್ಬರನ್ನ ಮದುವೆಯಾಗಿದ್ದು. ಇವರು ಕೈ ಹಿಡಿದಿರುವುದು ಗ್ರೀಸಿಯಾ ಮುನೋಝ್ ಎಂಬುವವರನ್ನು ಎಂಬ ಸುದ್ದಿ ಸಿಕ್ಕಾಪಟ್ಟೆ ಸಂಚಲನ ಸೃಷ್ಟಿಸಿದೆ. ಈ ಜೋಡಿಯ ಮದುವೆ ವಿಚಾರ ತಿಳಿಯುತ್ತಿದ್ದಂತೆ ಇಂಟರ್‌ನೆಟ್ ಫುಲ್ ಈ ಮಹಿಳೆಯ ಬಗ್ಗೆ ಸರ್ಚ್ ಮಾಡುವವರ ಸಂಖ್ಯೆಯು ಭಾರಿ ಪ್ರಮಾಣದಲ್ಲಿ ಹೆಚ್ಚಾಗಿದೆ. ಹಾಗಿದ್ರೆ ಯಾರು ಈ ಗ್ರೀಸಿಯಾ ಮುನೋಝ್? ಮಾಡೆಲ್ ಆಗಿರುವ ಗ್ರೀಸಿಯಾ ಅವರ ಹಿನ್ನೆಲೆ ಏನು? ಸಂಪೂರ್ಣ ಮಾಹಿತಿಗಾಗಿ, ಮುಂದೆ ಓದಿ.

'ಜೊಮ್ಯಾಟೊ' ಬಾಸ್ ಹೆಂಡತಿ?
ಅಂದಹಾಗೆ ಮೊದಲೇ ಹೇಳಿರುವಂತೆ ಮೆಕ್ಸಿಕನ್ ಮೂಲದ ಈ ಮಾಡೆಲ್ ಗ್ರೀಸಿಯಾ, ಎರಡು ತಿಂಗಳ ಹಿಂದೆಯೇ ದೀಪಿಂದರ್ ಅವರನ್ನು ಮದುವೆ ಆಗಿದ್ದರು ಎಂಬ ಸುದ್ದಿ ಹಬ್ಬಿದೆ. ಹೀಗೆ ಇವರು ಮದುವೆ ವಿಚಾರವನ್ನ ಬಹಿರಂಗ ಮಾಡಿರಲಿಲ್ಲ. ಮದುವೆ ಬಗ್ಗೆ ಹಾಗೂ ಹೆಂಡತಿ ಬಗ್ಗೆ ದೀಪಿಂದರ್ ಕೂಡ ಎಲ್ಲಿಯೂ ಮಾಹಿತಿ ಹಂಚಿಕೊಂಡಿರಲಿಲ್ಲ ಎಂಬ ಮಾತುಗಳು ಕೂಡ ಈಗ ಹರಿದಾಡುತ್ತಿವೆ. ಈ ವಿಚಾರ ಗೊತ್ತಾಗುತ್ತಿದ್ದಂತೆ ಹಲ್‌ಚಲ್ ಎದ್ದಿದ್ದು, ಜನ ಕೂಡ ಸಿಕ್ಕಾಪಟ್ಟೆ ಸರ್ಚಿಂಗ್ ಮಾಡುತ್ತಿದ್ದಾರೆ. ಮೆಕ್ಸಿಕೋ ಮೂಲದ ಚಲುವೆ ಈಗ ಭಾರತದ ಸೊಸೆಯಾಗಿದ್ದು, ಜಗತ್ತಿನಾದ್ಯಂತ ಗ್ರೀಸಿಯಾ ಬಗ್ಗೆ ಜನರು ಕೂತುಹಲದ ಚರ್ಚೆ ಆರಂಭಿಸಿದ್ದಾರೆ. ಆದರೆ ಈ ಬಗ್ಗೆ 'ಜೊಮ್ಯಾಟೊ' ಸಿಇಒ ಆಗಲಿ ಅಥವಾ ಗ್ರೀಸಿಯಾ ಆಗಲಿ ಅಧಿಕೃವಾಗಿ ಯಾವುದೇ ಮಾಹಿತಿ ನೀಡಿಲ್ಲ.
ಸೂಪರ್ ಮಾಡೆಲ್ ಇಂಡಿಯನ್ ಸೊಸೆ?
ಸಾಮಾಜಿಕ ಜಾಲತಾಣಗಳಲ್ಲಿ ತಮ್ಮನ್ನು ಟೆಲಿವಿಷನ್ ಹೋಸ್ಟ್ ಎಂದು ಹೇಳಿಕೊಂಡಿದ್ದಾರೆ, ಗ್ರೀಸಿಯಾ ಅವರು. ಅಲ್ಲದೆ ದೆಹಲಿಯಲ್ಲಿ ಸುತ್ತಾಡಿ ಪ್ರಸಿದ್ಧ ಪ್ರವಾಸಿ ತಾಣಗಳ ಬಳಿ ಫೋಟೋ ತೆಗೆಸಿಕೊಂಡು ಶೇರ್ ಮಾಡಿದ್ದಾರೆ. ಇನ್ನು ಇದರ ಜೊತೆ 2022ರಲ್ಲಿ ಅಮೆರಿಕದಲ್ಲಿ ನಡೆದಿದ್ದ ಮೆಟ್ರೊಪಾಲಿಟನ್ ಫ್ಯಾಷನ್ ವೀಕ್ ಸ್ಪರ್ಧೆಯಲ್ಲಿ ಬಹುಮಾನ ಗೆದ್ದಿದ್ದರು. ಹೀಗೆ ಎಲ್ಲೆಲ್ಲೂ ಹವಾ ಎಬ್ಬಿಸಿರುವ ಗ್ರೀಸಿಯಾ ಇದೀಗ 'ಜೊಮ್ಯಾಟೊ' ಕಂಪನಿ ಸಿಇಒ ಆಗಿರುವ ದೀಪಿಂದರ್ ಗೋಯಲ್ ಅವರನ್ನ ಮದುವೆ ಆಗಿದ್ದಾರೆ ಎಂಬ ಸುದ್ದಿ ಹಬ್ಬಿದೆ. ಈ ಮೂಲಕ ಮತ್ತಷ್ಟು ಸದ್ದು ಮಾಡ್ತಿದ್ದಾರೆ, ಆದರೆ ಈ ಬಗ್ಗೆ ಅಧಿಕೃತ ಮಾಹಿತಿ ಇನ್ನೂ ಹೊರಬಿದ್ದಿಲ್ಲ.
ಜೊಮ್ಯಾಟೋ ಬಾಸ್ ಯಾರು?
ಇನ್ನು ಗುರುಗ್ರಾಮ ಮೂಲದ 'ಜೊಮ್ಯಾಟೊ' ಕಂಪನಿ ಸಿಇಒ ದೀಪಿಂದರ್ ಗೋಯಲ್ 2008 ರಲ್ಲಿ ಕಂಪನಿಯಲ್ಲಿನ ಕೆಲಸ ಬಿಟ್ಟ ನಂತರ ತಮ್ಮ ಗೆಳೆಯರೊಂದಿಗೆ ಸೇರಿ ಫುಡ್ ಡೆಲಿವರಿ ಸಂಸ್ಥೆ ಜೊಮ್ಯಾಟೊ ಸ್ಥಾಪಿಸಿದರು. ಇತ್ತೀಚೆಗೆ ಇದೇ ದೀಪಿಂದರ್ ಗೋಯಲ್ ಸಸ್ಯಹಾರಿಗಳಿಗೆ ಅಂತಾ ಜೊಮ್ಯಾಟೊ ಪ್ಯುರ್ ವೆಜ್ ಮೋಡ್ ಎಂಬ ಪ್ರತ್ಯೇಕ ಹಸಿರು ಸಮವಸ್ತ ಹಾಗೂ ಬ್ಯಾಗ್‌ನ ತರುವ ಯೋಜನೆ ಬಗ್ಗೆ ಮಾತನಾಡಿದ್ದರು. ಆ ನಂತರ ಈ ಯೋಜನೆ ದೊಡ್ಡ ಚರ್ಚೆಗೆ ಗ್ರಾಸವಾಗಿ, ಸಿಕ್ಕಾಪಟ್ಟೆ ಹಿನ್ನಡೆ ಅನುಭವಿಸಿದ್ದ ದೀಪಿಂದರ್ ಯೋಜನೆಯ ಹಿಂದಕ್ಕೆ ತೆಗೆದುಕೊಂಡಿದ್ದರು. ಆಗಲೂ ದೀಪಿಂದರ್ ಸಿಕ್ಕಾಪಟ್ಟೆ ಸದ್ದು ಮಾಡಿದ್ದರು.
ಒಟ್ನಲ್ಲಿ ಶ್ರೀಮಂತರು ಏನೇ ಮಾಡಿದರೂ ಅದು ದೊಡ್ಡ ಸುದ್ದಿಯಾಗುತ್ತದೆ ಅನ್ನೋದಕ್ಕೆ, 'ಜೊಮ್ಯಾಟೊ' ಕಂಪನಿ ಸಿಇಒ ದೀಪಿಂದರ್ ಗೋಯಲ್ ಅವರು ಮತ್ತೊಂದು ಉದಾಹರಣೆ ಎನ್ನಬಹುದು. ಇಷ್ಟುದಿನ ತಮ್ಮ ವ್ಯಾವಹಾರಿಕ ಜೀವನದ ಮೂಲಕ ಸುದ್ದಿಯಲ್ಲಿ ಇರುತ್ತಿದ್ದ ಜೊಮ್ಯಾಟೊ ಸಿಇಒ ದೀಪಿಂದರ್ ಗೋಯಲ್, ಇದೀಗ ತಮ್ಮ ವೈಯಕ್ತಿಕ ವಿಚಾರದಲ್ಲಿಯೂ ಸದ್ದು ಮಾಡುತ್ತಿದ್ದಾರೆ.












Click it and Unblock the Notifications